ಜಯದೇವ್​​ಗೆ ಶಾಕ್ ಕೊಟ್ಟ ಗೌತಮ್; ಲೋಗೋ ವಿವಾದಕ್ಕೆ ತೆರೆ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಜಯದೇವ್​ಗೆ ದೊಡ್ಡ ಶಾಕ್ ನೀಡಿದ್ದಾನೆ. ಕಂಪನಿಯ ಲೋಗೋ ತನ್ನದು ಎಂದು ಬೀಗುತ್ತಿದ್ದ ಜಯದೇವ್, ಕೊನೆಗೆ ಮುಖಭಂಗಕ್ಕೆ ಒಳಗಾಗಿದ್ದಾನೆ. ಲೋಗೋ ನೋಂದಣಿ ಪತ್ರದ ಮೂಲಕ ಅದು ಗೌತಮ್ ಹೆಸರಿನಲ್ಲಿದೆ ಎಂದು ಸಾಬೀತಾಗಿದ್ದು, ಹೀರೋ ಗೌತಮ್ ಮತ್ತೊಮ್ಮೆ ವಿಜಯ ಸಾಧಿಸಿದ್ದಾನೆ.

ಜಯದೇವ್​​ಗೆ ಶಾಕ್ ಕೊಟ್ಟ ಗೌತಮ್; ಲೋಗೋ ವಿವಾದಕ್ಕೆ ತೆರೆ
ಅಮೃತಧಾರೆ
Edited By:

Updated on: Apr 16, 2026 | 10:25 AM

‘ಅಮೃತಧಾರೆ’ ಧಾರಾವಾಹಿಯಲ್ಲಿ ಸಾಕಷ್ಟು ತಿರುವುಗಳು ಬರುತ್ತಿವೆ. ಇದರಲ್ಲಿ ಜಯದೇವ್ ವಿಷಯ ಕೂಡ ಒಂದು. ಆತ, ಸದಾ ಒಂದಿಲ್ಲೊಂದು ವಿಷಯಕ್ಕೆ ಗೌತಮ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಿದ್ದ. ಈ ವಿಷಯದಲ್ಲಿ ಈಗಾಗಲೇ ಸಾಕಷ್ಟು ಪ್ರಯತ್ನ ನಡೆದಿದೆ. ಆದರೆ, ಅದು ಸಾಧ್ಯವೇ ಆಗುತ್ತಾ ಇರಲಿಲ್ಲ. ಈಗ ಗೌತಮ್ ಅವರು ಜಯದೇವ್​ಗೆ ಶಾಕ್ ಕೊಟ್ಟಿದ್ದಾನೆ. ಲೋಗೋ ವಿಷಯದ ಪ್ರಕರಣದಲ್ಲಿ ಎಲ್ಲವೂ ಗೌತಮ್ ಪರ ಆಗಿದೆ.

ಆಸ್ತಿ ವಿಷಯಕ್ಕೆ ಗೌತಮ್ ಸಾಕಷ್ಟು ಕಷ್ಟಪಟ್ಟಿದ್ದ. ಆದರೆ, ಇದನ್ನು ಕಬಳಿಸಿಕೊಂಡ ಜಯದೇವ್​. ಆ ಬಳಿಕ ಅವನ ಆಸೆ ಈಡೇರಲೇ ಇಲ್ಲ. ಆತ ಬೇರೆಯದೇ ಪ್ಲ್ಯಾನ್ ಮಾಡಿದ. ಗೌತಮ್​​​ಗೆ ತೊಂದರೆಕೊಡಬೇಕು ಎಂದು ಪ್ರಯತ್ನಿಸಿದ. ಈಗ ಗೌತಮ್ ಬಿಸ್ನೆಸ್ ಆರಂಭಿಸಿದ್ದಾನೆ ಮತ್ತು ಈ ಬಿಸ್ನೆಸ್​​ಗೆ ದೀವಾನ್ ಕಂಪನಿಯ ಲೋಗೋ ಬಳಕೆ ಮಾಡಿದ್ದಾನೆ.

ಇದು ಚರ್ಚೆಯ ವಿಷಯ ಆಯಿತು. ಜಯದೇವ್ ಲೋಗೋ ತನ್ನದು ಎಂದು ಬೀಗುತ್ತಿದ್ದ. ಹೀಗಿರುವಾಗಲೇ ದೀವಾನ್ ಕಂಪನಿಯ ಲೋಗೋ ಗೌತಮ್ ಹೆಸರಿಗೆ ನೋಂದಣಿ ಆಗಿರುವ ಪತ್ರ ಸಿಕ್ಕಿತು. ಈ ಪತ್ರವನ್ನು ಜಯದೇವ್ ತಮ್ಮ ಪಾರ್ಥ ಗೌತಮ್​​ಗೆ ನೀಡಿದ್ದಾನೆ. ಈ ಮೂಲಕ ಲೋಗೋ ಗೌತಮ್​​ ಹೆಸರಲ್ಲಿ ಇದೆ ಎಂದು ಸಾಬೀತಾಗಿದೆ. ಇದರಿಂದ ಜಯದೇವ್​​ಗೆ ದೊಡ್ಡ ಮುಖಭಂಗ ಆಗಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಅಮೃತಧಾರೆ’: ದೊಡ್ಡ ಸಾಧನೆ ಮಾಡಿದ ಮಲ್ಲಿ; ಜಯದೇವ್ ಬಾಳಲ್ಲಿ ಕತ್ತಲು

ಜಯದೇವ್ ಸದಾ ಕೆಟ್ಟದನ್ನು ಮಾಡಲು ಪ್ರಯತ್ನಿಸುತ್ತಲೇ ಇರುವವನು ಎಂಬುದು ಗೊತ್ತೇ ಇದೆ. ಈಗಲೂ ಆತ ಹಾಗೆಯೇ ಮಾಡುವ ಎಲ್ಲಾ ಸಾಧ್ಯತೆ ಇದೆ. ಆದರೆ, ಹೀರೋ ಎಂದಮೇಲೆ ಗೆಲುವು ಆತನ ಕಡೆಗೆ ಒಲಿಯಲೇ ಬೇಕಲ್ಲವೇ? ಹೀಗಾಗಿ. ಪ್ರತಿ ಹಂತದಲ್ಲೂ ಗೌತಮ್​​ಗೆ ಗೆಲುವು ಸಿಗುತ್ತಾ ಹೋಗುತ್ತಿದೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us