ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?
ವರ್ಧನ್ ಕಂಪನಿಯಿಂದ ರಿಸೈನ್ ಮಾಡಬೇಕು ಎನ್ನುವ ನಿರ್ಧಾರಕ್ಕೆ ಮೀರಾ ಬಂದಿದ್ದಾಳೆ. ಈ ನಡೆ ಅನೇಕರಿಗೆ ಅನುಮಾನ ಮೂಡಿಸಿದೆ. ವರ್ಧನ್ ಕಂಪನಿಯವರ ಜತೆ ಮೀರಾ ಸಾಕಷ್ಟು ಕ್ಲೋಸ್ ಆಗಿದ್ದಳು. ಆದಾಗ್ಯೂ ಅವಳು ರಿಸೈನ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದು ಸಂಜುಗೆ ಸಾಕಷ್ಟು ಅನುಮಾನ ಮೂಡಿಸಿತ್ತು. ‘ಮೀರಾ ಕೆಲಸ ಬಿಡೋಕೆ ಸಾಧ್ಯವೇ ಇಲ್ಲ. ಆಕೆ ಕಂಪನಿ ತೊರೆಯುವಂತೆ ಇಲ್ಲ. ಆಕೆಯನ್ನು ಯಾರೂ ಕೆಲಸದಿಂದ ತೆಗೆಯುವಂತೂ ಇಲ್ಲ. ಈ ಬಗ್ಗೆ ಆರ್ಯವರ್ಧನ್ ಇದ್ದಾಗ ಒಪ್ಪಂದ ಆಗಿದೆ’ ಎಂದು ಸಂಜು ಹೇಳಿದ್ದ.
ನಿರ್ಧಾರ ಬದಲಿಸಿದ ಮೀರಾ
ಮೀರಾ ರಿಸೈನ್ ಮಾಡುವುದರ ಹಿಂದೆ ಯಾವ ಉದ್ದೇಶ ಇದೆ ಎಂದು ತಿಳಿದುಕೊಳ್ಳಲು ಅನು ಪ್ರಯತ್ನ ಮಾಡಿದ್ದಳು. ಈ ಕಾರಣಕ್ಕೆ ಮೀರಾಳನ್ನು ಚೇಂಬರ್ಗೆ ಕರೆಸಿಕೊಂಡು ಮಾತನಾಡಿದ್ದಾಳೆ. ‘ನನಗೆ ಒಬ್ಬಂಟಿ ಎನಿಸುತ್ತಿದೆ. ಕೇಶವ್ ಝೇಂಡೆ ಇದ್ದಾಗ ಎಲ್ಲಾ ಕೆಲಸಗಳು ಸುಲಭವಾಗಿ ನಡೆಯುತ್ತಿದ್ದವು. ಆದರೆ, ಈ ರೀತಿ ಅಲ್ಲ’ ಎಂದು ಹೇಳಿದ್ದಾಳೆ ಮೀರಾ. ಇದನ್ನು ಕೇಳಿ ಅನುಗೆ ಶಾಕ್ ಆಗಿದೆ. ಈ ವಿಚಾರದಲ್ಲಿ ಆಕೆ ಮೀರಾಳ ಮನ ಒಲಿಸಿದ್ದಾಳೆ. ಆದರೆ, ಝೇಂಡೆಯನ್ನು ಮತ್ತೆ ಕರೆಸಿಕೊಳ್ಳಬೇಕೋ ಅಥವಾ ಬೇಡವೋ ಎನ್ನುವ ನಿರ್ಧಾರದ ಕುರಿತು ಗೊಂದಲಕ್ಕೆ ಒಳಗಾಗಿದ್ದಾಳೆ.
ಕಂಪನಿಗೆ ಮತ್ತೆ ಬರಲಿದ್ದಾನೆ ಝೇಂಡೆ
ಝೇಂಡೆಯನ್ನು ಮತ್ತೆ ಕಂಪನಿಗೆ ಕರೆಸಿಕೊಳ್ಳುವ ಬಗ್ಗೆ ಅನುಗೆ ಸಾಕಷ್ಟು ಗೊಂದಲಗಳು ಸೃಷ್ಟಿ ಆಗಿದ್ದವು. ಈ ವಿಚಾರದಲ್ಲಿ ಆಕೆ ಹರ್ಷ ಹಾಗೂ ಸಂಜು ಜತೆ ಮಾತನಾಡಿದ್ದಾಳೆ. ಸಂಜು ಹಾಗೂ ಹರ್ಷ ಒಂದೇ ರೀತಿಯ ಅಭಿಪ್ರಾಯ ನೀಡಿದ್ದಾರೆ. ‘ನಮ್ಮ ಮಿತ್ರರನ್ನು ಹತ್ತಿರ ಇಟ್ಟುಕೊಳ್ಳಬೇಕು. ಶತ್ರುಗಳನ್ನು ಇನ್ನೂ ಹತ್ತಿರ ಇಟ್ಟುಕೊಳ್ಳಬೇಕು’ ಎಂದು ಹೇಳಿದ್ದಾನೆ ಹರ್ಷ. ಈ ಕಾರಣಕ್ಕೆ ಝೇಂಡೆಯನ್ನು ಹತ್ತಿರದಲ್ಲೇ ಇಟ್ಟುಕೊಂಡು ಆತನ ವಿರುದ್ಧ ಕತ್ತಿ ಮಸೆಯುವ ತಂತ್ರಕ್ಕೆ ಅನು ಬಂದಿದ್ದಾಳೆ.
