AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jothe Jotheyali: ಆರ್ಯವರ್ಧನ್​ ಸತ್ತಿಲ್ಲ ಅನ್ನೋದು ಅನುಗೆ ತಿಳಿದೇ ಹೋಯ್ತು? ಮೀರಾ ಪ್ರಶ್ನೆಯಿಂದ ಮೂಡಿತು ಅನುಮಾನ

Jothe Jotheyali Serial Update: ಆಸ್ಪತ್ರೆಗೆ ಕರೆ ಮಾಡಿ ಆರ್ಯವರ್ಧನ್ ಮರಣ ಪ್ರಮಾಣ ಪತ್ರದ ಬಗ್ಗೆ ಅನು ಮಾತನಾಡಿದ್ದಾಳೆ. ಆದರೆ, ಇದಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ.

Jothe Jotheyali: ಆರ್ಯವರ್ಧನ್​ ಸತ್ತಿಲ್ಲ ಅನ್ನೋದು ಅನುಗೆ ತಿಳಿದೇ ಹೋಯ್ತು? ಮೀರಾ ಪ್ರಶ್ನೆಯಿಂದ ಮೂಡಿತು ಅನುಮಾನ
ಅನು - ಆರ್ಯವರ್ಧನ್​
TV9 Web
| Edited By: |

Updated on: Dec 06, 2022 | 6:30 AM

Share

ಧಾರಾವಾಹಿ: ಜೊತೆ ಜೊತೆಯಲಿ ವಾಹಿನಿ: ಜೀ ಕನ್ನಡ ನಿರ್ದೇಶನ: ಆರೂರು ಜಗದೀಶ ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು ಸಮಯ: ರಾತ್ರಿ: 9.30

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ವರ್ಧನ್ ಕಂಪನಿಯಿಂದ ರಿಸೈನ್ ಮಾಡಬೇಕು ಎನ್ನುವ ನಿರ್ಧಾರಕ್ಕೆ ಮೀರಾ ಬಂದಿದ್ದಾಳೆ. ಈ ನಡೆ ಅನೇಕರಿಗೆ ಅನುಮಾನ ಮೂಡಿಸಿದೆ. ವರ್ಧನ್ ಕಂಪನಿಯವರ ಜತೆ ಮೀರಾ ಸಾಕಷ್ಟು ಕ್ಲೋಸ್ ಆಗಿದ್ದಳು. ಆದಾಗ್ಯೂ ಅವಳು ರಿಸೈನ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದು ಸಂಜುಗೆ ಸಾಕಷ್ಟು ಅನುಮಾನ ಮೂಡಿಸಿತ್ತು. ‘ಮೀರಾ ಕೆಲಸ ಬಿಡೋಕೆ ಸಾಧ್ಯವೇ ಇಲ್ಲ. ಆಕೆ ಕಂಪನಿ ತೊರೆಯುವಂತೆ ಇಲ್ಲ. ಆಕೆಯನ್ನು ಯಾರೂ ಕೆಲಸದಿಂದ ತೆಗೆಯುವಂತೂ ಇಲ್ಲ. ಈ ಬಗ್ಗೆ ಆರ್ಯವರ್ಧನ್ ಇದ್ದಾಗ ಒಪ್ಪಂದ ಆಗಿದೆ’ ಎಂದು ಸಂಜು ಹೇಳಿದ್ದ.

ಇದನ್ನೂ ಓದಿ
Image
ವಿಷ ಇರುವ ಪಾಯಸ ಕುಡಿದು ಆಸ್ಪತ್ರೆ ಸೇರಿದ ಸಂಜು; ಅನುಗೆ ಸಂಕಟ
Image
ಝೇಂಡೆಯ ಅಸಲಿ ಮುಖ ರಿವೀಲ್​; ವಿಲನ್ ಆದ ರಮ್ಯಾ
Image
ಅನು ಸಿರಿಮನೆ-ಸಂಜುನಿಂದ ಮುರಿದು ಬಿತ್ತು ರಮ್ಯಾ ಎಂಗೇಜ್​ಮೆಂಟ್
Image
ಎಲ್ಲರ ಎದುರು ಸಂಜುಗೆ ಆರ್ಯ ಎಂದು ಕರೆದ ಝೇಂಡೆ; ಸಿಟ್ಟಾದ ಅನು ಸಿರಿಮನೆ

