Roopesh Shetty: ರೂಪೇಶ್ ಶೆಟ್ಟಿಗೋಸ್ಕರ ದೊಡ್ಡ ತ್ಯಾಗ ಮಾಡಲು ಮುಂದಾದ ಆರ್ಯವರ್ಧನ್ ಗುರೂಜಿ

ರೂಪೇಶ್ ಶೆಟ್ಟಿಯನ್ನು ಮಗ ಎಂದೇ ಕರೆಯಲು ಆರಂಭಿಸಿದರು ಆರ್ಯವರ್ಧನ್. ಇವರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಒಬ್ಬರನ್ನೊಬ್ಬರು ಯಾವಾಗಲು ಬಿಟ್ಟುಕೊಡುತ್ತಿಲ್ಲ.

Roopesh Shetty: ರೂಪೇಶ್ ಶೆಟ್ಟಿಗೋಸ್ಕರ ದೊಡ್ಡ ತ್ಯಾಗ ಮಾಡಲು ಮುಂದಾದ ಆರ್ಯವರ್ಧನ್ ಗುರೂಜಿ
ಆರ್ಯವರ್ಧನ್​-ರೂಪೇಶ್
Edited By:

Updated on: Dec 26, 2022 | 12:00 PM

‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ (BBK 9)  ಆರ್ಯವರ್ಧನ್ ಗುರೂಜಿ ಅವರು ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಅವರು ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟವಾಗುತ್ತದೆ. ಅವರು ಆಡುವ ಮಾತುಗಳಿಂದ ಕೆಲವರಿಗೆ ಬೇಸರ ಆಗಿದ್ದೂ ಇದೆ. ಕೆಲ ಸಂದರ್ಭದಲ್ಲಿ ಅವರ ಕಾಮಿಡಿಗಳು ಇಷ್ಟವಾಗುತ್ತದೆ. ಈಗ ಅವರು ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದಿವ್ಯಾ ಉರುಡುಗ, ದೀಪಿಕಾ ದಾಸ್, ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ (Roopesh Shetty) ಹಾಗೂ ರಾಕೇಶ್ ಅಡಿಗ ಇದ್ದಾರೆ. ಈಗ ರೂಪೇಶ್ ಶೆಟ್ಟಿಗೋಸ್ಕರ ತ್ಯಾಗ ಮಾಡಲು ಆರ್ಯವರ್ಧನ್ ರೆಡಿ ಆಗಿದ್ದಾರೆ.

ರೂಪೇಶ್ ಶೆಟ್ಟಿ ಹಾಗೂ ಆರ್ಯವರ್ಧನ್ ಗುರೂಜಿ ಒಟಿಟಿ ಸೀಸನ್​ಗೆ ಮೊದಲ ಬಾರಿಗೆ ಕಾಲಿಟ್ಟರು. 45 ದಿನಗಳ ಅವಧಿಯಲ್ಲಿ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಆರ್ಯವರ್ಧನ್ ಅವರನ್ನು ತಂದೆ ಎಂದು ರೂಪೇಶ್ ಶೆಟ್ಟಿ ಕರೆಯಲು ಆರಂಭಿಸಿದರು. ಟಿವಿ ಸೀಸನ್​ನಲ್ಲಿ ಇಬ್ಬರೂ ಮತ್ತಷ್ಟು ಕ್ಲೋಸ್ ಆದರು. ರೂಪೇಶ್ ಶೆಟ್ಟಿಯನ್ನು ಮಗ ಎಂದೇ ಕರೆಯಲು ಆರಂಭಿಸಿದರು ಆರ್ಯವರ್ಧನ್. ಇವರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಒಬ್ಬರನ್ನೊಬ್ಬರು ಯಾವಾಗಲು ಬಿಟ್ಟುಕೊಡುತ್ತಿಲ್ಲ.

