‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ವೇದಿಕೆ ಮೇಲೆ ಲಗೇಜ್ ಆಟೋದಲ್ಲಿ ಅನುಶ್ರೀ-ಅರ್ಜುನ್ ಜನ್ಯ ರೈಡ್​

| Updated By: ರಾಜೇಶ್ ದುಗ್ಗುಮನೆ

Updated on: Jul 16, 2022 | 1:45 PM

ಗಗನ್-ದಿಶಾ ಇವರ ಡ್ಯಾನ್ಸ್ ಮುಗಿದ ಬಳಿಕ ಅರ್ಜುನ್ ಜನ್ಯ ಹಾಗೂ ಅನುಶ್ರೀ ಅವರು ಅಲ್ಲೇ ಇದ್ದ ಲಗೇಜ್ ಆಟೋದ ಮೇಲೆ ಕೂತು ಸುತ್ತಾಡಿದ್ದಾರೆ. ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದಾರೆ.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ವೇದಿಕೆ ಮೇಲೆ ಲಗೇಜ್ ಆಟೋದಲ್ಲಿ ಅನುಶ್ರೀ-ಅರ್ಜುನ್ ಜನ್ಯ ರೈಡ್​
ಅನುಶ್ರೀ-ಅರ್ಜುನ್ ಜನ್ಯ
Follow us on

ಅನುಶ್ರೀ (Anushree) ಅವರು ಆ್ಯಂಕರಿಂಗ್ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ. ಜೀ ಕನ್ನಡದ ಹಲವು ಶೋಗಳನ್ನು ಅವರು ನಡೆಸಿಕೊಡುತ್ತಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಅವರು ಸಾಕಷ್ಟು ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಸದ್ಯ ಅವರು ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ 6’ಗೆ (DKD 6) ನಿರೂಪಕಿ ಆಗಿದ್ದಾರೆ. ಈ ವಾರ ವೇದಿಕೆ ಮೇಲೆ ಅನುಶ್ರೀ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಲಗೇಜ್ ಆಟೋದ ಮೇಲೆ ಸುತ್ತಾಡಿದ್ದಾರೆ. ಈ ವಿಡಿಯೋ ಸಖತ್ ಫನ್ನಿ ಆಗಿದೆ.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ 6’ ಈ ವಾರದ ಎಪಿಸೋಡ್​ನಲ್ಲಿ  ಗಗನ್-ದಿಶಾ ಅದ್ಭುತ ಪರ್ಫಾರ್ಮೆನ್ಸ್ ನೀಡಿದರು. ಅವರ ಡ್ಯಾನ್ಸ್ ನೋಡಿ ಅಲ್ಲಿದ್ದ ಜಡ್ಜ್​ಗಳು ಅಚ್ಚರಿಗೊಂಡರು. ಇವರ ಡ್ಯಾನ್ಸ್ ನೋಡಿ ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯ ಮೆಚ್ಚಿಕೊಂಡರು. ಈ ಬಾರಿ ‘ಪ್ರಾಪರ್ಟಿ ರೌಂಡ್’ ಟಾಸ್ಕ್ ಇದೆ. ಇದರ ಅನ್ವಯ ಸ್ಪರ್ಧಿಗಳು ನಾನಾ ರೀತಿಯ ಪ್ರಾಪರ್ಟಿ ಬಳಕೆ ಮಾಡಿಕೊಂಡು ಡ್ಯಾನ್ಸ್ ಮಾಡಿದರು. ಅದೇ ರೀತಿ ಗಗನ್ ಮತ್ತು ದಿಶಾ ಹೂವಿನ ಮಾರುಕಟ್ಟೆಯ ಥೀಮ್ ಇಟ್ಟುಕೊಂಡು ಡ್ಯಾನ್ಸ್ ಮಾಡಿದ್ದಾರೆ.

ಗಗನ್-ದಿಶಾ ಇವರ ಡ್ಯಾನ್ಸ್ ಮುಗಿದ ಬಳಿಕ ಅರ್ಜುನ್ ಜನ್ಯ ಹಾಗೂ ಅನುಶ್ರೀ ಅವರು ಅಲ್ಲೇ ಇದ್ದ ಲಗೇಜ್ ಆಟೋದ ಮೇಲೆ ಕೂತು ಸುತ್ತಾಡಿದ್ದಾರೆ. ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಇವರ ಡ್ರಾಮಾ ನೋಡಿ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಓಂ’ ಸಿನಿಮಾ ಸ್ಟೈಲ್​ನಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ಗೆ ಶಿವರಾಜ್​ಕುಮಾರ್ ಎಂಟ್ರಿ; ಇಲ್ಲಿದೆ ವಿಡಿಯೋ

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​’ ಈಗಾಗಲೇ ಯಶಸ್ವಿಯಾಗಿ ಐದು ಸೀಸನ್​ಗಳನ್ನು ಪೂರ್ಣಗೊಳಿಸಿದೆ. ಈಗ ಆರನೇ ಸೀಸನ್​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬಾರಿ ಶಿವರಾಜ್​ಕುಮಾರ್ ಅವರು ಈ ಶೋಗೆ ಜಡ್ಜ್​ ಆಗಿ ಬಂದಿರುವುದು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದೆ. ಅವರು ಕೂಡ ವೇದಿಕೆ ಮೇಲೆ ಸಾಕಷ್ಟು ಬಾರಿ ಡ್ಯಾನ್ಸ್ ಮಾಡಿದ್ದಿದೆ. ಇದನ್ನು ನೋಡಿ ಫ್ಯಾನ್ಸ್ ಹಾಗೂ ಸ್ಪರ್ಧಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ 6’ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗುತ್ತಿದೆ.