Manobala: 450ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ಕಲಾವಿದ ಮನೋಬಾಲ ನಿಧನ

|

Updated on: May 03, 2023 | 3:12 PM

Manobala Death: 35 ವರ್ಷಗಳಿಗೂ ಹೆಚ್ಚು ಕಾಲ ಬಣ್ಣದ ಲೋಕದಲ್ಲಿ ಮನೋಬಾಲ ಅವರು ಸಕ್ರಿಯರಾಗಿದ್ದರು. ಅನಾರೋಗ್ಯದಿಂದ ಅವರು ಮೃತಪಟ್ಟಿದ್ದಾರೆ.

Manobala: 450ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ಕಲಾವಿದ ಮನೋಬಾಲ ನಿಧನ
ಮನೋಬಾಲ
Follow us on

ತಮಿಳು ಚಿತ್ರರಂಗಕ್ಕೆ ಕಹಿ ಸುದ್ದಿ ಕೇಳಿಬಂದಿದೆ. ಕಾಲಿವುಡ್​ನಲ್ಲಿ ಫೇಮಸ್​ ಆಗಿದ್ದ ಹಿರಿಯ ನಟ, ನಿರ್ದೇಶಕ ಮನೋಬಾಲ (Manobala) ಅವರು ಇಹಲೋಕ ತ್ಯಹಿಸಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಕೆಲವು ತಿಂಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಲಿವರ್​ ಸಂಬಂಧಿತ ಸಮಸ್ಯೆಯಿಂದ (Liver Problem) ಬಳಲುತ್ತಿದ್ದ ಮನೋಬಾಲ ಅವರು ಇಂದು (ಮೇ 3) ಕೊನೆಯುಸಿರು ಎಳೆದಿದ್ದಾರೆ. ಅವರ ನಿಧನಕ್ಕೆ (Manobala Death) ತಮಿಳು ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ಮೂರೂವರೆ ದಶಕಕ್ಕೂ ಹೆಚ್ಚು ಕಾಲ ಬಣ್ಣದ ಲೋಕದಲ್ಲಿ ಮನೋಬಾಲ ಅವರು ಸಕ್ರಿಯರಾಗಿದ್ದರು. ಈ ಸುದೀರ್ಘ ಪಯಣದಲ್ಲಿ ಅವರು 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡು ಕಾಲಿವುಡ್​ ಬಡವಾಗಿದೆ. ಅಭಿಮಾನಿಗಳ ಜೊತೆಯಲ್ಲಿ ಅನೇಕ ಸೆಲೆಬ್ರಿಟಿಗಳು ಕೂಡ ಮನೋಬಾಲ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಚೆನ್ನೈನ ತಮ್ಮ ನಿವಾಸದಲ್ಲಿ ಮನೋಬಾಲ ಅವರು ನಿಧನರಾದರು. ಎಲ್​ವಿ ಪ್ರಸಾದ್​ ರಸ್ತೆಯ ಸಾಲಿಗ್ರಾಮಂನಲ್ಲಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಮನೋಬಾಲ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಅವರ ಟ್ವಿಟರ್​ ಖಾತೆಯನ್ನು 15 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಇದನ್ನೂ ಓದಿ
Pradeep Sarkar Death: ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ನಿರ್ದೇಶಕ ಪ್ರದೀಪ್ ಸರ್ಕಾರ್ ನಿಧನ
Sameer Khakhar: ಹಿರಿಯ ನಟ ಸಮೀರ್ ಖಕ್ಕಡ್ ನಿಧನ, ಗಣ್ಯರ ಅಶ್ರುತರ್ಪಣ
Snehalata Dixit: ಮಾಧುರಿ ದೀಕ್ಷಿತ್​ ತಾಯಿ ಸ್ನೇಹಲತಾ ನಿಧನ; 91ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಹಿರಿಯ ಜೀವ
Subi Suresh Death: ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್​ ನಿಧನ; ಪ್ರಾಣಕ್ಕೆ ಮುಳುವಾಯ್ತು ಲಿವರ್​ ಸಮಸ್ಯೆ

1979ರಲ್ಲಿ ಮನೋಬಾಲ ಅವರು ನಟನೆ ಆರಂಭಿಸಿದರು. ಹಲವು ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಅವರು ಫೇಮಸ್​ ಆದರು. ಅವರು ಮಾಡುತ್ತಿದ್ದ ಕಾಮಿಡಿ ಪಾತ್ರಗಳು ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾದವು. ನಟನೆ ಜೊತೆಗೆ ನಿರ್ದೇಶನದಲ್ಲೂ ಅವರು ಆಸಕ್ತಿ ಬೆಳೆಸಿಕೊಂಡರು. 25ಕ್ಕೂ ಅಧಿಕ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದರು. ಮನೋಬಾಲ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ಕಾಜಲ್​ ಅಗರ್​ವಾಲ್​ ನಟನೆಯ ‘ಘೋಸ್ಟಿ’ ಸಿನಿಮಾದಲ್ಲಿ.

ಇದನ್ನೂ ಓದಿ: ಮಲಯಾಳಂ ಚಿತ್ರರಂಗದ ಹಿರಿಯ ನಟ ಮಾಮುಕೋಯಾ ನಿಧನ

ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ಮನೋಬಾಲ ಅವರು ಫೇಮಸ್​ ಆಗಿದ್ದರು. ನಟನೆಯ ಜೊತೆಗೆ ಕೆಲವು ಧಾರಾವಾಹಿಗಳಿಗೆ ಅವರು ನಿರ್ದೇಶನ ಮಾಡಿದ್ದರು. ‘ಕುಕು ವಿತ್​ ಕೋಮಾಲಿ’ ಶೋನಲ್ಲಿ ಅವರು ಸ್ಪರ್ಧಿಸಿದ್ದರು. ಇಷ್ಟೆಲ್ಲ ಆ್ಯಕ್ಟೀವ್ ಆಗಿದ್ದ ಮನೋಬಾಲ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು ನೋವಿನ ಸಂಗತಿ. ಹಲವು ತಿಂಗಳ ಬಳಿಕ ಚಿಕಿತ್ಸೆ ಫಲಕಾರಿ ಆಗದೇ ಅವರು ಇಹಲೋಕ ತ್ಯಜಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:33 pm, Wed, 3 May 23