ಭಾರತದ ಹೊಸ ‘ನ್ಯಾಷನಲ್ ಕ್ರಶ್’ ತಾನಿಯಾ ಮಿಶ್ರ; ಇಲ್ಲಿದೆ ಹಿನ್ನೆಲೆ

Tanya Mishra National Crush: ಮಾಡೆಲ್ ಹಾಗೂ ನಟಿ ತಾನಿಯಾ ಮಿಶ್ರ ತಮ್ಮ ಗ್ಲಾಮರಸ್ ಫೋಟೋಗಳಿಂದ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. 'ಗಜ್ನವಿ' ಹಾಗೂ 'ಚೇಸ್' ಚಿತ್ರಗಳಲ್ಲಿ ನಟಿಸಿರುವ ಇವರನ್ನು ಭಾರತದ ಹೊಸ 'ನ್ಯಾಷನಲ್ ಕ್ರಷ್' ಎಂದು ಅಭಿಮಾನಿಗಳು ಕರೆಯುತ್ತಿದ್ದಾರೆ. ಬಿಹಾರದಿಂದ ಬಂದ ಈ ಬೆಡಗಿಯ ಕರಿಯರ್ ಹಾಗೂ ನಟನಾ ಪಯಣ ಇಲ್ಲಿದೆ.

ಭಾರತದ ಹೊಸ ನ್ಯಾಷನಲ್ ಕ್ರಶ್ ತಾನಿಯಾ ಮಿಶ್ರ; ಇಲ್ಲಿದೆ ಹಿನ್ನೆಲೆ
ತಾನಿಯಾ ಮಿಶ್ರ
Edited By:

Updated on: Sep 28, 2026 | 11:32 AM

ಮುಖ್ಯಾಂಶಗಳು

  • ಇಂಟರ್ನೆಟ್‌ನಲ್ಲಿ ತಾನಿಯಾ ಮಿಶ್ರಾ ಹವಾ
  • 'ನ್ಯಾಷನಲ್ ಕ್ರಷ್' ಪಟ್ಟ ನೀಡಿದ ಅಭಿಮಾನಿಗಳು
  • ಮಾಡೆಲಿಂಗ್‌ನಿಂದ ನಟನೆಯತ್ತ ಪಯಣ

ಬಾಲಿವುಡ್ ಹಾಗೂ ಮಾಡೆಲಿಂಗ್ ಲೋಕದಲ್ಲಿ ತಾನಿಯಾ ಮಿಶ್ರ ಹೆಸರು ಈಗ ಸಖತ್ ಸದ್ದು ಮಾಡುತ್ತಿದೆ. ತಮ್ಮ ಆಕರ್ಷಕ ಫೋಟೋಶೂಟ್ ಹಾಗೂ ಸೌಂದರ್ಯದಿಂದ ಅವರು ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ದಿಮ್ರಿ ಅವರಂತೆ ತಾನಿಯಾ ಕೂಡ ಭಾರತದ ಹೊಸ ‘ನ್ಯಾಷನಲ್ ಕ್ರಶ್’ ಎಂದು ಅಭಿಮಾನಿಗಳು ಕರೆಯುತ್ತಿದ್ದಾರೆ. ಅವರ ಗ್ಲಾಮರ್ ಲುಕ್ ವೀಕ್ಷಕರನ್ನು ಮೋಡಿ ಮಾಡಿದೆ.

ತಾನಿಯಾ ಮಿಶ್ರ ಮೂಲತಃ ಬಿಹಾರದ ಗಯಾ ಮೂಲದವರಾಗಿದ್ದಾರೆ. ಅವರು ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಮಗಧ ವಿಶ್ವವಿದ್ಯಾಲಯದಿಂದ ಬಿ.ಕಾಮ್ ಪದವಿ ಪಡೆದಿರುವ ಇವರು ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಫಿಲ್ಮ್‌ಫೇರ್, ಫೆಮಿನಾ ಮತ್ತು ಗೇಜಿಯಾ ನಿಯತಕಾಲಿಕೆಗಳ ಕವರ್ ಪೇಜ್‌ಗಳಲ್ಲಿ ಕಾಣಿಸಿಕೊಂಡು ಅವರು ಸೈ ಎನಿಸಿಕೊಂಡಿದ್ದಾರೆ. ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 12 ಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ.

