ತಿರುಪತಿ ದೇವಾಲಯಕ್ಕೆ ತಮನ್ನಾ ಭೇಟಿ: ‘ವರ್ಷಗಳಿಂದಲೂ ಬರ್ತಿದ್ದೇನೆ ಇಂಥ ಅನುಭವ ಎಂದೂ ಆಗಿಲ್ಲ’

ತಮನ್ನಾ ಭಾಟಿಯಾ ಈಗಲೂ ಬೇಡಿಕೆಯಲ್ಲಿರುವ ನಟಿ. ‘ವಯಸ್ಸು ಕೇವಲ ಸಂಖ್ಯೆ ಮಾತ್ರ’ ಎಂಬುದು ತಮನ್ನಾಗೆ ಸರಿಯಾಗಿ ಹೊಂದಿಕೆ ಆಗುತ್ತದೆ. ಈಗಲೂ ಸಹ ಯುವನಟಿಯರನ್ನು ನಾಚಿಸುವಂಥ ಗ್ಲಾಮರ್​ ಅನ್ನು ಪರದೆಯ ಮೇಲೆ ತರಬಲ್ಲ ಈ ನಟಿ ಸಿನಿಮಾದ ಹೊರಗೆ ಮಹಾ ದೈವಭಕ್ತೆ. ದೇವಸ್ಥಾನಗಳಿಗೆ ಆಗಾಗ್ಗೆ ಭೇಟಿ ನೀಡುತ್ತಲೇ ಇರುತ್ತಾರೆ. ನಟಿ ತಮನ್ನಾ ತಿರುಮಲ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದರು.

ತಿರುಪತಿ ದೇವಾಲಯಕ್ಕೆ ತಮನ್ನಾ ಭೇಟಿ: ‘ವರ್ಷಗಳಿಂದಲೂ ಬರ್ತಿದ್ದೇನೆ ಇಂಥ ಅನುಭವ ಎಂದೂ ಆಗಿಲ್ಲ’
Tamannah Bhatia

Updated on: Oct 07, 2026 | 3:54 PM

ಮುಖ್ಯಾಂಶಗಳು

  • ತಮನ್ನಾ ಭಾಟಿಯಾ ಸ್ಟಾರ್ ಪ್ಯಾನ್ ಇಂಡಿಯಾ ನಟಿ
  • ತಿರುಪತಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿದ್ದರು ತಮನ್ನಾ
  • ಈ ವೇಳೆ ತಮಗಾದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.

ತಮನ್ನಾ ಭಾಟಿಯಾ ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ತಮನ್ನಾ ಜೊತೆಗೇ ಚಿತ್ರರಂಗಕ್ಕೆ ಬಂದ ಹಲವು ನಟಿಯರು ನಿವೃತ್ತಿ ಪಡೆದುಬಿಟ್ಟಿದ್ದಾರೆ. ಆದರೆ ತಮನ್ನಾ ಭಾಟಿಯಾ ಈಗಲೂ ಬೇಡಿಕೆಯಲ್ಲಿರುವ ನಟಿ. ‘ವಯಸ್ಸು ಕೇವಲ ಸಂಖ್ಯೆ ಮಾತ್ರ’ ಎಂಬುದು ತಮನ್ನಾಗೆ ಸರಿಯಾಗಿ ಹೊಂದಿಕೆ ಆಗುತ್ತದೆ. ಈಗಲೂ ಸಹ ಯುವನಟಿಯರನ್ನು ನಾಚಿಸುವಂಥ ಗ್ಲಾಮರ್​ ಅನ್ನು ಪರದೆಯ ಮೇಲೆ ತರಬಲ್ಲ ಈ ನಟಿ ಸಿನಿಮಾದ ಹೊರಗೆ ಮಹಾ ದೈವಭಕ್ತೆ. ದೇವಸ್ಥಾನಗಳಿಗೆ ಆಗಾಗ್ಗೆ ಭೇಟಿ ನೀಡುತ್ತಲೇ ಇರುತ್ತಾರೆ. ನಟಿ ತಮನ್ನಾ ತಿರುಮಲ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದರು.