ಮೀರಾ ಕೇಳಿದ ಪ್ರಶ್ನೆಗೆ ಅನು ಶಾಕ್
ಆರ್ಯವರ್ಧನ್ ಮೃತಪಟ್ಟಿದ್ದಾನೆ ಅನ್ನೋದಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ಆರ್ಯ ಬದುಕಿದ್ದಾನೆ ಎಂಬುದನ್ನು ಝೇಂಡೆ ಹೇಳಿದ್ದ. ಇದನ್ನು ನಂಬೋಕೆ ಮೀರಾಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆರ್ಯನ ಮರಣ ಪ್ರಮಾಣ ಪತ್ರ ನೀಡುವಂತೆ ಅನು ಬಳಿ ಕೇಳಿದ್ದಾಳೆ ಮೀರಾ. ಇದನ್ನು ಕೇಳಿದ ಅನುಗೆ ಅನುಮಾನ ಮೂಡಿದೆ. ಆಕೆ ಆರ್ಯವರ್ಧನ್ ಮರಣ ಪ್ರಮಾಣಪತ್ರಕ್ಕಾಗಿ ಹುಡುಕಾಡಿದ್ದಾಳೆ.
ಇದನ್ನೂ ಓದಿ: ಮೀರಾ ಮಾಡಿದ ಮಸಲತ್ತಿನ ಬಗ್ಗೆ ಸಂಜುಗೆ ಬಂತು ಅನುಮಾನ; ಝೇಂಡೆಗೆ ಆರ್ಯನೇ ವಿಲನ್
ಅನುಗೆ ಅನುಮಾನ
ಆಸ್ಪತ್ರೆಗೆ ಕರೆ ಮಾಡಿ ಆರ್ಯವರ್ಧನ್ ಮರಣ ಪ್ರಮಾಣ ಪತ್ರದ ಬಗ್ಗೆ ಮಾತನಾಡಿದ್ದಾಳೆ. ಆದರೆ, ಇದಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ. ಅತ್ತೆ ಶಾರದಾದೇವಿ ಬಳಿಯೂ ಡೆತ್ ಸರ್ಟಿಫಿಕೇಟ್ ಬಗ್ಗೆ ಮಾತನಾಡಿದ್ದಾಳೆ. ಅಲ್ಲಿಯೂ ಉತ್ತರ ಸಿಕ್ಕಿಲ್ಲ. ಈ ಎಲ್ಲಾ ಕಾರಣದಿಂದ ಅನುಗೆ ಅನುಮಾನ ಹೆಚ್ಚಿದೆ. ‘ಯಾವುದೋ ಮುಖವೇ ಕಾಣದವರನ್ನು ತಂದು ಇವರೇ ಆರ್ಯವರ್ಧನ್ ಎಂದರು. ನಾನು ಅದನ್ನು ಹೇಗೆ ನಂಬಿದೆ. ತಪ್ಪು ಮಾಡಿಬಿಟ್ಟೆ’ ಎಂದು ಬೇಸರ ಮಾಡಿಕೊಂಡಿದ್ದಾಳೆ ಅನು.
ಇದನ್ನೂ ಓದಿ: ಆರ್ಯ ಸತ್ತಿದಾನೆ ಅನ್ನೋದಕ್ಕೆ ಸಾಕ್ಷಿ ಕೇಳಿದ ಝೇಂಡೆ; ಮೀರಾಗೆ ಶುರುವಾಯ್ತು ಅನುಮಾನ
ಅನುಗೆ ಗೊತ್ತಾಗಲಿದೆ ಸತ್ಯ?
ಸಂಜುನ ಪ್ರತಿ ಹೆಜ್ಜೆ ಅನುಗೆ ಅನುಮಾನ ಮೂಡಿಸುತ್ತಿದೆ. ಆತನನ್ನು ನೋಡಿದಾಗೆಲ್ಲ ಆರ್ಯವರ್ಧನ್ ನೆನಪಾಗುತ್ತಿದ್ದಾನೆ. ಈಗ ಆರ್ಯವರ್ಧನ್ ಡೆತ್ ಸರ್ಟಿಫಿಕೇಟ್ ಸಿಗದೇ ಇದ್ದರೆ ಆತ ಬದುಕಿದ್ದಾನೆ ಅನ್ನೋದು ಪಕ್ಕಾ ಆಗಲಿದೆ. ಇದರಿಂದ ಅನುಗೆ ಸಂಜುನೇ ಆರ್ಯವರ್ಧನ್ ಎನ್ನುವ ಸತ್ಯ ಗೊತ್ತಾಗಬಹುದು. ಸಂಜುಗೂ ಹಳೆಯ ನೆನಪುಗಳು ನಿಧಾನವಾಗಿ ಬರುತ್ತಿದೆ. ಸಂಜುಗೆ ತಾನು ಆರ್ಯವರ್ಧನ್ ಎನ್ನುವ ವಿಚಾರ ಗೊತ್ತಾದರೆ ಎಲ್ಲವನ್ನೂ ನೆನಪಿಸಿಕೊಳ್ಳುವುದು ಮತ್ತಷ್ಟು ಸುಲಭ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.