
ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗಿದೆ. ಅವರು ಸಿನಿಮಾದಲ್ಲಿ ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಈ ಕಾರಣಕ್ಕೆ ಯಶ್ ಹಾಗೂ ಕಿಯಾರಾನ ಟ್ರೋಲ್ ಮಾಡಲಾಗುತ್ತಿದೆ. ಅವರು ನಿಜ ಜೀವನದಲ್ಲಿ ಹೀಗೆಯೇ ಇರಬಹುದು ಎಂದು ಕೆಲವರು ಊಹಿಸಿದ್ದರು. ಆದರೆ, ಯಶ್ ಅವರ ನಿಜವಾದ ವ್ಯಕ್ತಿತ್ವ ಎಂಥದ್ದು ಎಂಬ ಬಗ್ಗೆ ಬಾಲಿವುಡ್ ನಟಿ ತಾರಾ ಸುತಾರಿಯಾ ನೀಡಿರುವ ಹೇಳಿಕೆ ಈಗ ಟ್ರೋಲರ್ಸ್‌ಗಳ ಬಾಯಿ ಮುಚ್ಚಿಸಿದೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನಿರೂಪಕರು, ‘ಯಶ್ ಪರದೆಯ ಮೇಲೆ ತುಂಬಾ ಟಾಕ್ಸಿಕ್ ಮತ್ತು ರಫ್ ಆಂಡ್ ಟಫ್ ಮಾಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಿಜ ಜೀವನದಲ್ಲಿ ಅವರ ವ್ಯಕ್ತಿತ್ವ ಹೇಗಿದೆ?’ ಎಂದು ಪ್ರಶ್ನಿಸಿದರು. ಇದಕ್ಕೆ ತಾರಾ ನೇರವಾಗಿ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ ನೋಡಿ ಮೆಚ್ಚಿಕೊಂಡ ಸುದೀಪ್; ಕಿಚ್ಚನ ಚಪ್ಪಾಳೆ ಪಡೆದ ಯಶ್
ಇದಕ್ಕೆ ಉತ್ತರಿಸಿದ ತಾರಾ ಸುತಾರಿಯಾ, ‘ನಾನು ಭೇಟಿಯಾದ ಅತ್ಯಂತ ಸಂವೇದನಾಶೀಲ ಹಾಗೂ ಕಾಳಜಿವುಳ್ಳ ವ್ಯಕ್ತಿಗಳಲ್ಲಿ ಯಶ್ ಒಬ್ಬರು. ಅವರು ಯಾವಾಗಲೂ ತಮಗಿಂತ ಹೆಚ್ಚಾಗಿ ಎದುರಿಗಿರುವ ವ್ಯಕ್ತಿಯ ಬಗ್ಗೆ ಚಿಂತಿಸುತ್ತಾರೆ. ನಮ್ಮ ಚಿತ್ರರಂಗದಲ್ಲಿ ಇಂತಹ ವ್ಯಕ್ತಿಗಳನ್ನು ನೋಡುವುದು ತುಂಬಾ ವಿರಳ’ ಎಂದು ಮನಸಾರೆ ಕೊಂಡಾಡಿದ್ದಾರೆ.
Exclusive !!!
Reporter – Is Yash a Male Feminist In Real Life, Like His Character In Toxic?
Tara Sutaria – In Real Life, Yash Is One Of The Most Sensitive and Genuinely He’s Thinking About The Other Person More Than Himself. He Respected All The Womans. #ToxicTheMovie #Yash pic.twitter.com/RFgqhPABAb
— Filmy_Duniya (@nawa75436) August 28, 2026
ಚಿತ್ರದ ಪಾತ್ರಗಳನ್ನು ನೋಡಿ ಯಶ್ ಅವರ ವ್ಯಕ್ತಿತ್ವವನ್ನು ಜಡ್ಜ್ ಮಾಡುತ್ತಿದ್ದವರಿಗೆ ತಾರಾ ಅವರ ಈ ಮಾತುಗಳು ಸೂಕ್ತ ಉತ್ತರ ನೀಡಿದಂತಾಗಿದ್ದು, ಅಭಿಮಾನಿಗಳು ಈ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.
‘ಟಾಕ್ಸಿಕ್’ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಮೂರು ದಿನಕ್ಕೆ ಈ ಚಿತ್ರ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಯಶ್ ಅವರ ಕ್ರೇಜ್ಗೆ ಸಾಕ್ಷಿ. ಕೆಲವರು ಈ ಸಿನಿಮಾ ಬಗ್ಗೆ ನೆಗೆಟಿವ್ ಹಬ್ಬಿಸೋ ಕೆಲಸ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.