‘ತಾಳ್ಮೆಯಿಂದ ಕಾದಿದ್ದಕ್ಕೆ ಅರ್ಥಪೂರ್ಣವಾದ ತಾಳಿ ಬಿದ್ದಿದೆ’; ಆ್ಯಂಕರ್ ಅನುಶ್ರೀ

ಅನುಶ್ರೀ ಅವರು ರೋಷನ್ ಜೊತೆ ವಿವಾಹವಾಗಿದ್ದು, ಇದೀಗ ಜೀ ಕನ್ನಡ ವೇದಿಕೆಯಲ್ಲಿ ತಮ್ಮ ವಿವಾಹದ ಬಗ್ಗೆ ಮಾತನಾಡಿದ್ದಾರೆ. ತಾಳ್ಮೆಯಿಂದ ಕಾದಿದ್ದಕ್ಕೆ ಅರ್ಥಪೂರ್ಣವಾದ ತಾಳಿ ಬಿದ್ದಿದೆ ಎಂದು ಹೇಳಿದ್ದಾರೆ. ಜೀ ಕನ್ನಡ ವಾಹಿನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ನಲ್ಲಿ ಆ್ಯಂಕರಿಂಗ್ ಮಾಡುವ ಸಾಧ್ಯತೆ ಇದೆ.

‘ತಾಳ್ಮೆಯಿಂದ ಕಾದಿದ್ದಕ್ಕೆ ಅರ್ಥಪೂರ್ಣವಾದ ತಾಳಿ ಬಿದ್ದಿದೆ’; ಆ್ಯಂಕರ್ ಅನುಶ್ರೀ
ಅನುಶ್ರೀ-ರೋಷನ್

Updated on: Sep 13, 2025 | 7:07 AM

ಆ್ಯಂಕರ್ ಅನುಶ್ರೀ (Anushree) ಅವರ ಬಳಿ ಎಲ್ಲರೂ ಇಡುತ್ತಿದ್ದು ಒಂದೇ ಪ್ರಶ್ನೆ, ‘ಮದುವೆ ಯಾವಾಗ’. ಈ ಪ್ರಶ್ನೆಗೆ ಅನುಶ್ರೀ ಉತ್ತರಿಸದೇ ಸುಮ್ಮನೆ ಹೋಗಿದ್ದೇ ಹೆಚ್ಚು. ಈಗ ಮದುವೆ ನಡೆದಿದೆ. ಅನುಶ್ರೀ ಅವರ ವಿವಾಹ ಅವರು ಅಂದುಕೊಂಡ ರೀತಿಯೇ ನಡೆದಿದೆ. ರೋಷನ್ ಜೊತೆ ಹಸೆಮಣೆ ಏರಿದ್ದಾರೆ. ವಿವಾಹ ಆದ ಬಳಿಕ ಇದೇ ಮೊದಲ ಬಾರಿಗೆ ಅವರು ಜೀ ಕನ್ನಡ ವೇದಿಕೆ ಏರಿದ್ದಾರೆ. ಅಲ್ಲಿ ತಮ್ಮ ವಿವಾಹದ ಬಗ್ಗೆ ಮಾತನಾಡಿದ್ದಾರೆ. ತಾಳ್ಮೆಯಿಂದ ಕಾದಿದ್ದಕ್ಕೆ ಅರ್ಥಪೂರ್ಣವಾದ ತಾಳಿ ಬಿದ್ದಿದೆ ಎಂದು ಅವರು ಹೇಳಿದ್ದಾರೆ.

ಅನುಶ್ರೀ ಅವರು ಆ್ಯಂಕರ್ ಆಗಿ, ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಕೈ ಹಿಡಿದಿದ್ದು ಆ್ಯಂಕರಿಂಗ್. ಪರಿಸ್ಥಿತಿ ಎಂತಹದೇ ಇದ್ದರೂ ಸ್ಕ್ರಿಪ್ಟ್ ಇಲ್ಲದೆ ಅದನ್ನು ಸಮರ್ಥವಾಗಿ ನಿಭಾಯಿಸುವ ಕಲೆ ಅವರಿಗೆ ಗೊತ್ತಿದೆ. ಈ ಕಾರಣದಿಂದಲೇ ಅವರು ಎಲ್ಲರಿಗೂ ಇಷ್ಟ ಆಗುತ್ತಾರೆ. ಅನುಶ್ರೀ ಅವರ ಆ್ಯಂಕರಿಂಗ್ ವೃತ್ತಿಗೆ ಜೀ ಕನ್ನಡ ವಾಹಿನಿ ಭದ್ರ ಬುನಾದಿ ಹಾಕಿದೆ. ಹೀಗಾಗಿ, ವಿವಾಹ ಆದ ಬಳಿಕ ಅವರು ಮೊದಲು ಜೀ ಕನ್ನಡ ವೇದಿಕೆ ಏರಿದ್ದಾರೆ.

