ಸತತ ಒಂದು ತಿಂಗಳ ಚಿಕಿತ್ಸೆ ವಿಫಲ; ಕೊವಿಡ್ಗೆ ಬಲಿಯಾದ ಖ್ಯಾತ ಗಾಯಕಿ
ತಪು ಅವರಿಗೆ ಕಳೆದ ತಿಂಗಳ ಹಿಂದೆ ಕೊವಿಡ್ ಕಾಣಿಸಿಕೊಂಡಿತ್ತು. ಸಣ್ಣ ಪ್ರಮಾಣದಲ್ಲಿ ಜ್ವರ ಇದ್ದಿದ್ದರಿಂದ ಅವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಆದರೆ, ಅವರ ಆರೋಗ್ಯ ಸ್ಥಿತಿ ದಿನ ಕಳೆದಂತೆ ಗಂಭೀರವಾಗುತ್ತಾ ಬಂದಿತ್ತು.
ಸೆಲೆಬ್ರಿಟಿಗಳ ವಲಯಕ್ಕೆ ಕೊವಿಡ್ ದುಸ್ವಪ್ನವಾಗಿ ಕಾಡುತ್ತಿದೆ. ಈಗಾಗಲೇ ಸಾಕಷ್ಟು, ಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಪಕರು ಕೊವಿಡ್ನಿಂದ ನಿಧನ ಹೊಂದಿದ್ದಾರೆ. ಈಗ ಒಡಿಶಾದ ಖ್ಯಾತ ಗಾಯಕಿ ತಪು ಮಿಶ್ರಾ ಕೊವಿಡ್ನಿಂದ ನಿಧನ ಹೊಂದಿದ್ದಾರೆ. ಅವರಿಗೆ 36 ವರ್ಷ ವಯಸ್ಸಾಗಿತ್ತು. ಈ ಬಗ್ಗೆ ಸಾಕಷ್ಟು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.
ತಪು ಅವರಿಗೆ ಕಳೆದ ತಿಂಗಳು ಕೊವಿಡ್ ಕಾಣಿಸಿಕೊಂಡಿತ್ತು. ಸಣ್ಣ ಪ್ರಮಾಣದಲ್ಲಿ ಜ್ವರ ಇದ್ದಿದ್ದರಿಂದ ಅವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಆದರೆ, ಅವರ ಆರೋಗ್ಯ ಸ್ಥಿತಿ ದಿನ ಕಳೆದಂತೆ ಗಂಭೀರವಾಗುತ್ತಾ ಬಂದಿತ್ತು. ಹೀಗಾಗಿ, ಮೇ 19ರಂದು ಅವರನ್ನು ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಸತತ ಒಂದು ತಿಂಗಳ ಚಿಕಿತ್ಸೆ ಪಡೆದ ನಂತರದಲ್ಲಿ ಅವರು ಮೃತಪಟ್ಟಿದ್ದಾರೆ.
ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ತಪು ಅವರ ಶ್ವಾಸಕೋಶಕ್ಕೆ ತೀವ್ರ ಹಾನಿ ಉಂಟಾಗಿತ್ತು. ಕಳೆದ ಎರಡು ದಿನಗಳಿಂದ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು. ಈಗ ಅವರು ಮೃತಪಟ್ಟಿರುವುದು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ತಪು ಮಿಶ್ರಾ ಅವರು ಸಂಬಾಲ್ಪುರ್ನಲ್ಲಿ ಜನಿಸಿ ಅಲ್ಲಿಯೇ ಶಿಕ್ಷಣ ಮುಗಿಸಿದರು. ಸಣ್ಣ ವಯಸ್ಸಿಗೇ ಸಂಗೀತ ಲೋಕಕ್ಕೆ ಕಾಲಿಟ್ಟರು. ಗಾಯಕಿಯಾಗಿ ಸುಮಾರು 500ಕ್ಕೂ ಹೆಚ್ಚು ಹಾಡುಗಳನ್ನು ಅವರು ಹಾಡಿದ್ದರು. ಒಡಿಶಾ ಭಾಷೆಯಲ್ಲಿ ಮಾತ್ರವಲ್ಲದೆ ಬೆಂಗಾಲಿ ಹಾಗೂ ಹಿಂದಿಯಲ್ಲೂ ತಪು ಸಾಕಷ್ಟು ಹಾಡಿಗೆ ಧ್ವನಿಯಾಗಿದ್ದರು.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಪು ಸಾವಿಗೆ ಸಂಪಾತ ಸೂಚಿಸಿದ್ದಾರೆ. ‘ತಪು ಸಾವಿನ ಸುದ್ದಿ ಕೇಳಿ ಬೇಸರವಾಯಿತು. ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ’ ಎಂದಿದ್ದಾರೆ. ನಟ ಹಾಗೂ ಸಂಸದ ಅನುಭವ್ ಕೂಡ ತಪು ಸಾವಿಗೆ ಸಂಪಾತ ಸೂಚಿಸಿದ್ದಾರೆ.
ಇದನ್ನೂ ಓದಿ: ಖ್ಯಾತ ಕಾಲಿವುಡ್ ನಿರ್ದೇಶಕ ಜಿಎನ್ ರಂಗರಾಜನ್ ನಿಧನ; ಕಂಬನಿ ಮಿಡಿದ ಸೆಲೆಬ್ರಿಟಿಗಳು