ನಿರ್ಧಾರ ಬದಲಿಸಿದ ಮೀರಾ

ಮೀರಾ ರಿಸೈನ್ ಮಾಡುವುದರ ಹಿಂದೆ ಯಾವ ಉದ್ದೇಶ ಇದೆ ಎಂದು ತಿಳಿದುಕೊಳ್ಳಲು ಅನು ಪ್ರಯತ್ನ ಮಾಡಿದ್ದಳು. ಈ ಕಾರಣಕ್ಕೆ ಮೀರಾಳನ್ನು ಚೇಂಬರ್​ಗೆ ಕರೆಸಿಕೊಂಡು ಮಾತನಾಡಿದ್ದಾಳೆ. ‘ನನಗೆ ಒಬ್ಬಂಟಿ ಎನಿಸುತ್ತಿದೆ. ಕೇಶವ್ ಝೇಂಡೆ ಇದ್ದಾಗ ಎಲ್ಲಾ ಕೆಲಸಗಳು ಸುಲಭವಾಗಿ ನಡೆಯುತ್ತಿದ್ದವು. ಆದರೆ, ಈ ರೀತಿ ಅಲ್ಲ’ ಎಂದು ಹೇಳಿದ್ದಾಳೆ ಮೀರಾ. ಇದನ್ನು ಕೇಳಿ ಅನುಗೆ ಶಾಕ್ ಆಗಿದೆ. ಈ ವಿಚಾರದಲ್ಲಿ ಆಕೆ ಮೀರಾಳ ಮನ ಒಲಿಸಿದ್ದಾಳೆ. ಆದರೆ, ಝೇಂಡೆಯನ್ನು ಮತ್ತೆ ಕರೆಸಿಕೊಳ್ಳಬೇಕೋ ಅಥವಾ ಬೇಡವೋ ಎನ್ನುವ ನಿರ್ಧಾರದ ಕುರಿತು ಗೊಂದಲಕ್ಕೆ ಒಳಗಾಗಿದ್ದಾಳೆ.

ಕಂಪನಿಗೆ ಮತ್ತೆ ಬರಲಿದ್ದಾನೆ ಝೇಂಡೆ

ಝೇಂಡೆಯನ್ನು ಮತ್ತೆ ಕಂಪನಿಗೆ ಕರೆಸಿಕೊಳ್ಳುವ ಬಗ್ಗೆ ಅನುಗೆ ಸಾಕಷ್ಟು ಗೊಂದಲಗಳು ಸೃಷ್ಟಿ ಆಗಿದ್ದವು. ಈ ವಿಚಾರದಲ್ಲಿ ಆಕೆ ಹರ್ಷ ಹಾಗೂ ಸಂಜು ಜತೆ ಮಾತನಾಡಿದ್ದಾಳೆ. ಸಂಜು ಹಾಗೂ ಹರ್ಷ ಒಂದೇ ರೀತಿಯ ಅಭಿಪ್ರಾಯ ನೀಡಿದ್ದಾರೆ. ‘ನಮ್ಮ ಮಿತ್ರರನ್ನು ಹತ್ತಿರ ಇಟ್ಟುಕೊಳ್ಳಬೇಕು. ಶತ್ರುಗಳನ್ನು ಇನ್ನೂ ಹತ್ತಿರ ಇಟ್ಟುಕೊಳ್ಳಬೇಕು’ ಎಂದು ಹೇಳಿದ್ದಾನೆ ಹರ್ಷ. ಈ ಕಾರಣಕ್ಕೆ ಝೇಂಡೆಯನ್ನು ಹತ್ತಿರದಲ್ಲೇ ಇಟ್ಟುಕೊಂಡು ಆತನ ವಿರುದ್ಧ ಕತ್ತಿ ಮಸೆಯುವ ತಂತ್ರಕ್ಕೆ ಅನು ಬಂದಿದ್ದಾಳೆ.

ಮೀರಾ ಕೇಳಿದ ಪ್ರಶ್ನೆಗೆ ಅನು ಶಾಕ್

ಆರ್ಯವರ್ಧನ್ ಮೃತಪಟ್ಟಿದ್ದಾನೆ ಅನ್ನೋದಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ಆರ್ಯ ಬದುಕಿದ್ದಾನೆ ಎಂಬುದನ್ನು ಝೇಂಡೆ ಹೇಳಿದ್ದ. ಇದನ್ನು ನಂಬೋಕೆ ಮೀರಾಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆರ್ಯನ ಮರಣ ಪ್ರಮಾಣ ಪತ್ರ ನೀಡುವಂತೆ ಅನು ಬಳಿ ಕೇಳಿದ್ದಾಳೆ ಮೀರಾ. ಇದನ್ನು ಕೇಳಿದ ಅನುಗೆ ಅನುಮಾನ ಮೂಡಿದೆ. ಆಕೆ ಆರ್ಯವರ್ಧನ್ ಮರಣ ಪ್ರಮಾಣಪತ್ರಕ್ಕಾಗಿ ಹುಡುಕಾಡಿದ್ದಾಳೆ.