ಇದನ್ನೂ ಓದಿ
ಅಕ್ಷಯ್ ಹೇಗೆ ಅಷ್ಟು ಬೇಗ ಸಿನಿಮಾ ಮಾಡ್ತಾರೆ? ಅಜಯ್ ದೇವಗನ್ ಫನ್ನಿ ವಿವರಣೆ
ಟಾಪ್​ನಲ್ಲಿ ಯಾರೂ ಊಹಿಸದ ಸೀರಿಯಲ್; ‘ಅಮೃತಧಾರೆ’ಗೆ ಎಷ್ಟನೇ ಸ್ಥಾನ?
ಮದುವೆ ಬಳಿಕ ಕೆಲಸಕ್ಕೆ ಮರಳಿದ ಅನುಶ್ರೀ ಈ ವಿಚಾರದಲ್ಲಿ ತಪ್ಪು ಮಾಡಲಿಲ್ಲ
ಹಠ ಮಾಡಿ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ್ದ ನಟ ಅಕ್ಷಯ್ ಕುಮಾರ್

‘ಮಹಾನಟಿ 2’ ಹಾಗೂ ‘ನಾವು ನಮ್ಮವರು’ ಶೋನ ಮಹಾ ಸಂಗಮ ನಡೆದಿದೆ. ಶನಿವಾರ (ಸೆಪ್ಟೆಂಬರ್ 13) ಹಾಗೂ ಭಾನುವಾರ (ಸೆಪ್ಟೆಂಬರ್ 14) ಶೋ ನಡೆದಿದೆ. ಶೋನಲ್ಲಿ ಅನುಶ್ರೀ ಅವರ ಮಡಿಲು ತುಂಬೋ ಕೆಲಸ ಆಗಿದೆ. ಈ ವೇಳೆ ಅವರು ಖುಷಿ ಖುಷಿಯಿಂದ ಮಾತನಾಡಿದ್ದಾರೆ.

ಜೀ ಕನ್ನಡ ಪೋಸ್ಟ್​

‘ತಾಳಿದವನು ಬಾಳಿಯಾನು ಎಂಬ ಮಾತು ನಿಜ. ತಾಳ್ಮೆಯಿಂದ ಕಾದಿದ್ದಕ್ಕೆ ಅರ್ಥಪೂರ್ಣ ತಾಳಿ ಬಿದ್ದಿದೆ. ನನಗೆ ಜೀವನ ಕೊಟ್ಟಿದ್ದು ಜೀ ಕನ್ನಡ, ಆ ಜೀವಕ್ಕೆ ಅರ್ಥ ಕೊಟ್ಟಿದ್ದು ರೋಷನ್’ ಎಂದು ಪತಿಯ ಬಗ್ಗೆ ಹಾಗೂ ಜೀ ಕನ್ನಡದ ಬಗ್ಗೆ ಅನುಶ್ರೀ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದರು.

ಇದನ್ನೂ ಓದಿ: ಮದುವೆ ಬಳಿಕ ಕೆಲಸಕ್ಕೆ ಮರಳಿದ ಅನುಶ್ರೀ ಈ ವಿಚಾರದಲ್ಲಿ ತಪ್ಪು ಮಾಡಲಿಲ್ಲ; ಮೆಚ್ಚುಗೆಯ ಮಹಾಪೂರ

ಜೀ ಕನ್ನಡದಲ್ಲಿ ಶೀಘ್ರವೇ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಹೊಸ ಸೀಸನ್ ಬರಲಿದೆ. ಇದರ ಆಡಿಷನ್ ಕೂಡ ನಡೆಯುತ್ತಿದೆ. ಈ ಶೋ ಮೂಲಕ ಅನುಶ್ರೀ ಅವರು ಆ್ಯಂಕರಿಂಗ್​​ಗೆ ಮರಳೋ ಸಾಧ್ಯತೆ ಇದೆ. ವಿವಾಹದ ಬಳಿಕ ಅವರು ದೊಡ್ಡ ಬ್ರೇಕ್ ಪಡೆದುಕೊಂಡಿಲ್ಲ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:06 am, Sat, 13 September 25