ನಿಮಗೆ ಹುಚ್ಚು ಹಿಡಿದಿದೆ ಎಂದು ಭೂಮಿಕಾಗೆ ಬೈದ ಗೌತಮ್; ದಾಂಪತ್ಯದಲ್ಲಿ ಬಿರುಕು

‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾರ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಭೂಮಿಕಾ ಗೌತಮ್‌ನ ಪಾಸ್‌ಪೋರ್ಟ್ ಅನ್ನು ಮರೆಮಾಡಿದ್ದು, ಅವರ ವಿದೇಶ ಪ್ರವಾಸಕ್ಕೆ ಅಡ್ಡಿಯಾಗಿದೆ. ಇದರಿಂದ ಇಬ್ಬರ ನಡುವೆ ಜಗಳ ನಡೆದು, ಶಕುಂತಲಾ ತನ್ನ ಯೋಜನೆಯಲ್ಲಿ ಯಶಸ್ವಿಯಾಗಿದ್ದಾಳೆ. ಆ ಬಗ್ಗೆ ಇಲ್ಲಿದೆ ವಿವರ.

ನಿಮಗೆ ಹುಚ್ಚು ಹಿಡಿದಿದೆ ಎಂದು ಭೂಮಿಕಾಗೆ ಬೈದ ಗೌತಮ್; ದಾಂಪತ್ಯದಲ್ಲಿ ಬಿರುಕು
ಅಮೃತಧಾರೆ
Edited By:

Updated on: Aug 25, 2025 | 7:58 AM

‘ಅಮೃತಧಾರೆ’ (Amruthadhaare) ಧಾರಾವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್​ಗಳು ಬರುತ್ತಿವೆ. ಗೌತಮ್ ದೀವಾನ್ ಹಾಗೂ ಭೂಮಿಕಾ ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುಕೊಂಡು ಹೋಗುತ್ತಿದ್ದಾರೆ. ಆದರೆ, ಇವರನ್ನು ಬೇರೆ ಮಾಡಬೇಕು ಎಂಬುದು ಶಕುಂತಾಳ ಪ್ಲ್ಯಾನ್ ಆಗಿತ್ತು. ಆದರೆ, ಶಕುಂತಲ ಪ್ಲ್ಯಾನ್ ಪ್ರತಿ ಬಾರಿಯೂ ವಿಫಲ ಆಗುತ್ತಲೇ ಇತ್ತು. ಆದರೆ, ಈಗ ಭೂಮಿಕಾ ಹಾಗೂ ಗೌತಮ್ ಮಧ್ಯೆ ಬೆಂಕಿ ಬೀಳುವ ಎಲ್ಲಾ ಸಾಧ್ಯತೆ ಇದೆ. ಇದರಿಂದ ಶಕುಂತಲಾ ಖುಷಿ ಆಗಿದ್ದಾಳೆ.

ಗೌತಮ್ ದೀವಾನ್ ವಿದೇಶಕ್ಕೆ ತೆರಳುವವನಿದ್ದ. ಬಿಸ್ನೆಸ್ ಮೀಟಿಂಗ್ ಕಾರಣಕ್ಕೆ ಆತ ವಿದೇಶಕ್ಕೆ ಹೋಗಬೇಕಿತ್ತು. ‘ನೀವು ದಯವಿಟ್ಟು ವಿದೇಶಕ್ಕೆ ಹೋಗಬೇಡಿ’ ಎಂದು ಗೌತಮ್ ಬಳಿ ಭೂಮಿಕಾ ಕೇಳಿಕೊಂಡಳು. ಆದರೆ, ಅದು ಸಾಧ್ಯವಿಲ್ಲ ಎಂದನು ಗೌತಮ್. ಆಗ ಭೂಮಿಕಾ, ‘ನಿಮ್ಮ ಪಾಸ್​ಪೋರ್ಟ್ ಕದ್ದಿಟ್ಟರೆ ಹೇಗೆ ಹೋಗ್ತೀರಾ’ ಎಂದು ಹೇಳಿ ನಕ್ಕಳು.

