AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್​ ಬಾಸ್ ಮನೆಯೊಳಗೆ ಮಾಜಿ ಗೆಳತಿ ಬಂದರೆ ತನಗೇನೂ ಸಮಸ್ಯೆ ಇಲ್ಲ’ ಎಂದ ಕರಣ್ ಕುಂದ್ರಾ

ಬಿಗ್ ಬಾಸ್ 15ರ ಸ್ಪರ್ಧಿ ಕರಣ್ ಕುಂದ್ರಾ ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲಿ ಅಚ್ಚರಿಯ ವಿಚಾರ ಹೊರಹಾಕಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಅವರ ಮಾಜಿ ಗೆಳತಿ ಪ್ರವೇಶಿಸಿದರೂ ತಮಗೇನೂ ಸಮಸ್ಯೆ ಇಲ್ಲ ಎಂದು ಅವರು ಹೇಳಿದ್ದಾರೆ.

‘ಬಿಗ್​ ಬಾಸ್ ಮನೆಯೊಳಗೆ ಮಾಜಿ ಗೆಳತಿ ಬಂದರೆ ತನಗೇನೂ ಸಮಸ್ಯೆ ಇಲ್ಲ’ ಎಂದ ಕರಣ್ ಕುಂದ್ರಾ
ಅನುಷಾ ದಾಂಡೇಕರ್, ಕರಣ್ ಕುಂದ್ರಾ
TV9 Web
| Updated By: shivaprasad.hs|

Updated on: Oct 05, 2021 | 1:08 PM

Share

ಬಿಗ್ ಬಾಸ್ 15ರ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ಕರಣ ಕುಂದ್ರಾ ಇತ್ತೀಚೆಗೆ ಲೀಡಿಂಗ್ ಡೈಲಿಯೊಂದಿಗೆ ಮಾತನಾಡುತ್ತಾ, ತಮ್ಮ ಮಾಜಿ ಗೆಳತಿ ಅನುಷಾ ದಾಂಡೆಕರ್ ಬಿಗ್ ಬಾಸ್ ಮನೆಯೊಳಗೆ ಬಂದರೆ ಏನೂ ಸಮಸ್ಯೆ ಇಲ್ಲ ಎಂದಿದ್ದಾರೆ. ‘‘ಅನುಷಾ ಬಿಗ್ ಬಾಸ್ ಮನೆಯೊಳಗೆ ಬಂದರೆ ಏನೂ ಸಮಸ್ಯೆ ಇಲ್ಲ. ನಾವು ಒಟ್ಟಿಗೆ ಇದ್ದೆವು. ಆದ್ದರಿಂದ ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ’’ ಎಂದು ಅವರು ನುಡಿದಿದ್ದಾರೆ.

ಮೂರು ವರ್ಷ ಜೊತೆಗಿದ್ದ ಈ ಜೋಡಿ ನಂತರ ಬೇರೆಯಾಗಿತ್ತು. ನಂತರ ಕರಣ್ ಕುಂದ್ರಾ ಅಧಿಕೃತವಾಗಿ ಯಾರೊಂದಿಗೂ ಕಾಣಿಸಿಕೊಂಡಿಲ್ಲ. ಈ ಕುರಿತು ಅವರು ತಾನು ಸಿಂಗಲ್, ಮಿಂಗಲ್ ಆಗಲು ಇಷ್ಟವಿಲ್ಲ ಎಂದಿದ್ದರು. ‘‘ರಿಯಾಲಿಟಿ ಶೋಗಳಲ್ಲಿ ಭಾವನಾತ್ಮಕ ಸನ್ನಿವೇಶಗಳ ಮುಖಾಂತರ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಲಾಗುತ್ತದೆ. ಆದರೆ ನನಗೆ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ನಾನು ಜನರಿಗೆ ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ ಎನ್ನುತ್ತೇನೆ. ಕಾರಣ, ಶೋ ಮುಗಿದ ತಕ್ಷಣ ನೈಜ ವ್ಯಕ್ತಿಗಳೊಂದಿಗೆ ನಾವು ಬದುಕಬೇಕು’’ ಎಂದಿದ್ದರು.

