‘ಅಮೃತಧಾರೆ’ ಹೊಸ ಅಧ್ಯಾಯ; ಮನೆಬಿಟ್ಟು ಹೋದ ಭೂಮಿ, ಕ್ಯಾಬ್ ಡ್ರೈವರ್ ಆದ ಗೌತಮ್

Amruthadhaare Serial Big Twist: ಅಮೃತಧಾರೆ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಎದುರಾಗಿದೆ. ಗೌತಮ್ ದೀವಾನ್ ಕ್ಯಾಬ್ ಡ್ರೈವರ್ ಆಗಿ ಬದಲಾಗಿದ್ದಾನೆ ಎಂಬ ಆಘಾತಕಾರಿ ಟ್ವಿಸ್ಟ್ ಬಹಿರಂಗಗೊಂಡಿದೆ. ಭೂಮಿಕಾ ಮತ್ತು ಗೌತಮ್ ದೂರಾಗಿದ್ದಾರೆ. ಈ ಟ್ವಿಸ್ಟ್​ಗೆ ಕೆಲವರು ಖುಷಿಪಟ್ಟರೆ ಮತ್ತೆ ಕೆಲವರು ನಿರಾಶರಾಗಿದ್ದಾರೆ.

‘ಅಮೃತಧಾರೆ’ ಹೊಸ ಅಧ್ಯಾಯ; ಮನೆಬಿಟ್ಟು ಹೋದ ಭೂಮಿ, ಕ್ಯಾಬ್ ಡ್ರೈವರ್ ಆದ ಗೌತಮ್
ಗೌತಮ್
Updated By: ರಾಜೇಶ್ ದುಗ್ಗುಮನೆ

Updated on: Sep 04, 2025 | 7:49 PM

‘ಅಮೃತಧಾರೆ’ ಧಾರಾವಾಹಿಯಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಇಷ್ಟು ದಿನ ಗೌತಮ್ ದೀವಾನ್ ಆಗಿ ಮೆರೆಯುತ್ತಿದ್ದವನು ಈಗ ದಿವಾಳಿಯಾಗಿ ಕ್ಯಾಬ್ ಡ್ರೈವರ್ ಆಗಿದ್ದಾನೆ. ಇದೆಲ್ಲವೂ ಈಗ ನಡೆಯುತ್ತಿರುವ ಕಥೆಯಲ್ಲ. ಐದು ವರ್ಷಗಳ ಮುಂದಿನ ಕಥೆ ಎಂದರೆ ನೀವು ನಂಬಲೇಬೇಕು. ಸದ್ಯ ಜೀ ಕನ್ನಡ ವಾಹಿನಿಯು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ರೀತಿಯ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಹೊಸ ಅಧ್ಯಾಯ ಶುರುವಾಗಿದೆ.

ಭೂಮಿಕಾಗೆ ಎರಡು ಮಕ್ಕಳು

ಭೂಮಿಕಾಗೆ ಎರಡು ಮಕ್ಕಳು ಜನಿಸಿದ್ದವು. ಆದರೆ, ಒಂದು ಮಗುವನ್ನು ಶಕುಂತಲಾ ಕಿಡ್ನ್ಯಾಪ್ ಮಾಡಿಸಿದ್ದಳು. ಈ ಕಾರಣದಿಂದಲೇ ಗೌತಮ್ ಈ ವಿಚಾರವನ್ನು ಪತ್ನಿಯಿಂದ ಮುಚ್ಚಿಟ್ಟಿದ್ದನ್ನು. ಆದರೆ, ಶಕುಂತಲಾ ಪತಿ ಹಾಗೂ ಪತ್ನಿ ಮಧ್ಯೆ ಕಲಹ ತರಬೇಕು ಎಂಬ ಕಾರಣಕ್ಕೆ ಭೂಮಿಕಾಗೆ ಈ ವಿಚಾರವನ್ನು ಹೇಳಿದಳು ಮತ್ತು ಭೂಮಿಕಾ ನಂಬಲೇ ಇಲ್ಲ. ಆ ಬಳಿಕ ಸಾಕಷ್ಟು ಸಾಕ್ಷಿ ಕೊಟ್ಟ ಬಳಿಕ ಭೂಮಿಕ ವಿಚಾರವನ್ನು ನಂಬಿ ಮನೆ ಬಿಟ್ಟು ಹೋದಳು.