ಇದನ್ನೂ ಓದಿ: ಮೀರಾ ಮಾಡಿದ ಮಸಲತ್ತಿನ ಬಗ್ಗೆ ಸಂಜುಗೆ ಬಂತು ಅನುಮಾನ; ಝೇಂಡೆಗೆ ಆರ್ಯನೇ ವಿಲನ್

ಅನುಗೆ ಅನುಮಾನ

ಆಸ್ಪತ್ರೆಗೆ ಕರೆ ಮಾಡಿ ಆರ್ಯವರ್ಧನ್ ಮರಣ ಪ್ರಮಾಣ ಪತ್ರದ ಬಗ್ಗೆ ಮಾತನಾಡಿದ್ದಾಳೆ. ಆದರೆ, ಇದಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ. ಅತ್ತೆ ಶಾರದಾದೇವಿ ಬಳಿಯೂ ಡೆತ್​ ಸರ್ಟಿಫಿಕೇಟ್ ಬಗ್ಗೆ ಮಾತನಾಡಿದ್ದಾಳೆ. ಅಲ್ಲಿಯೂ ಉತ್ತರ ಸಿಕ್ಕಿಲ್ಲ. ಈ ಎಲ್ಲಾ ಕಾರಣದಿಂದ ಅನುಗೆ ಅನುಮಾನ ಹೆಚ್ಚಿದೆ. ‘ಯಾವುದೋ ಮುಖವೇ ಕಾಣದವರನ್ನು ತಂದು ಇವರೇ ಆರ್ಯವರ್ಧನ್​ ಎಂದರು. ನಾನು ಅದನ್ನು ಹೇಗೆ ನಂಬಿದೆ. ತಪ್ಪು ಮಾಡಿಬಿಟ್ಟೆ’ ಎಂದು ಬೇಸರ ಮಾಡಿಕೊಂಡಿದ್ದಾಳೆ ಅನು.

ಇದನ್ನೂ ಓದಿ: ಆರ್ಯ ಸತ್ತಿದಾನೆ ಅನ್ನೋದಕ್ಕೆ ಸಾಕ್ಷಿ ಕೇಳಿದ ಝೇಂಡೆ; ಮೀರಾಗೆ ಶುರುವಾಯ್ತು ಅನುಮಾನ

ಅನುಗೆ ಗೊತ್ತಾಗಲಿದೆ ಸತ್ಯ?

ಸಂಜುನ ಪ್ರತಿ ಹೆಜ್ಜೆ ಅನುಗೆ ಅನುಮಾನ ಮೂಡಿಸುತ್ತಿದೆ. ಆತನನ್ನು ನೋಡಿದಾಗೆಲ್ಲ ಆರ್ಯವರ್ಧನ್ ನೆನಪಾಗುತ್ತಿದ್ದಾನೆ. ಈಗ ಆರ್ಯವರ್ಧನ್​ ಡೆತ್​ ಸರ್ಟಿಫಿಕೇಟ್ ಸಿಗದೇ ಇದ್ದರೆ ಆತ ಬದುಕಿದ್ದಾನೆ ಅನ್ನೋದು ಪಕ್ಕಾ ಆಗಲಿದೆ. ಇದರಿಂದ ಅನುಗೆ ಸಂಜುನೇ ಆರ್ಯವರ್ಧನ್ ಎನ್ನುವ ಸತ್ಯ ಗೊತ್ತಾಗಬಹುದು. ಸಂಜುಗೂ ಹಳೆಯ ನೆನಪುಗಳು ನಿಧಾನವಾಗಿ ಬರುತ್ತಿದೆ. ಸಂಜುಗೆ ತಾನು ಆರ್ಯವರ್ಧನ್ ಎನ್ನುವ ವಿಚಾರ ಗೊತ್ತಾದರೆ ಎಲ್ಲವನ್ನೂ ನೆನಪಿಸಿಕೊಳ್ಳುವುದು ಮತ್ತಷ್ಟು ಸುಲಭ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
TV9 Web
TV9 Web

TV9 Kannada

Read More
ಸ್ಟಿಂಗ್: ಸರ್ಕಾರ ಯಾರನ್ನು ರಕ್ಷಿಸುತ್ತಿದೆ? ಪ್ರಲ್ಹಾದ್ ಜೋಶಿ ಪ್ರಶ್ನೆ
ಸ್ಟಿಂಗ್: ಸರ್ಕಾರ ಯಾರನ್ನು ರಕ್ಷಿಸುತ್ತಿದೆ? ಪ್ರಲ್ಹಾದ್ ಜೋಶಿ ಪ್ರಶ್ನೆ
ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ವಸತಿ ಸೌಲಭ್ಯ!
ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ವಸತಿ ಸೌಲಭ್ಯ!
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಮೈಸೂರು:ಕನ್ನಡಾಂಬೆ ಭುವನೇಶ್ವರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?
ಮೈಸೂರು:ಕನ್ನಡಾಂಬೆ ಭುವನೇಶ್ವರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?
ಲವ್ ಮಾಡೋದು ಬಿಟ್ಟು ಆಟವಾಡು: ಸುದೀಪ್ ಎದುರಲ್ಲೇ ಸೌಂದರ್ಯಾಗೆ ಕಿರಣ್ ಟೀಕೆ
ಲವ್ ಮಾಡೋದು ಬಿಟ್ಟು ಆಟವಾಡು: ಸುದೀಪ್ ಎದುರಲ್ಲೇ ಸೌಂದರ್ಯಾಗೆ ಕಿರಣ್ ಟೀಕೆ
ಬೆಳಗಾವಿಯಲ್ಲಿ ಕಳೆಗಟ್ಟಿದ ಕನ್ನಡ ಹಬ್ಬ
ಬೆಳಗಾವಿಯಲ್ಲಿ ಕಳೆಗಟ್ಟಿದ ಕನ್ನಡ ಹಬ್ಬ