Arvind Trivedi: ರಾಮಾಯಣದ ರಾವಣ ಪಾತ್ರಧಾರಿ ಹಿರಿಯ ನಟ ಅರವಿಂದ ತ್ರಿವೇದಿ ಹೃದಯಾಘಾತದಿಂದ ನಿಧನ

ಅರವಿಂದ ತ್ರಿವೇದಿ: ರಾಮಾಯಣ ಧಾರವಾಹಿಯಲ್ಲಿ ರಾವಣನ ಪಾತ್ರ ನಿರ್ವಹಿಸಿದ್ದ ಹಿರಿಯ ನಟ ಅರವಿಂದ ತ್ರಿವೇದಿ (82) ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

Arvind Trivedi: ರಾಮಾಯಣದ ರಾವಣ ಪಾತ್ರಧಾರಿ ಹಿರಿಯ ನಟ ಅರವಿಂದ ತ್ರಿವೇದಿ ಹೃದಯಾಘಾತದಿಂದ ನಿಧನ
ಅರವಿಂದ ತ್ರಿವೇದಿ (82)
Updated By: shruti hegde

Updated on: Oct 06, 2021 | 8:52 AM

ಜನಪ್ರಿಯ ರಾಮಾಯಣ ಧಾರವಾಹಿಯಲ್ಲಿ ರಾವಣನ ಪಾತ್ರ ನಿರ್ವಹಿಸಿದ್ದ ಹಿರಿಯ ನಟ ಅರವಿಂದ ತ್ರಿವೇದಿ (82) ಮಂಗಳವಾರ ರಾತ್ರಿ (ಅಕ್ಟೋಬರ್, 5) ನಿಧನರಾಗಿದ್ದಾರೆ. ಹೃದಯಾಘಾತದಿಂದ ನಟ ಅರವಿಂದ ತ್ರಿವೇದಿ ನಿಧನರಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ರಾಮಾಯಣ ಧಾರವಾಹಿಯಲ್ಲಿ ನಟಿಸುತ್ತಿದ್ದ ಸಹ ನಟ ಸುನೀಲ್ ಲಾಹ್ರಿ ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದು ಬಹಳ ದುಃಖದ ಸಂಗತಿ. ನಮ್ಮ ಪ್ರೀತಿಯ ಹಿರಿಯ ನಟ ಅರಿವಿಂದ ತ್ರಿವೇದಿ ಇನ್ನು ಮುಂದೆ ನಮ್ಮೊಂದಿಗಿಲ್ಲ. ನನ್ನ ಮಾರ್ಗದರ್ಶಕ, ಹಿತೈಷಿಯನ್ನು ನಾನು ಕಳೆದುಕೊಂಡೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಅವರು ಅಸ್ವಸ್ಥರಾಗಿದ್ದರು, ಕಳೆದ ಮೂರು ವರ್ಷಗಳಿಂದ ಪರಿಸ್ಥಿತಿ ಹದಗೆಟ್ಟಿತ್ತು, ಕೆಲವು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅರವಿಂದ ಅವರ ಸೋದರಳಿಯ ಕೌಸ್ತುಭ್ ತ್ರಿವೇದಿ ಹೇಳಿರುವುದಾಗಿ ಎಬಿಪಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ತಿಂಗಳಷ್ಟೇ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಮಂಗಳವಾರ ರಾತ್ರಿ ಸುಮಾರು 9:30 ರ ಸಮಯದಲ್ಲಿ ಹೃದಯಾಘಾತಕ್ಕೊಳಗಾಗಿದ್ದಾರೆ. ಮುಂಬೈನಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬುಧವಾರ (ಅಕ್ಟೋಬರ್, 6) ಬೆಳಿಗ್ಗೆ ಅಂತಿಮ ಸಂಸ್ಕಾರವನ್ನು ನಡೆಸಲಾಗುವುದು ಎಂಬ ಮಾಹಿತಿಯನ್ನು ಕೌಸ್ತುಭ್ ಹೇಳಿದ್ದಾರೆ.

ಇದನ್ನೂ ಓದಿ:

ಕನ್ನಡದ ಬಹುಬೇಡಿಕೆಯ ಡೈಲಾಗ್​ ರೈಟರ್​​ ಗುರು ಕಶ್ಯಪ್​ ನಿಧನ; ಕಂಬನಿ ಮಿಡಿಯುತ್ತಿರುವ ಸ್ಯಾಂಡಲ್​ವುಡ್​

ಖ್ಯಾತ ಮಲಯಾಳಂ ನಟ ರಿಜಬಾವ ನಿಧನ; ಸ್ಟೈಲಿಶ್​ ವಿಲನ್​ ಅಗಲಿಕೆಗೆ ಮಾಲಿವುಡ್​ ಸಂತಾಪ

Published On - 8:30 am, Wed, 6 October 21