ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ತ್ರಿವಿಕ್ರಮ್; ವಿನ್ನರ್ ಆದ ಹನುಮಂತ

|

Updated on: Jan 27, 2025 | 12:00 AM

119 ದಿನಗಳ ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಆಟಕ್ಕೆ ತೆರೆ ಬಿದ್ದಿದೆ. ಗ್ರ್ಯಾಂಡ್ ಆಗಿ ನಡೆದ ಫಿನಾಲೆ ಸಂಚಿಕೆಯಲ್ಲಿ ವಿನ್ನರ್ ಯಾರು ಎಂಬುದನ್ನು ಘೋಷಿಸಲಾಗಿದೆ. ಹಳ್ಳಿ ಹೈದ ಹನುಮಂತ ಅವರು ವಿನ್ನರ್ ಆಗಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿದ್ದ ತ್ರಿವಿಕ್ರಮ್ ಅವರು ರನ್ನರ್ ಆಪ್ ಆಗಿದ್ದಾರೆ. ರಜತ್ ಅವರು 2ನೇ ರನ್ನರ್ ಅಪ್​ ಆಗಿ ಹೊರ ಹೊಮ್ಮಿದ್ದಾರೆ.

ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ತ್ರಿವಿಕ್ರಮ್; ವಿನ್ನರ್ ಆದ ಹನುಮಂತ
Kichcha Sudeep, Hanumantha, Trivikram
Follow us on

ನೋಡನೋಡುತ್ತಿದ್ದಂತೆಯೇ ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಆಟದಲ್ಲಿ 119 ದಿನಗಳ ಕಳೆದು ಹೋಗಿವೆ. ಝಗಮಗಿಸುವ ವೇದಿಕೆಯಲ್ಲಿ ಫಿನಾಲೆ ಕಾರ್ಯಕ್ರಮ ಮಾಡಲಾಗಿದೆ. ಕೊನೇ ಹಂತದಲ್ಲಿ ಯಾರು ಬಿಗ್ ಬಾಸ್ ಟ್ರೋಫಿ ಗೆಲ್ಲುತ್ತಾರೆ ಎಂಬ ಕೌತುಕ ಎಲ್ಲರಿಗೂ ಇತ್ತು. ಕಿಚ್ಚ ಸುದೀಪ್ ಅವರು ಇಂದು (ಜನವರಿ 26) ವಿನ್ನರ್ ಯಾರು ಎಂಬುದನ್ನು ಘೋಷಿಸಿದರು. ಸರಳತೆ ಮೂಲಕವೇ ಸೌಂಡು ಮಾಡಿದ್ದ ಹನುಮಂತ ಅವರು ವಿನ್ನರ್ ಪಟ್ಟ ಪಡೆದರು. ತ್ರಿವಿಕ್ರಮ್ ಅವರು ರನ್ನರ್​ ಅಪ್​ ಆದರು. ವೈಲ್ಡ್ ಕಾರ್ಡ್​ ಮೂಲಕ 50ನೇ ದಿನದಲ್ಲಿ ಬಂದಿದ್ದ ರಜತ್ ಅವರು ಎರಡನೇ ರನ್ನರ್​ ಅಪ್​ ಆಗಿದ್ದಾರೆ.

ತ್ರಿವಿಕ್ರಮ್ ಅವರು ಬಿಗ್ ಬಾಸ್ ಆಟದಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದರು. ಮಧ್ಯಮವರ್ಗದ ಹುಡುಗ ಎಂಬ ಕಾರಣಕ್ಕೆ ಅವರು ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದರು. ಸಿನಿಮಾದಲ್ಲಿ, ಸೀರಿಯಲ್​ಗಳಲ್ಲಿ ಮಿಂಚಬೇಕು ಎಂಬ ಕನಸು ಇಟ್ಟುಕೊಂಡಿದ್ದ ಅವರಿಗೆ ಒಂದು ಬ್ರೇಕ್ ಬೇಕಿತ್ತು. ಬಿಗ್ ಬಾಸ್ ವೇದಿಕೆ ಸಿಕ್ಕಿದ್ದಕ್ಕೆ ಅವರು ತುಂಬ ಖುಷಿ ಆಗಿದ್ದರು. ಈ ಶೋ ಗೆಲ್ಲಲೇಬೇಕು ಎಂದು ಅವರು ಸಾಕಷ್ಟು ಶ್ರಮಪಟ್ಟಿದ್ದರು.

