
‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮ ಮುಗಿದ ಬಳಿಕ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಕಾರ್ಯಕ್ರಮ ಶುರುವಾಗಲಿದೆ. ಈ ಕಾರ್ಯಕ್ರಮದಲ್ಲಿ ಯಾರೆಲ್ಲ ಸ್ಪರ್ಧಿಸಲಿದ್ದಾರೆ ಎಂಬುದು ಈಗಾಗಲೇ ಬಹಿರಂಗ ಆಗಿದೆ. ವಿಶೇಷ ಏನೆಂದರೆ, ಹನುಮಂತ ಅವರು ಹೊಸದಾಗಿ ಈ ಶೋಗೆ ಸೇರ್ಪಡೆ ಆಗಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದಲ್ಲಿ ಫೈನಲಿಸ್ಟ್ ಆಗಿರುವ ಅವರಿಗೆ ಇದು ಹೊಸ ಅವಕಾಶ. ಬಿಗ್ ಬಾಸ್ ಮುಗಿಯುವುದಕ್ಕೂ ಮುನ್ನವೇ ಇಂಥ ಚಾನ್ಸ್ ಸಿಕ್ಕಿದ್ದಕ್ಕೆ ಅವರಿಗೆ ಖುಷಿ ಆಗಿದೆ.
ಹನುಮಂತ ಅವರ ವ್ಯಕ್ತಿತ್ವ ತುಂಬ ಡಿಫರೆಂಟ್. ಹಳ್ಳಿಯಿಂದ ಬಂದಿರುವ ಅವರು ತುಂಬ ಸಿಂಪಲ್. ಬಣ್ಣದ ಲೋಕದಲ್ಲಿ ಇದ್ದರೂ ಕೂಡ ಅವರೂ ಬಣ್ಣ ಬದಲಿಸುವುದಿಲ್ಲ. ನೇರ ನಡೆ-ನಡಿಯ ಕಾರಣಕ್ಕೆ ಅವರು ಎಲ್ಲರಿಗೂ ಇಷ್ಟ ಆಗಿದ್ದಾರೆ. ಆದ್ದರಿಂದಲೇ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಂದ ಮೆಚ್ಚುಗೆ ಸಿಕ್ಕಿತು. ಈಗ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋನಲ್ಲಿ ಅವರು ಯಾವ ರೀತಿ ಮನರಂಜನೆ ನೀಡುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.
ಬಿಗ್ ಬಾಸ್ ಮನೆಗೆ ಹನುಮಂತ ಬಂದಿದ್ದು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ. ಅವರು ಬಂದ ಬಳಿಕ ಶೋ ಸ್ವರೂಪ ಬದಲಾಗಿದ್ದು ನಿಜ. ಮುಗ್ಧತೆಯ ಕಾರಣದಿಂದ ಹನುಮಂತ ಅವರು ಗಮನ ಸೆಳೆದರು. ಕೊಟ್ಟಮಾತಿಗೆ ಅವರು ಎಂದಿಗೂ ತಪ್ಪಿಲ್ಲ. ಯಾರ ಜೊತೆ ಎಷ್ಟೇ ಸ್ನೇಹ ಇದ್ದರೂ ಕೂಡ ಅವರು ಆಟದಲ್ಲಿ ಪಕ್ಷಪಾತ ಮಾಡಿಲ್ಲ. ಹಾಗಾಗಿ ಅವರಿಗೆ ಫ್ಯಾನ್ಸ್ ಸಂಖ್ಯೆ ಹೆಚ್ಚಾಯಿತು.
ಇದನ್ನೂ ಓದಿ: ಸುದೀಪ್ ಇಲ್ಲದ ಬಿಗ್ ಬಾಸ್ ಊಹಿಸೋಕೆ ಆಗಲ್ಲ; ಮುಂದಿನ ಆಯ್ಕೆ ಏನು?
ಫೆಬ್ರವರಿ 1ರಿಂದ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಕಾರ್ಯಕ್ರಮ ಶುರುವಾಗಲಿದೆ. ಶೀರ್ಷಿಕೆಯೇ ಹೇಳುವಂತೆ ಹೆಣ್ಮಕ್ಕಳು ಮತ್ತು ಗಂಡ್ಮಕ್ಕಳ ನಡುವೆ ನಡೆಯುವ ಜಿದ್ದಾಜಿದ್ದಿಯೇ ಈ ಕಾರ್ಯಕ್ರಮದ ಹೈಲೈಟ್. ಹನುಮಂತನ ಜೊತೆ ನಿವೇದಿತಾ ಗೌಡ, ಪಾವಗಡ ಮಂಜು, ಐಶ್ವರ್ಯಾ ಸಿಂಧೋಗಿ, ರಜತ್, ಭವ್ಯಾ ಗೌಡ ಮುಂತಾದವರು ‘ಬಾಯ್ಸ್ ವರ್ಸಸ್ ಗರ್ಲ್ಸ್’ ಭಾಗವಹಿಸಲಿದ್ದಾರೆ. ಈ ರಿಯಾಲಿಟಿ ಶೋ ನೋಡಲು ವೀಕ್ಷಕರು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.