ಇದನ್ನೂ ಓದಿ
ಶಂಕರ್​ ನಾಗ್​​ಗೆ ಅಣ್ಣ ಮಾತ್ರ ಅಲ್ಲ, ಸಾಕು ತಂದೆಯೂ ಆಗಿದ್ದ ಅನಂತ್ ನಾಗ್
‘ಕಾಂತಾರ: ಚಾಪ್ಟರ್​ 1’ ಎದುರು ರಿಲೀಸ್ ಆಗಲಿದೆ ದೊಡ್ಡ ಹೀರೋ ಸಿನಿಮಾ
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಫೈನಲ್ ಆದ ಮೂವರು ಸ್ಪರ್ಧಿಗಳು ಇವರೇ ನೋಡಿ
ರಾಜ್ ಮುಟ್ಟಿದ್ದೆಲ್ಲ ಚಿನ್ನ; ಹಂಚಿಕೆ ಮಾಡಿದ ‘ಲೋಕಃ’ ಗಳಿಕೆ ಜೋರು

ಅಮೃತಧಾರೆ ಪ್ರೋಮೋ

ಮನೆಗೆ ಬರುತ್ತಿದ್ದಂತೆ ಗೌತಮ್​​ಗೆ ಅಸಲಿ ವಿಚಾರ ಗೊತ್ತಾಗಿದೆ ಮತ್ತು ಶಾಕ್​ ಆಗಿದೆ. ಮಲತಾಯಿಯ ನಿಜವಾದ ಸ್ವರೂಪ ಗೊತ್ತಾದ ಬಳಿಕ ಆತ ಮನೆ ಬಿಟ್ಟು ಹೋಗಿದ್ದಾನೆ. ಹೋಗುವಾಗ ಎಲ್ಲಾ ಆಸ್ತಿಯನ್ನುಮಲ ತಾಯಿ ಹೆಸರಿಗೆ ಬರೆದಿಟ್ಟಿದ್ದಾನೆ. ಆ ಬಳಿಕ ನೇರವಾಗಿ ಪತ್ನಿ ಹುಡುಕಾಟವನ್ನು ಆರಂಭಿಸಿದ್ದಾನೆ.

ಐದು ವರ್ಷದ ಬಳಿಕದ ಕಥೆ

ಆ ಬಳಿಕ ತೆರೆದುಕೊಳ್ಳೋದೇ ಐದು ವರ್ಷಗಳ ಕಥೆ. ಹೌದು, ಗೌತಮ್ ದೀವಾನ್ ಐದು ವರ್ಷಗಳ ಬಳಿಕ ಹೇಗಿದ್ದಾನೆ ಎಂಬುದನ್ನು ತೋರಿಸಲಾಗಿದೆ. ಆತ ಕ್ಯಾಬ್ ಓಡಿಸುತ್ತಾ ಜೀವನ ನಡೆಸುತ್ತಿರುತ್ತಾನೆ. ಮತ್ತೊಂದು ಕಡೆ ಪತ್ನಿ ಸಿಕ್ಕಿಲ್ಲ ಎಂಬ ಬೇಸರ. ಹೀಗಿರುವಾಗಲೇ ಮಗ  ಹಾಗೂ ಪತ್ನಿ ಭೂಮಿಕಾ ಆತನಿಗೆ ಸಿಗುತ್ತಾರೆ. ನಂತರ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಅಮೃತಧಾರೆ’ ಧಾರಾವಾಹಿ ಪಾತ್ರಧಾರಿ ಮೇಘಾ ಶೆಣೋಯ್ ನಿಶ್ಚಿತಾರ್ಥ

ಸದ್ಯ ಈ ರೀತಿಯ ಟ್ವಿಸ್ಟ್ ಸಾಕಷ್ಟು ಬೇಸರ ಮೂಡಿಸಿದೆ, ಇನ್ನೂ ಕೆಲವರು ಖುಷಿಪಟ್ಟಿದ್ದಾರೆ. ಮುಂದೇನಾಗುತ್ತದೆ ಎಂಬ ಕುತೂಹಲ ಅನೇಕರಿಗೆ ಇದೆ. ಕೆಲವರು ಈ ಬಗ್ಗೆ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು ನೆಗೆಟಿವ್ ಆಗಿ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:46 pm, Thu, 4 September 25