ಬಾಡಿಗೆ ತಾಯ್ತನದ ಮೂಲಕ ಪಡೆಯುವ ಮಗು ರೆಡಿಮೇಡ್​ ಬೇಬಿ ಎಂದ ಲೇಖಕಿ; ಈಗ ಯಾಕೆ ಇಂಥ ಟ್ವೀಟ್​?-ನೆಟ್ಟಿಗರಿಂದ ಅಸಮಾಧಾನ

ಬಾಡಿಗೆ ತಾಯ್ತನದ ಮೂಲಕ ಪಡೆಯುವ ಮಗು ರೆಡಿಮೇಡ್​ ಬೇಬಿ ಎಂದ ಲೇಖಕಿ; ಈಗ ಯಾಕೆ ಇಂಥ ಟ್ವೀಟ್​?-ನೆಟ್ಟಿಗರಿಂದ ಅಸಮಾಧಾನ
ತಸ್ಲೀಮಾ ನಸ್ರೀನ್​ ಮತ್ತು ಪ್ರಿಯಾಂಕಾ ಚೋಪ್ರಾ

ಬಡವರ್ಗದ ಮಹಿಳೆಯರು ಇರುವುದರಿಂದ ಇಂಥ ಬಾಡಿಗೆ ತಾಯ್ತನವೆಲ್ಲ ಸಾಧ್ಯವಾಗುತ್ತಿದೆ. ಶ್ರೀಮಂತರು ತಮ್ಮ ಹಿತಾಸಕ್ತಿಗಾಗಿ, ಅನುಕೂಲಕ್ಕಾಗಿ ಸಮಾಜದಲ್ಲಿ ಬಡತನದ ಅಸ್ತಿತ್ವವನ್ನು ಬಯಸುತ್ತಾರೆ ಎಂದು ತಸ್ಲೀಮಾ ನಸ್ರೀನ್​ ಹೇಳಿದ್ದಾರೆ.

TV9kannada Web Team

| Edited By: Lakshmi Hegde

Jan 22, 2022 | 8:15 PM

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ದಂಪತಿ ( Priyanka Chopra and Nick Jonas) ತಾವು ಬಾಡಿಗೆ ತಾಯಿಯ (surrogacy) ಮೂಲಕ ಹೆಣ್ಣು ಮಗುವನ್ನು ಪಡೆದಿದ್ದಾಗಿ ಹೇಳಿದ್ದಾರೆ. ಆದರೆ ಅದರ ಬೆನ್ನಲ್ಲೇ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್​ ಒಂದು ಟ್ವೀಟ್ ಮಾಡಿ, ಈ ಸರೊಗಸಿ ಅಥವಾ ಬಾಡಿಗೆ ತಾಯ್ತನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗೆ ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆದ ಮಹಿಳೆ ಅದು ಹೇಗೆ ತಾಯ್ತನದ ಭಾವನೆಯನ್ನು ಅನುಭವಿಸುತ್ತಾಳೆ? ಎಂದು ನಸ್ರೀನಾ ಪ್ರಶ್ನಿಸಿದ್ದಾರೆ. ಆದರೆ ತಸ್ಲೀಮಾ ಟ್ವೀಟ್​​ಗೆ ಅನೇಕರು ವ್ಯಂಗ್ಯವಾಡಿದ್ದಾರೆ.  