ಇಂದು (ಬುಧವಾರ) ಕುಟುಂಬ ಸಮೇತ ತಿರುಮಲೆಗೆ ತೆರಳಿದ ಈ ಜನಪ್ರಿಯ ನಟಿ, ಸುಪ್ರಭಾತ ಸೇವೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ದೇವರ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ದೇವರ ದರ್ಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ, ‘ಚಿಕ್ಕ ವಯಸ್ಸಿನಿಂದಲೂ ತಿರುಪತಿ ದೇವಾಲಯಕ್ಕೆ ಬರುತ್ತಿದ್ದೇನೆ, ಆದರೆ ಈ ಬಾರಿ ಆದಂಥ ಅನುಭವ ಎಂದಿಗೂ ಆಗಿರಲಿಲ್ಲ’ ಎಂದಿದ್ದಾರೆ.

‘ಬಹಳ ದಿನಗಳ ಬಳಿಕ ಇಲ್ಲಿಗೆ (ತಿರುಪತಿ) ಬಂದಿದ್ದೇನೆ ಮತ್ತು ದೇವರ ದರ್ಶನ ಅತ್ಯಂತ ಅದ್ಭುತವಾಗಿ ನೆರವೇರಿದೆ. ಲೋಕ ಕಲ್ಯಾಣಕ್ಕಾಗಿ ಹಾಗೂ ಎಲ್ಲರ ಒಳಿತಿಗಾಗಿ ನಾನು ದೇವರಲ್ಲಿ ಪ್ರಾರ್ಥಿಸಿದ್ದೇನೆ. ಇಲ್ಲಿಗೆ ಬಂದಾಗಲೆಲ್ಲಾ ಮನಸ್ಸಿಗೆ ಅತೀವವಾದ ಆನಂದ ಮತ್ತು ನೆಮ್ಮದಿ ಸಿಗುತ್ತದೆ. ನಾನು ನಿಜಕ್ಕೂ ಬಹಳ ಅದೃಷ್ಟವಂತೆ ಎಂದು ಭಾವಿಸುತ್ತೇನೆ. ಚಿಕ್ಕಂದಿನಿಂದಲೂ ತಿರುಮಲಕ್ಕೆ ಬರುತ್ತಿದ್ದರೂ, ಇಂದಿನ ಈ ವಿಶೇಷ ದರ್ಶನದಂತಹ ಅನುಭವ ಹಿಂದೆಂದೂ ಆಗಿರಲಿಲ್ಲ. ಇಲ್ಲಿಯ ಪ್ರಶಾಂತ ವಾತಾವರಣ ತಮಗೆ ಅಪಾರ ಮನಸ್ಸಿನ ಶಾಂತಿ ಹಾಗೂ ಸಂತೋಷವನ್ನು ತಂದಿದೆ’ ಎಂದು ತಮನ್ನಾ ಭಾವುಕರಾಗಿ ನುಡಿದ್ದಾರೆ.

ಇದನ್ನೂ ಓದಿ:ನಿಂತು ಹೋಯ್ತೆ ತಮನ್ನಾ ಭಾಟಿಯಾ ಸಿನಿಮಾ? ‘ವಿ ಶಾಂತಾರಾಮ್’ ಕತೆ ಏನಾಯ್ತು?

ತಮನ್ನಾ ಭಾಟಿಯಾ ಅವರು ದೇವಾಲಯಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇಶಾ ಫೌಂಡೇಶನ್​​ಗೂ ಸಹ ಭೇಟಿ ನೀಡುತ್ತಿರುತ್ತಾರೆ. ಲಿಂಗ ಭೈರವೀ ದೇವಿಯ ಆರಾಧಕಿ ತಾವು ಎಂದು ತಮನ್ನಾ ಭಾಟಿಯಾ ಹೇಳಿಕೊಂಡಿದ್ದರು. ಇತ್ತೀಚೆಗಷ್ಟೆ ತಮನ್ನಾ ಭಾಟಿಯಾ ನಟಿಸಿದ್ದ ‘ವವಾನ್’ ಹೆಸರಿನ ಹಾರರ್ ಸಿನಿಮಾ ರಿಲೀಸ್ ಆಗಿದ್ದು, ಸಿನಿಮಾನಲ್ಲಿ ಹಳೆಯ ಸಂಪ್ರದಾಯವೊಂದರ ಬಗ್ಗೆ ಕತೆ ಇದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ಸದ್ಯ ನಟಿ ತಮನ್ನಾ, ತಿರುಮಲಕ್ಕೆ ಭೇಟಿ ನೀಡಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ತೆಲುಗಿನಲ್ಲಿ ಕೊನೆಯದಾಗಿ ‘ಒದೆಲ 2’ ಚಿತ್ರದಲ್ಲಿ ನಟಿಸಿದ್ದ ಅವರು, ಪ್ರಸ್ತುತ ಬಾಲಿವುಡ್​​ನ ಹಲವು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us