ಮುಂದಿನ ವರ್ಷದಿಂದ ಹೊಸ ಚಾನೆಲ್ನಲ್ಲಿ ‘ಬಿಗ್ ಬಾಸ್’; ಬೇರೆ ಆ್ಯಂಕರ್ಗೆ ಮಣೆ?
ಬಿಗ್ ಬಾಸ್ ಮನೆ ಒಳಗೆ ಯಾವ ಸ್ಪರ್ಧಿಗಳು ಬರುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಅದರ ಆಧಾರದ ಮೇಲೆ ಟಿಆರ್ಪಿ ನಿರ್ಧಾರ ಆಗುತ್ತದೆ. ಇನ್ನು ವಾರಾಂತ್ಯದ ಎಪಿಸೋಡ್ಗೆ ಹೆಚ್ಚಿನ ಟಿಆರ್ಪಿ ಸಿಗುತ್ತದೆ. ಆದರೆ, ತೆಲುಗಿನಲ್ಲಿ ಈ ಶೋಗೆ ಟಿಆರ್ಪಿ ಸಿಗುತ್ತಿಲ್ಲ.
ಹಲವು ಭಾಷೆಗಳಲ್ಲಿ ಬಿಗ್ ಬಾಸ್ ಫೇಮಸ್ ಆಗಿದೆ. ಈ ವರ್ಷ ಕನ್ನಡ, ಹಿಂದಿ, ತೆಲುಗು ಭಾಷೆಗಳಲ್ಲಿ ಬಿಗ್ ಬಾಸ್ ಏಕಕಾಲಕ್ಕೆ ಆರಂಭ ಆಗಿದೆ. ಕನ್ನಡದಲ್ಲಿ ಸುದೀಪ್, (Sudeep) ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ (Akkineni Nagarjun) ಹಾಗೂ ತಮಿಳಿನಲ್ಲಿ ಕಮಲ್ ಹಾಸನ್ ಅವರು ಈ ಶೋನ ನಡೆಸಿಕೊಡುತ್ತಿದ್ದಾರೆ. ಈಗ ತೆಲುಗು ಕಿರುತೆರೆ ಅಂಗಳದಿಂದ ಹೊಸದೊಂದು ಅಪ್ಡೇಟ್ ಸಿಕ್ಕಿದೆ. ತೆಲುಗು ಬಿಗ್ ಬಾಸ್ಗೆ ಮುಂದಿನ ವರ್ಷದಿಂದ ಹೊಸ ಆ್ಯಂಕರ್ ಬರಲಿದ್ದಾರಂತೆ! ಸದ್ಯ ಈ ವಿಚಾರ ಕೇಳಿ ಒಂದು ವರ್ಗದ ಜನರು ಬೇಸರ ಮಾಡಿಕೊಂಡಿದ್ದಾರೆ.
ಅಕ್ಕಿನೇನಿ ನಾಗಾರ್ಜುನ ಅವರು ತೆಲುಗು ಬಿಗ್ ಬಾಸ್ನ ಹಲವು ಸೀಸನ್ಗಳನ್ನು ನಿರೂಪಣೆ ಮಾಡಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಬೇರೆ ಆ್ಯಂಕರ್ಗಳು ಬಂದಿದ್ದೂ ಇದೆ. ಆದರೆ, ಅಕ್ಕಿನೇನಿ ನಾಗಾರ್ಜುನ ಅವರಿಗೆ ಹೆಚ್ಚು ಚಾರ್ಮ್ ಇರುವ ಕಾರಣ ಪ್ರತಿ ಬಾರಿ ಅವರಿಗೆ ಮಣೆ ಹಾಕುವ ಕೆಲಸ ಆಗುತ್ತಿದೆ. ಆದರೆ, ತೆಲುಗಿನಲ್ಲಿ ಬಿಗ್ ಬಾಸ್ಗೆ ಟಿಆರ್ಪಿ ಕುಸಿಯುತ್ತಿದೆ.
ಬಿಗ್ ಬಾಸ್ ಮನೆ ಒಳಗೆ ಯಾವ ಸ್ಪರ್ಧಿಗಳು ಬರುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಅದರ ಆಧಾರದ ಮೇಲೆ ಟಿಆರ್ಪಿ ನಿರ್ಧಾರ ಆಗುತ್ತದೆ. ಇನ್ನು ವಾರಾಂತ್ಯದ ಎಪಿಸೋಡ್ಗೆ ಹೆಚ್ಚಿನ ಟಿಆರ್ಪಿ ಸಿಗುತ್ತದೆ. ಆದರೆ, ತೆಲುಗಿನಲ್ಲಿ ಈ ಶೋಗೆ ಟಿಆರ್ಪಿ ಸಿಗುತ್ತಿಲ್ಲ. ಇದು ಸ್ಟಾರ್ ಮಾ ವಾಹಿನಯ ಚಿಂತೆಗೆ ಕಾರಣ ಆಗಿದೆ.
ಮೂಲಗಳ ಪ್ರಕಾರ ಮುಂದಿನ ವರ್ಷದಿಂದ ಬೇರೆ ಚಾನೆಲ್ನಲ್ಲಿ ಬಿಗ್ ಬಾಸ್ ಪ್ರಸಾರ ಕಾಣಲಿದೆ. ಇದರ ಜತೆಗೆ ನಿರೂಪಕರನ್ನು ಬದಲಿಸಲು ಆಲೋಚನೆ ನಡೆದಿದೆ. ಅಕ್ಕಿನೇನಿ ನಾಗಾರ್ಜುನ ಬದಲಿಗೆ ಯಾರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸಮಂತಾ ರುತ್ ಪ್ರಭು ಸೇರಿ ಅನೇಕರಿಗೆ ಈ ಶೋನ ನಡೆಸಿಕೊಟ್ಟ ಅನುಭವ ಇದೆ. ಅವರಲ್ಲಿ ಯಾರಿಗೆ ಮಣೆ ಹಾಕಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ ಕುಟುಂಬದವರು; ಹೇಗಿತ್ತು ಸ್ಪರ್ಧಿಗಳ ರಿಯಾಕ್ಷನ್?
ಇನ್ನು ಸ್ಪರ್ಧಿಗಳ ಆಯ್ಕೆಯಲ್ಲೂ ಹೆಚ್ಚಿನ ಎಚ್ಚರಿಕೆ ವಹಿಸಲು ನಿರ್ಧರಿಸಲಾಗಿದೆ. ಖ್ಯಾತ ಸೆಲೆಬ್ರಿಟಿಗಳನ್ನು ಮನೆ ಒಳಗೆ ಕಳುಹಿಸುವ ಆಲೋಚನೆ ಸದ್ಯಕ್ಕಿದೆ. ಹಾಗೆ ಮಾಡಿದ ಬಳಿಕವಾದರೂ ಶೋನ ಟಿಆರ್ಪಿ ಹೆಚ್ಚಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