ಗೌತಮ್ ದೀವಾನ್ ವಿದೇಶಕ್ಕೆ ಹೊರಡಲು ರೆಡಿ ಆದ. ಆತ ಕಾರನ್ನು ಏರಿ ಹೊರಟ. ಕಾರಿನಲ್ಲಿ ಹೋಗುವಾಗ ತನ್ನ ಬಳಿ ಪಾಸ್​ಪೋರ್ಟ್ ಇಲ್ಲ ಎಂಬ ವಿಚಾರ ಗೌತಮ್​ಗೆ ಗೊತ್ತಾಗುತ್ತದೆ. ಹೋಗುತ್ತಿರುವ ದಾರಿಯಿಂದಲೇ ಆತ ಮರಳಿ ಬರುತ್ತಾನೆ. ಈ ವೇಳೆ ಬಂದು ಭೂಮಿಕಾ ಬಳಿ ಪಾಸ್​​ಪೋರ್ಟ್ ಕೇಳುತ್ತಾನೆ. ಆದರೆ, ಪಾಸ್​ಪೋರ್ಟ್ ಇಲ್ಲ ಎಂದು ಆಕೆ ನೇರವಾಗಿ ಹೇಳುತ್ತಾಳೆ. ‘ನಾನು ಅದನ್ನು ಯಾಕೆ ತೆಗೆದು ಇಡಲಿ ನಿಮ್ಮ ಬ್ಯಾಗ್​ನಲ್ಲೇ ಇಟ್ಟಿದ್ದೇನೆ’ ಎಂದು ಭೂಮಿಕಾ ಪ್ರಶ್ನೆ ಮಾಡುತ್ತಾಳೆ.

ಇದನ್ನೂ ಓದಿ
ವಿಚ್ಛೇದನದ ಹಂತದಲ್ಲಿ ಗೋವಿಂದ ದಾಂಪತ್ಯ; ಪತಿಯಿಂದ ಮೋಸ ಆಗಿದೆ ಎಂದ ಸುನೀತಾ
‘ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’; ದೀಪಿಕಾ ದಾಸ್
ವಿಶೇಷ ದಿನದಂದೇ ವಿವಾಹ ಆಗುತ್ತಿದ್ದಾರೆ ಆ್ಯಂಕರ್ ಅನುಶ್ರೀ; ಇಲ್ಲಿದೆ ವಿವರ
‘ಸು ಫ್ರಮ್ ಸೋ’ ಹಂಚಿಕೆಗೆ ಸಹಾಯ ಮಾಡಿದ್ದ ದುಲ್ಖರ್ ​ ಋಣ ತೀರಿಸಿದ ರಾಜ್

‘ನಿಮಗೆ ಇತ್ತೀಚೆಗೆ ಹುಚ್ಚು ಹಿಡಿದಿದೆ. ಅದಕ್ಕಾಗಿ ಈ ರೀತಿ ಆಡುತ್ತಿದ್ದೀರಾ’ ಎಂದು ಗೌತಮ್ ಹೇಳಿದರು. ‘ನಾನು ಅದನ್ನು ಎತ್ತಿಟ್ಟಿಲ್ಲ. ನೀವು ನಂಬೋದಾದರೆ ನಂಬಿ ಬಿಡೋದಾದರೆ ಬಿಡಿ’ ಎಂದು ಹೇಳುತ್ತಲೇ ಭೂಮಿಕಾ ಹೊರಟು ಹೋಗುತ್ತಾಳೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾರ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಭೂಮಿಕಾ ಗೌತಮ್‌ನ ಪಾಸ್‌ಪೋರ್ಟ್ ಅನ್ನು ಮರೆಮಾಡಿದ್ದು, ಅವರ ವಿದೇಶ ಪ್ರವಾಸಕ್ಕೆ ಅಡ್ಡಿಯಾಗಿದೆ. ಇದರಿಂದ ಇಬ್ಬರ ನಡುವೆ ಜಗಳ ನಡೆದು, ಶಕುಂತಲಾ ತನ್ನ ಯೋಜನೆಯಲ್ಲಿ ಯಶಸ್ವಿಯಾಗಿದ್ದಾಳೆ.

ಇದನ್ನೂ ಓದಿ: ‘ಅಮೃತಧಾರೆ’ ಅಬ್ಬರಕ್ಕೆ ಟಿಆರ್​ಪಿ ಮೀಟರ್ ಶೇಕ್; ಉಳಿದ ಧಾರಾವಾಹಿಗಳ ಕಥೆ ಏನು?

ಇಬ್ಬರ ಮಧ್ಯೆ ಆಗುತ್ತಿರುವ ಜಗಳವನ್ನು ನೋಡಿ ಖುಷಿ ಪಡೋದು ಶಕುಂತಲ. ಗೌತಮ್ ಹಾಗೂ ಭೂಮಿಕಾ ಮಧ್ಯೆ ತಂದಿಡಬೇಕು ಎಂದು ಆಕೆ ಸಾಕಷ್ಟು ಪ್ರಯತ್ನ ಮಾಡುತ್ತಲೇ ಇದ್ದಳು. ಆದರೆ, ಅದು ಯಶಸ್ಸು ಕಂಡಿರಲಿಲ್ಲ. ಈಗ ಇವರೇ ಕಿತ್ತಾಡಿಕೊಳ್ಳುತ್ತಿರುವುದನ್ನು ನೋಡಿ ಆಕೆ ಖುಷಿ ಪಡುತ್ತಾಳೆ. ‘ಈ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳಬೇಕು’ ಎಂದು ಆಕೆ ಹೇಳುತ್ತಾಳೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 6:00 am, Mon, 25 August 25