ಸೌಂದರ್ಯ ಸ್ಪರ್ಧೆಗಳಲ್ಲೂ ಮಿಂಚಿರುವ ತಾನಿಯಾ 2019ರ ‘ಐಎಡಬ್ಲ್ಯೂಎ ಮಿಸ್ ಇಂಡಿಯಾ’ ಸ್ಪರ್ಧೆಯಲ್ಲಿ ನಾಲ್ಕನೇ ರನ್ನರ್ ಅಪ್ ಆಗಿದ್ದರು. ಫೆಮಿನಾ ಅಚೀವರ್ಸ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಮಾಡೆಲಿಂಗ್ ಜೊತೆಗೆ ನಟನೆಯಲ್ಲೂ ಅವರು ತಮ್ಮ ಅದೃಷ್ಟ ಪರೀಕ್ಷಿಸಿಕೊಂಡಿದ್ದಾರೆ. ಗ್ಲಾಮರ್ ಜಗತ್ತಿನಲ್ಲಿ ತಮ್ಮದೇ ಆದ ಜಾಗ ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಸಿನಿಮಾ ರಂಗದಲ್ಲೂ ತಾನಿಯಾ ತಮ್ಮ ಛಾಪು ಮೂಡಿಸಿದ್ದಾರೆ. ‘ಗಜ್ನವಿ’ ಹಾಗೂ ‘ಚೇಸ್’ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ‘ಚೇಸ್’ ಚಿತ್ರದಲ್ಲಿ ಸಿಬಿಐ ಇನ್ಸ್‌ಪೆಕ್ಟರ್ ಪಾತ್ರ ಮಾಡುವ ಮೂಲಕ ನಟನಾ ಸಾಮರ್ಥ್ಯ ನಿರೂಪಿಸಿದ್ದಾರೆ. ಇದರ ಜೊತೆಗೆ ಜಾಕಿ ಶ್ರಾಫ್ ಅವರ ‘ಚಿಡಿಯಾ ಉಡ್’ ವೆಬ್ ಸೀರೀಸ್‌ನಲ್ಲೂ ಮತ್ತು ಹಲವಾರು ಮ್ಯೂಸಿಕ್ ವೀಡಿಯೋಗಳಲ್ಲೂ ನಟಿಸಿದ್ದಾರೆ.

ಇದನ್ನೂ ಓದಿ: ವೇದಿಕೆ ಮೇಲೆ F ಪದ ಬಳಕೆ ಮಾಡಿದ ರಶ್ಮಿಕಾ ಮಂದಣ್ಣ; ವೇದಿಕೆಯಲ್ಲೇ ಕ್ಷಮೆ ಕೇಳಿದ ನ್ಯಾಷನಲ್ ಕ್ರಶ್

ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗ್ಲಾಮರಸ್ ಫೋಟೋಗಳು ಅವರಿಗೆ ಅಪಾರ ಅಭಿಮಾನಿಗಳನ್ನು ತಂದುಕೊಟ್ಟಿವೆ. ಪ್ರಮುಖ ಬ್ಯಾನರ್‌ ಸಿನಿಮಾವೊಂದರಲ್ಲಿ ಅವರು ನಟಿಸಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಬಿಹಾರದಿಂದ ಬಂದ ಈ ಬೆಡಗಿ ಬಾಲಿವುಡ್ ಅಂಗಳದಲ್ಲಿ ಭವಿಷ್ಯದ ಭರವಸೆಯ ನಟಿಯಾಗಿ ಬೆಳೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 11:02 am, Mon, 28 September 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us