
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ (Ashwini Gowda) ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ. ಗಿಲ್ಲಿ ನಟ ಅವರು ವಿನ್ನರ್ ಆಗಿದ್ದಾರೆ. ಗಿಲ್ಲಿನೇ ವಿನ್ನರ್ ಎಂಬುದು ಸೀಸನ್ ಆರಂಭದಲ್ಲೇ ಕೆಲವರಿಗೆ ಅನಿಸಿತ್ತು. ಅವರಿಗೆ ಸೃಷ್ಟಿಯಾದ ಅಭಿಮಾನಿ ವರ್ಗವೇ ಇದಕ್ಕೆ ಕಾರಣ. ಆದರೆ, ಗಿಲ್ಲಿ ಗೆಲುವಿನ ಬಗ್ಗೆ ಅಶ್ವಿನಿ ಗೌಡ ಪ್ರಶ್ನೆ ಮಾಡುತ್ತಿದ್ದಾರೆ. ನಿಜವಾದ ವೋಟ್ ಸಂಖ್ಯೆ ಆಚೆ ಬಂದರೆ ವಿನ್ನರ್ ಬದಲಾಗುತ್ತಾರೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಗಿಲ್ಲಿ ನಟನಿಗೆ ವಿನ್ನರ್ ಪಟ್ಟ ಸಿಕ್ಕಿದ್ದನ್ನು ಅಶ್ವಿನಿ ಒಪ್ಪಿಕೊಳ್ಳಲು ರೆಡಿ ಇಲ್ಲ. ಗಿಲ್ಲಿ ಬಡವ ಎಂಬ ಕಾರ್ಡ್ ಪ್ಲೇ ಮಾಡಿ ವಿನ್ ಆದ ಎಂಬುದು ಅಶ್ವಿನಿ ಆರೋಪ. ‘ಬಡವರ ಮಕ್ಕಳಗೆಲ್ಲಬೇಕು ನಿಜ. ಆದರೆ, ಗಿಲ್ಲಿ ಬಡವನಾ? ಅರ್ಹ ವ್ಯಕ್ತಿಗೆ ವಿನ್ನರ್ ಪಟ್ಟ ಸಿಕ್ಕಿದೆ ಎಂದು ನನಗೆ ಅನಿಸುತ್ತಿಲ್ಲ’ ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ಈಗ ಅಶ್ವಿನಿ ಗೌಡ ಬೇರೆ ರೀತಿಯ ಆರೋಪ ಮಾಡಿದ್ದಾರೆ. ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡಿದ ಅಶ್ವಿನಿ, ‘ನನಗೂ, ಗಿಲ್ಲಿಗೂ ಬಂದ ಮತಗಳ ಮಧ್ಯೆ ಅಜಗಜಾಂತರ ವ್ಯತ್ಯಾಸ ಇದೆ ಎಂಬುದು ನನಗೆ ಬಂದ ಮಾಹಿತಿ. ಆ ಸಂಖ್ಯೆ ಹೊರಹಾಕಿದೆ ನಾನೇ ವಿನ್ನರ್’ ಎಂದು ಅಶ್ವಿನಿ ಹೇಳಿದ್ದಾರೆ.
‘ಬಿಗ್ ಬಾಸ್’ ಕಾಮಿಡಿ ಶೋ ಅಲ್ಲ ಎಂಬುದು ಅಶ್ವಿನಿ ಅಭಿಪ್ರಾಯ. ‘ಸುದೀಪ್ ಅವರು ಈ ಬಾರಿಯಾದರೂ ಮಹಿಳೆಯರ ಕೈ ಎತ್ತುತ್ತಾರೆ ಎಂದುಕೊಂಡಿದ್ದೆ. ಆದರೆ, ನನ್ನ ಕೈ ಬಿಡ್ತಾರೆ ಅಂತ ಅಂದುಕೊಂಡಿರಲಿಲ್ಲ’ ಎಂದು ಅಶ್ವಿನಿ ಹೇಳಿದ್ದಾರೆ.
ಇದನ್ನೂ ಓದಿ: ‘ಅವರು ಹಾಗೆ ಹೇಳೋಕೆ ಸಾಧ್ಯವಿಲ್ಲ’; ಅಶ್ವಿನಿ ಗೌಡ ಬಗ್ಗೆ ಗಿಲ್ಲಿಗೆ ಎಷ್ಟು ಗೌರವ ನೋಡಿ
ಗಿಲ್ಲಿ ನಟ ಅವರು ಅಶ್ವಿನಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಮಾತಿನ ಭರದಲ್ಲಿ ಅವರು ಹಾಗೆ ಹೇಳಿರಬಹುದು’ ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ. ಗಿಲ್ಲಿ ಅವರಿಗೆ ಅವಾರ್ಡ್ ಜೊತೆ ಸಾಕಷ್ಟು ಹಣ ಸಿಕ್ಕಿದೆ. ಅವರು ತಮ್ಮ ಹುಟ್ಟೂರಲ್ಲಿ ರ್ಯಾಲಿ ನಡೆಸಿದ್ದು ಸಾಕಷ್ಟು ಜನರು ಇದಕ್ಕೆ ಸೇರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.