
‘ಅಮೃತಧಾರೆ’ ಧಾರಾವಾಹಿ (Amruthadhaare) ಈಗ ಹೊಸ ತಿರುವನ್ನು ಪಡೆದುಕೊಂಡಿದ್ದು ಗೊತ್ತೇ ಇದೆ. ಧಾರಾವಾಹಿಯ ಕಥೆ ನೇರವಾಗಿ ಐದು ವರ್ಷ ಮುಂದಕ್ಕೆ ಹೋಗಿದೆ. ಈ ಎಲ್ಲಾ ಘಟನೆ ನಡೆಯುವ ಮೊದಲು ಭೂಮಿಕಾ ಮಗನನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಳು. ಆ ಬಳಿಕ ಮನೆಯನ್ನು ಮಲತಾಯಿ ಹಾಗೂ ಜಯದೇವ್ ಹೆಸರಿಗೆ ಬರೆದಿಟ್ಟು ಹೊರಟೇ ಹೋಗಿದ್ದ. ಈಗ ಜಯದೇವ್ಗೆ ಶಾಕ್ ಸಿಕ್ಕಿದೆ.
ಜಯದೇವ್ ಇಡೀ ಆಸ್ತಿ ಅನುಭವಿಸುವ ಕನಸು ಕಂಡಿದ್ದ. ಇದಕ್ಕೆ ಆತನ ತಾಯಿ ಶಕುಂತಲ ಕೂಡ ಸಾಥ್ ನೀಡಿದ್ದಳು. ಇದು ಯಶಸ್ಸು ಕಂಡಿತ್ತು. ಗೌತಮ್ ಎಲ್ಲಾ ಆಸ್ತಿಯನ್ನು ಇವರ ಹೆಸರಿಗೆ ಬರೆದುಕೊಟ್ಟು ಮನೆ ಬಿಟ್ಟು ಹೋಗಿದ್ದ. ಎಲ್ಲಾ ಆಸ್ತಿಯನ್ನು ಇವರು ಎಂಜಾಯ್ ಮಾಡುತ್ತಿದ್ದರು. ಆದರೆ, ಈಗ ಎಲ್ಲಾ ಉಲ್ಟ್ ಆಗಿದೆ.
ಬ್ಯಾಂಕ್ನವರು ಬಂದು ಜಯದೇವ್ಗೆ ನೋಟಿಸ್ ನೀಡಿದ್ದಾರೆ. ನಿಮ್ಮ ಕಂಪನಿಯವರು ನಮ್ಮಿಂದ 600 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದರು. ಅದನ್ನು ಹಿಂದಿರುಗಿಸಬೇಕು ಎಂದು ಹೇಳಿದ್ದಾರೆ. ಇದು ಜಯದೇವ್ಗೆ ಶಾಕ್ ಮೂಡಿಸಿದೆ. ಇಷ್ಟು ದಿನ ಪಬ್ ಎಂದು ಎಂಜಾಯ್ ಮಾಡುತ್ತಿದ್ದ ಆತನಿಗೆ ಈ ಬೆಳವಣಿಗೆಯನ್ನು ಸಹಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ.
ಇದನ್ನೂ ಓದಿ: ಟಾಪ್ನಲ್ಲಿ ಯಾರೂ ಊಹಿಸದ ಸೀರಿಯಲ್; ‘ಅಮೃತಧಾರೆ’ಗೆ ಎಷ್ಟನೇ ಸ್ಥಾನ?
ಈಗ 600 ಕೋಟಿ ರೂಪಾಯಿ ಸಾಲ ಹಿಂದಿರುಗಿಸಬೇಕು ಎಂದರೆ ಎಲ್ಲಾ ಆಸ್ತಿಯನ್ನು ಮಾರಬೇಕಾದ ಪರಿಸ್ಥಿತಿ ಬರಬಹುದು. ಹಾಗಾದಲ್ಲಿ ಇವರು ಏನು ಅಂದುಕೊಂಡಿದ್ದರೋ ಅದು ಯಶಸ್ಸು ಕಾಣುವುದಿಲ್ಲ. ಅವರು ಬೀದಿಗೆ ಬರೋ ಸಾಧ್ಯತೆ ಇದೆ. ಈ ವೇಳೆ ಮತ್ತೆ ಗೌತಮ್ ಕಾಲು ಹಿಡಿದುಕೊಳ್ಳೋ ಪರಿಸ್ಥಿತಿ ಬರಬೇಕಾಗಿ ಬರಹುದು. ಈಗಾಗಲೇ ಜಯದೇವ್ ಎರಡನೇ ಪತ್ನಿಗೆ ಅಸಮಾಧಾನ ಮೂಡಿದೆ. ತನಗೆ ಅಧಿಕಾರ ಸಿಗುತ್ತಿಲ್ಲ ಎಂದು ಆಕೆ ಬೇಸರ ಮಾಡಿಕೊಂಡಿದ್ದಾಳೆ. ಆಕೆಗೆ ಈ ವಿಚಾರ ಗೊತ್ತಾದರೆ ನೇರವಾಗಿ ಮನೆ ಬಿಟ್ಟು ಹೋಗುವ ಸಾಧ್ಯತೆ ಇದೆ.
ಗೌತಮ್ ಹಾಗೂ ಭೂಮಿಕಾ ಈಗ ಒಂದೇ ಊರು ಸೇರಿದ್ದಾಳೆ. ಇಬ್ಬರೂ ಭೇಟಿ ಆಗುವ ಸನಿಹಕ್ಕೆ ಬಂದಿದ್ದಾಳೆ. ಇವರ ಮತ್ತೆ ಭೇಟಿ ಆಗಲಿ ಎಂದು ಫ್ಯಾನ್ಸ್ ಕೂಡ ಬಯಸುತ್ತಿದ್ದಾರೆ. ಇವರ ಭೇಟಿ ಯಾವಾಗ ಆಗುತ್ತದೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.