ಇಷ್ಟು ದಿನಗಳ ಬಿಗ್ ಬಾಸ್ ಆಟದಲ್ಲಿ ತ್ರಿವಿಕ್ರಮ್ ಅವರು ಕೆಲವು ತಪ್ಪುಗಳನ್ನು ಮಾಡಿದ್ದಾರೆ ಎಂಬುದು ಕೂಡ ಅಷ್ಟೇ ನಿಜ. ಇಡೀ ಮನೆಯಲ್ಲಿ ಅವರು ಬೇರೆ ಸ್ಪರ್ಧಿಗಳಿಗಿಂತಲೂ ಹೆಚ್ಚಾಗಿ ಭವ್ಯಾ ಗೌಡ ಜೊತೆ ಆಪ್ತವಾಗಿದ್ದರು. ಆಟದ ಕಾರಣಕ್ಕೆ ಭವ್ಯಾ ಗೌಡಗೆ ಕೆಲವು ನಿಷ್ಠುರದ ಮಾತುಗಳನ್ನು ಆಡಿದ್ದರು. ಅದರ ಬದಲು ಅವರು ಆಟದ ಕಡೆಗೆ ಗಮನ ನೀಡಬಹುದಿತ್ತು.

ಇದನ್ನೂ ಓದಿ: ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ

ಬಿಗ್ ಬಾಸ್ ಮನೆಯಲ್ಲಿ ಯಾವ ಲೆಕ್ಕಾಚಾರವೂ ಕೆಲಸ ಮಾಡುವುದಿಲ್ಲ. ಆ ಸಂದರ್ಭದಲ್ಲಿ ಯಾವುದು ಸರಿಯೋ ಅದನ್ನು ಮಾಡಬೇಕು ಅಷ್ಟೇ. ತ್ರಿವಿಕ್ರಮ್ ಅವರು ಕೇವಲ ಲೆಕ್ಕಾಚಾರ ಹಾಕುವುದರಲ್ಲೇ ಹೆಚ್ಚು ಕಾಲ ಕಳೆದಿದ್ದರು. ಯಾರನ್ನು ಹೇಗೆ ನಾಮಿನೇಟ್ ಮಾಡಬೇಕು? ಯಾರು ಎಲಿಮಿನೇಟ್ ಆಗಿದ್ದರ ಹಿಂದೆ ಏನು ಕಾರಣ ಇರಬಹುದು? ಇಲ್ಲಿ ಯಾರು ವೀಕ್​? ಯಾರು ಸ್ಟ್ರಾಂಗ್? ಯಾರನ್ನು ಮೊದಲು ಹೊರಗೆ ಕಳಿಸಬೇಕು ಎಂಬಿತ್ಯಾದಿ ವಿಚಾರಗಳೇ ಅವರ ತಲೆಯಲ್ಲಿ ಹೆಚ್ಚಾಗಿ ಓಡುತ್ತಿತ್ತು. ಇದರಿಂದಾಗಿ ಅವರು ಜನರ ಪ್ರೀತಿ ಗಳಿಸುವುದರಲ್ಲಿ ಹನುಮಂತನಿಗಿಂತ ಒಂದು ಹೆಜ್ಜೆ ಹಿಂದುಳಿದರು ಎನ್ನಬಹುದು. ಯಾವುದೇ ಲೆಕ್ಕಾಚಾರ ಹಾಕದೇ, ಆ ಕ್ಷಣವನ್ನು ಎಂಜಾಯ್ ಮಾಡಿದ ಹನುಮಂತ ಅವರು ವಿನ್ನರ್ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:52 pm, Sun, 26 January 25