ತಮಿಳು ನಟ ಸೂರ್ಯ (Suriya) ಹಾಗೂ ಬಾಲಿವುಡ್ ನಟಿ ಕಾಜೋಲ್ಗೆ (Kajol) ವಿಶೇಷ ಗೌರವ ದೊರೆತಿದೆ. ಆಸ್ಕರ್ ಸಮಿತಿಯಲ್ಲಿ (Oscars Committee ) ಇವರಿಬ್ಬರಿಗೆ ಸ್ಥಾನ ಸಿಕ್ಕಿದ್ದು, ಫ್ಯಾನ್ಸ್ ಖುಷಿಪಟ್ಟಿದ್ದಾರೆ. ವಿಶ್ವಾದ್ಯಂತ 397 ಸಿನಿಮಾ ಮಂದಿಗೆ ಆಮಂತ್ರಣ ನೀಡಲಾಗಿದ್ದು, ಆ ಪಟ್ಟಿಯಲ್ಲಿ ಸೂರ್ಯ ಹಾಗೂ ಕಾಜೋಲ್ ಕೂಡ ಇದ್ದಾರೆ ಅನ್ನೋದು ಹೆಮ್ಮೆಯ ವಿಚಾರ. ‘ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆ್ಯಂಡ್ ಸೈನ್ಸ್’ ಸೋಶಿಯಲ್ ಮೀಡಿಯಾದಲ್ಲಿ 397 ಜನರ ಹೆಸರನ್ನು ಬಿಡುಗಡೆ ಮಾಡಿದೆ.
ಸೂರ್ಯ ನಟನೆಯ ‘ಸೂರರೈ ಪೊಟ್ರು’ ಹಾಗೂ ‘ಜೈ ಭೀಮ್’ ಚಿತ್ರಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದವು. ಈ ಸಿನಿಮಾಗಳಿಂದ ಅವರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡರು. ಈ ಹಿನ್ನೆಲೆಯಲ್ಲಿ ಆಸ್ಕರ್ ಸಮಿತಿಗೆ ಅವರನ್ನು ಆಮಂತ್ರಿಸಲಾಗಿದೆ. ಆಸ್ಕರ್ ಸಮಿತಿಯಲ್ಲಿ ಸ್ಥಾನ ಪಡೆಯುತ್ತಿರುವ ಮೊದಲ ದಕ್ಷಿಣ ಭಾರತದ ನಟ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.
ಟ್ವಿಟರ್ ಖಾತೆಯಲ್ಲಿ ಅಕಾಡೆಮಿಯವರು ಈ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. 397ರಲ್ಲಿ 71 ಸದಸ್ಯರು ಆಸ್ಕರ್ ನಾಮಿನಿಗಳಾಗಿದ್ದು, 15 ಮಂದಿ ವಿಜೇತರು ಇದ್ದಾರೆ. ಒಟ್ಟೂ ಸಂಖ್ಯೆಯಲ್ಲಿ ಶೇ.37 ಮಹಿಳೆಯರಿದ್ದಾರೆ. ಇದರ ಜತೆಗೆ ಬಾಲಿವುಡ್ ನಟಿ, ಅಜಯ್ ದೇವಗನ್ ಪತ್ನಿ ಕಾಜೋಲ್, ನಿರ್ದೇಶಕಿ ರೀಮಾ ಕಗ್ತಿ ಕೂಡ ಆಸ್ಕರ್ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ಸೂರ್ಯ ಅವರು ಶೀಘ್ರವೇ ನಿರ್ಮಾಪಕನಾಗಿ ಬಾಲಿವುಡ್ಗೆ ಕಾಲಿಡಲಿದ್ದಾರೆ. 2ಡಿ ಎಂಟರ್ಟೇನ್ಮೆಂಟ್ ಮೂಲಕ ಅವರು ‘ಸೂರರೈ ಪೊಟ್ರು’ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ಭೂಮಿ ಪಡ್ನೇಕರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೂರ್ಯ ಅವರು ಹಿಂದಿ ರಿಮೇಕ್ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊವಿಡ್ ಇದ್ದ ಕಾರಣ ತಮಿಳಿನ ‘ಸೂರರೈ ಪೊಟ್ರು’ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿತ್ತು.
It’s time to announce our new members! Meet the Class of 2022. https://t.co/BIpkeYpGPV
— The Academy (@TheAcademy) June 28, 2022
‘ಸೂರರೈ ಪೊಟ್ರು’ ಸಿನಿಮಾ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ಜೀವನ ಕಥೆಯನ್ನು ಆಧರಿಸಿದೆ. ಗೋಪಿನಾಥ್ ಅವರು ಏರ್ ಡೆಕ್ಕನ್ ಸಂಸ್ಥೆಯನ್ನು ಆರಂಭಿಸಿದ್ದರು. ಸಾಮಾನ್ಯರಿಗೂ ವಿಮಾನಯಾನ ಕಡಿಮೆ ದರದಲ್ಲಿ ಆಗಬೇಕು ಎಂಬುದು ಅವರ ಕನಸಾಗಿತ್ತು.
ಇದನ್ನೂ ಓದಿ: ಕನ್ನಡಿಗನ ಕಥೆಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್? ಅಕ್ಕಿ ಪಾಲಿಗೆ ಮತ್ತೊಂದು ಬಯೋಪಿಕ್
Akshay Kumar: ಅಭಿಮಾನಿಗಳಲ್ಲಿ ಸಿನಿಮಾ ಟೈಟಲ್ ಸೂಚಿಸಿ ಎಂದ ಅಕ್ಷಯ್ ಕುಮಾರ್; ಯಾವ ಚಿತ್ರಕ್ಕೆ?
Published On - 4:37 pm, Wed, 29 June 22