ಬಾಡಿಗೆ ತಾಯಿಯ ಮೂಲಕ ಪಡೆದ ಮಕ್ಕಳು ರೆಡಿಮೇಡ್​ ಶಿಶುಗಳಂತೆ ಎಂದು ಹೇಳಿರುವ ತಸ್ಲೀಮಾ, ಒಮ್ಮ ಸ್ತ್ರೀ ಇನ್ನೊಬ್ಬ ತಾಯಿ (ಬಾಡಿಗೆ ತಾಯಿ) ಮೂಲಕ ಒಂದು ಮಗುವನ್ನು ಪಡೆದರೆ, ಅವರು ಅದು ಹೇಗೆ ತಾಯ್ತನದ ಭಾವ ಅನುಭವಿಸುತ್ತಾರೆ? ಮಗುವನ್ನು ಹೆತ್ತ ತಾಯಿಗೆ ಇರುವಂಥ ಫೀಲಿಂಗ್ ಇವರಲ್ಲಿ ಹೇಗೆ ಮೂಡುಸುತ್ತದೆ ಎಂದು ಒಂದು ಟ್ವೀಟ್​ನಲ್ಲಿ ಪ್ರಶ್ನಿಸಿರುವ ಲೇಖಕಿ, ಇನ್ನೊಂದು ಟ್ವೀಟ್ ಮಾಡಿ, ಬಡವರ್ಗದ ಮಹಿಳೆಯರು ಇರುವುದರಿಂದ ಇಂಥ ಬಾಡಿಗೆ ತಾಯ್ತನವೆಲ್ಲ ಸಾಧ್ಯವಾಗುತ್ತಿದೆ. ಶ್ರೀಮಂತರು ತಮ್ಮ ಹಿತಾಸಕ್ತಿಗಾಗಿ, ಅನುಕೂಲಕ್ಕಾಗಿ ಸಮಾಜದಲ್ಲಿ ಬಡತನದ ಅಸ್ತಿತ್ವವನ್ನು ಬಯಸುತ್ತಾರೆ. ಶ್ರೀಮಂತ ಕುಟುಂಬದವರಿಗೆ ನಿಜಕ್ಕೂ ಮಕ್ಕಳನ್ನು ಬೆಳೆಸಲು ಆಸೆಯಿದ್ದರೆ, ನೀವು ಮನೆಯಿಲ್ಲದ ಒಂದು ಮಗುವನ್ನು ದತ್ತು ತೆಗೆದುಕೊಳ್ಳಿ. ಅದು ಬಿಟ್ಟು ಇಂಥ ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವುದೆಲ್ಲ ಶ್ರೀಮಂತರ ಆತ್ಮಶ್ಲಾಘನೆಯ ಒಂದು ವಿಧ ಎಂದು ಕಟುವಾಗಿ ಹೇಳಿದ್ದಾರೆ. ಆದರೆ ಈ ಟ್ವೀಟ್​ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಸ್ಲೀಮಾ ನಸ್ರೀನ್ ಹೀಗೆಲ್ಲ ಟ್ವೀಟ್ ಮಾಡಿದ್ದರೂ ಎಲ್ಲಿಯೂ ಪ್ರಿಯಾಂಕಾ ಚೋಪ್ರಾ ಹೆಸರಾಗಲೀ ಅಥವಾ ಅವರ ಪತಿ ನಿಕ್ ಜೋನಸ್​ ಹೆಸರನ್ನಾಗಲೀ ಉಲ್ಲೇಖಿಸಿಲ್ಲ. ಆದರೆ ಇಂದು ಪ್ರಿಯಾಂಕಾ ದಂಪತಿ ಹೀಗೊಂದು ಘೋಷಣೆ ಮಾಡಿದ ಬೆನ್ನಲ್ಲೇ ತಸ್ಲೀಮಾ ಈ ಟ್ವೀಟ್​ಗಳನ್ನು ಮಾಡಿದ್ದಾರೆ. ಅಂದಹಾಗೇ, ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯಿಯ ಮೂಲಕ ಪಡೆದ ಮಗು 12 ವಾರಗಳ ಮೊದಲೇ (ಅವಧಿಗೆ ಪೂರ್ವ) ಜನಿಸಿದೆ ಎಂದೂ ಹೇಳಲಾಗಿದೆ. ಹೀಗೆ ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯುವ ಪ್ರಕ್ರಿಯೆಯಲ್ಲಿ, ಮಗುವನ್ನು ಪಡೆಯಲು ಇಚ್ಛಿಸುವ ಮಹಿಳೆಯ ಅಂಡಾಶಯದ ಮೊಟ್ಟೆಯನ್ನು ಪುರುಷನ ವೀರ್ಯದೊಂದಿಗೆ ಸೇರಿಸಿ ಫಲವತ್ತು ಮಾಡಲಾಗುತ್ತದೆ. ಅದಾದ ಬಳಿಕ ಇನ್ನೊಂದು ಮಹಿಳೆ (ಬಾಡಿಗೆ ತಾಯಿಯಾಗಲು ಒಪ್ಪಿದ ಮಹಿಳೆ)ಯ ಗರ್ಭಾಶಯದಲ್ಲಿ ಅದನ್ನು ಹೂಡಲಾಗುತ್ತದೆ. ಆ ಮಹಿಳೆಯ ಗರ್ಭದಲ್ಲಿ ಭ್ರೂಣ ಬೆಳೆದು ಮಗುವಾಗುತ್ತದೆ.

ಇದನ್ನೂ ಓದಿ:  Priyanka Chopra: ಬಾಡಿಗೆ ತಾಯಿ ಮೂಲಕ ಮಗು ಪಡೆದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್

Follow us on

Related Stories

Most Read Stories

Click on your DTH Provider to Add TV9 Kannada