ಸ್ವಲ್ಪದರಲ್ಲೇ ತಪ್ಪಿತು ಭಾರಿ ವಿಮಾನ ದುರಂತ; ನಟಿ ರೋಜಾ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ

| Updated By: ಮದನ್​ ಕುಮಾರ್​

Updated on: Dec 14, 2021 | 4:13 PM

Actress Roja: ರೋಜಾ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಅವರ ಜತೆ 70 ಜನರು ಪ್ರಯಾಣ ಮಾಡುತ್ತಿದ್ದರು. ಆ ಬಗ್ಗೆ ರೋಜಾ ಅವರು ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಸ್ವಲ್ಪದರಲ್ಲೇ ತಪ್ಪಿತು ಭಾರಿ ವಿಮಾನ ದುರಂತ; ನಟಿ ರೋಜಾ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ
ರೋಜಾ
Follow us on

ನಟಿ, ನಗರಿ ವಿಧಾನಸಭಾ ಕ್ಷೇತ್ರದ ಶಾಸಕಿ ಆರ್​.ಕೆ. ರೋಜಾ (RK Roja) ಅವರು ಇಂದು (ಡಿ.14) ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ಸುದ್ದಿ ಕೇಳಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಸ್ಪಲ್ಪದರಲ್ಲೇ ಭಾರಿ ವಿಮಾನ ದುರಂತ ತಪ್ಪಿದೆ. ರಾಜಮಂಡ್ರಿಯಿಂದ ತಿರುಪತಿಗೆ ರೋಜಾ ಪ್ರಯಾಣ ಬೆಳೆಸಿದ್ದರು. ಅವರ ಜತೆ ಆ ವಿಮಾನದಲ್ಲಿ 70 ಜನರು ಇದ್ದರು. ತಾಂತ್ರಿಕ ದೋಷ ಕಾಣಿಸಿಕೊಂಡ ತಕ್ಷಣದಲ್ಲೇ ಅದೃಷ್ಟವಶಾತ್​ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru International Airport) ಲ್ಯಾಂಡಿಂಗ್​ ಮಾಡಲು ಸಾಧ್ಯವಾಗಿದೆ. ಹಾಗಾಗಿ ಯಾವುದೇ ತೊಂದರೆ ಉಂಟಾಗಿಲ್ಲ. ವಿಮಾನದಲ್ಲಿ ಉಂಟಾದ ಬಿಗುವಿನ ಪರಿಸ್ಥಿತಿ ಬಗ್ಗೆ ವಿಡಿಯೋ ಮೂಲಕ ರೋಜಾ ಅವರು ಮಾಹಿತಿ ಹಂಚಿಕೊಂಡರು. ಎಲ್ಲ 70 ಮಂದಿ ಪ್ರಯಾಣಿಕರು ಸೇಫ್​ ಆಗಿದ್ದಾರೆ ಎಂಬ ವಿಷಯ ತಿಳಿದು ನಿಟ್ಟುಸಿರು ಬಿಡುವಂತಾಗಿದೆ.

ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ಮಾಡುವುದಾಗಿ ಘೋಷಿಸಿದ ತಕ್ಷಣ ಎಲ್ಲ ಪ್ರಯಾಣಿಕರು ಚಿಂತೆಗೆ ಒಳಗಾದರು. ಲ್ಯಾಂಡ್​ ಆದ ನಂತರವೂ ವಿಮಾನದ ಬಾಗಿಲು ತೆರೆಯಲಿಲ್ಲ. ಅದಕ್ಕಾಗಿ ತುಂಬ ಹೊತ್ತು ಎಲ್ಲರೂ ಕಾಯಬೇಕಾಯಿತು. ಅದರಿಂದ ಕೆಲ ನಿಮಿಷಗಳ ಕಾಲ ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು. ಅದನ್ನು ವಿಡಿಯೋ ಮೂಲಕ ರೋಜಾ ವಿವರಿಸಿದರು. ಸೂಕ್ತ ಅನುಮತಿ ಸಿಕ್ಕ ಬಳಿಕ ವಿಮಾನದ ಬಾಗಿಲುಗಳನ್ನು ತೆರೆಯಲಾಯಿತು.

ಮೊದಲೇ ನಿಗದಿ ಆದಂತೆ ಬೆಳಗ್ಗೆ 10.20ಕ್ಕೆ ಈ ವಿಮಾನ ತಿರುಪತಿಯಲ್ಲಿ ಲ್ಯಾಂಡ್​ ಆಗಬೇಕಿತ್ತು. ದೇವನಹಳ್ಳಿಯಲ್ಲಿ ಲ್ಯಾಂಡ್​ ಆದ ಬಳಿಕ ತಾಂತ್ರಿಕ ದೋಷ ಸರಿಪಡಿಸಿಕೊಂಡು ತಿರುಪತಿಗೆ ತೆರಳಲಿ ಸಿದ್ಧತೆ ಮಾಡಲಾಯಿತು. ಆದರೆ ದೇವನಹಳ್ಳಿಯಿಂದ ರಸ್ತೆ ಮಾರ್ಗದ ಮೂಲಕ ರೋಜಾ ಅವರು ತಿರುಪತಿಗೆ ಪ್ರಯಾಣ ಮುಂದುವರಿಸಿದರು ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ:

ನಟಿ ಮತ್ತು ರಾಜಕಾರಣಿ ಆರ್.ಕೆ.ರೋಜಾ ಗೆ 2 ಶಸ್ತ್ರಚಿಕಿತ್ಸೆ

ಸೇನಾ ಹೆಲಿಕಾಪ್ಟರ್​ ಪತನ; ಅನುಮಾನ ವ್ಯಕ್ತಪಡಿಸಿ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆಗ್ರಹಿಸಿದ ಸುಬ್ರಹ್ಮಣಿಯನ್ ಸ್ವಾಮಿ