ಅನುಷಾ ದಾಂಡೇಕರ್ ಹಾಗೂ ಕರಣ್ ಕುಂದ್ರಾರ ಪ್ರೀತಿ ಬಾಲಿವುಡ್​ ಸಿನಿಮಾದಂತೆ ಆರಂಭವಾಗಿತ್ತು. ಏರ್​ಪೋರ್ಟ್​ನಲ್ಲಿ ಪರಿಚಯವಾದ ನಂತರ ಅವರಿಬ್ಬರೂ ಒಟ್ಟಿಗೆ ಸುತ್ತಾಡಿದ್ದರು. ಸುಮಾರು 3 ವರ್ಷಗಳ ಕಾಲ ಒಟ್ಟಿಗಿದ್ದ ಈ ಜೋಡಿ ನಂತರ ದೂರವಾಗಿತ್ತು. ಈ ಕುರಿತು ನಿರೂಪಕಿ, ಅನುಷಾ ಬೇಸರದಿಂದ ಬರೆದುಕೊಂಡಿದ್ದರು. ಅವರು ನಡೆಸುತ್ತಿದ್ದ ಪ್ರೀತಿಯ ಕುರಿತಾದ ಶೋನಲ್ಲಿ ತಾನು ತನ್ನ ಜೀವನದ ಅನುಭವಗಳ ಕುರಿತೇ ಹೇಳುತ್ತಿದ್ದೆ. ಅಷ್ಟು ಚೆನ್ನಾಗಿ ತಾನು ಅದರಲ್ಲಿ ತೊಡಗಿದ್ದೆ ಎಂದು ಅವರು ಈ ವರ್ಷದ ಆರಂಭದಲ್ಲಿ ಬರೆದುಕೊಂಡಿದ್ದರು. ಸಂಬಂಧ ಮುರಿಯಲು ಕರಣ್ ಕಾರಣ ಎಂದೂ ಅವರು ಹೇಳಿದ್ದರು.

ಇನ್ಸ್ಟಾಗ್ರಾಂ ಮೂಲಕ ಕರಣ್ ಕುಂದ್ರಾ ತಮಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಅನುಷಾ ಆರೋಪಿಸಿದ್ದರು. ಈ ಕುರಿತು ತಾನು ಕ್ಷಮೆ ಕೇಳುವುದನ್ನು ಕಾಯುತ್ತಿದ್ದೆ. ಆದರೆ ಅತ್ತ ಕಡೆಯಿಂದ ಕ್ಷಮೆಯೂ ಕೇಳಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು. ‘‘ಹೌದು. ನನಗೆ ಮೋಸವಾಗಿದೆ. ಸುಳ್ಳು ಹೇಳಿದ್ದಾರೆ. ಇದಕ್ಕಾಗಿ ನಾನು ಅವರು ಕ್ಷಮೆ ಕೇಳುತ್ತಾರೆ ಎಂದು ಕಾಯುತ್ತಿದ್ದೆ. ಆದರೆ ಅವರು ಕ್ಷಮೆ ಕೇಳಲಿಲ್ಲ. ಹೌದು, ನಾನು ಈ ಎಲ್ಲದರಿಂದ ಹೊರ ಬಂದು ಬೆಳೆಯುತ್ತಿದ್ದೇನೆ. ಕೇವಲ ಧನಾತ್ಮಕತೆಯ ಕುರಿತು ಮಾತ್ರ ಯೋಚಿಸುತ್ತೇನೆ’’ ಎಂದಿದ್ದರು.

ಇದನ್ನೂ ಓದಿ:

ಬಿಗ್​ ಬಾಸ್​ 15ಕ್ಕೆ ಸಲ್ಮಾನ್​-ರಣವೀರ್​ ಕೊಟ್ರು ಅದ್ದೂರಿ ಚಾಲನೆ; ಇಲ್ಲಿದೆ ಸ್ಪರ್ಧಿಗಳ ಪಟ್ಟಿ

ಗಣೇಶ್​ ಚಿತ್ರದ ನಟಿಗೆ ಇದೆ ವಾಸಿಯಾಗದ ಕಾಯಿಲೆ; ಮದುವೆ ಬಳಿಕ ಸತ್ಯ ತೆರೆದಿಟ್ಟ ಯಾಮಿ ಗೌತಮ್

ಶಾರುಖ್​ ಪುತ್ರನಿಗೆ ಎನ್​ಸಿಬಿ ಫುಲ್​ ಗ್ರಿಲ್​; ಆರ್ಯನ್​ ಖಾನ್​ಗೆ ಕೇಳಲಾಗ್ತಿವೆ ಅತೀ ಮುಖ್ಯ ಪ್ರಶ್ನೆಗಳು