ಕಳೆದ ವಾರ ‘ಬಿಗ್ ಬಾಸ್​’ ನೀಡಿದ ಟಾಸ್ಕ್ ಒಂದರಲ್ಲಿ ಆರ್ಯವರ್ಧನ್​​​ಗೆ ಆಟ ಬಿಟ್ಟುಕೊಟ್ಟರು ರೂಪೇಶ್ ಶೆಟ್ಟಿ. ಆಗ ಆರ್ಯವರ್ಧನ್ ಕಣ್ಣೀರು ಹಾಕಿದ್ದರು. ‘ನನ್ನ ಮಗ ಗೆಲ್ಲಬೇಕಿತ್ತು’ ಎಂದು ಹೇಳಿದ್ದರು. ಈ ವಿಚಾರದ ಬಗ್ಗೆ ಸುದೀಪ್ ಚರ್ಚೆ ಮಾಡಿದರು. ‘ಆ ಟಾಸ್ಕ್​​ನಲ್ಲಿ ರೂಪೇಶ್ ಶೆಟ್ಟಿ ಗೆಲ್ಲಬೇಕಿತ್ತು. ಅವನಿಂದ ನಾನು ಪಾಯಿಂಟ್ಸ್ ಕಿತ್ತುಕೊಂಡೆ ಎಂದು ಅನಿಸಿ ಬೇಸರ ಆಯಿತು. ಅದಕ್ಕೆ ಕಣ್ಣೀರು ಹಾಕಿದೆ’ ಎಂದರು ಆರ್ಯವರ್ಧನ್.

ಇದನ್ನೂ ಓದಿ
Arun Sagar: ಬಿಗ್​ ಬಾಸ್​ನಿಂದ ಅರುಣ್​ ಸಾಗರ್​ ಎಲಿಮಿನೇಟ್​; ಫಿನಾಲೆಯ ಸಮೀಪದಲ್ಲಿ ಮುಗ್ಗರಿಸಿದ ಕಲಾವಿದ
ಬಿಗ್ ಬಾಸ್ ಗೆದ್ರೆ ಆರ್ಯವರ್ಧನ್​-ರೂಪೇಶ್​ ಸ್ಪೀಚ್ ಹೇಗಿರುತ್ತದೆ? ಸುದೀಪ್​ ಎದುರು ಮಿಮಿಕ್ರಿ ಮಾಡಿ ತೋರಿಸಿದ ಮನೆ ಮಂದಿ
ಬಿಗ್ ಬಾಸ್​ಗೆ ವೈಲ್ಡ್ ಕಾರ್ಡ್ ಮೂಲಕ ಮರು ಎಂಟ್ರಿ ಪಡೆದ ದೀಪಿಕಾ ದಾಸ್​ಗೆ ಇದು ನಿರ್ಣಾಯಕ ವಾರ

ಇದನ್ನೂ ಓದಿ: ಬಿಗ್ ಬಾಸ್​ಗೆ ವೈಲ್ಡ್ ಕಾರ್ಡ್ ಮೂಲಕ ಮರು ಎಂಟ್ರಿ ಪಡೆದ ದೀಪಿಕಾ ದಾಸ್​ಗೆ ಇದು ನಿರ್ಣಾಯಕ ವಾರ

‘ಟ್ರೋಫಿ ಸಂದರ್ಭ ಬಂದರೆ ಹೇಗೆ’ ಎಂದು ಮರು ಪ್ರಶ್ನೆ ಮಾಡಿದರು ಸುದೀಪ್​. ‘ಯಾವುದೇ ಸಂದರ್ಭ ಇರಲಿ. ಬಿಗ್ ಬಾಸ್ ರೂಪೇಶ್ ಶೆಟ್ಟಿ ಗೆಲ್ಲಬೇಕು. ನಾನು ಇಲ್ಲಿ ಇರೋಕೆ ಬಂದಿದೀನಿ, ಗೆಲ್ಲೋಕೆ ಅಲ್ಲ’ ಎಂದರು ಆರ್ಯವರ್ಧನ್​. ಈ ಮೂಲಕ ರೂಪೇಶ್ ಶೆಟ್ಟಿಗೋಸ್ಕರ ಕಪ್​ ತ್ಯಾಗ ಮಾಡುವ ಮಾತನ್ನು ಆರ್ಯವರ್ಧನ್ ಹೇಳಿದ್ದಾರೆ. ಅವರ ಮಾತನ್ನು ಕೇಳಿ ಸುದೀಪ್​ಗೆ ಖುಷಿ ಆಯಿತು. ‘ಸೋ ಸ್ವೀಟ್ ಆಫ್ ಯೂ ಸರ್​’ ಎಂದರು ಸುದೀಪ್. ​

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