ಹನುಮಂತಂದು ಸಿಂಪತಿ ಕಾರ್ಡ್ ಎಂದವರು ಇದನ್ನು ಓದಲೇಬೇಕು; ದೋಸ್ತ ಮಾಡಿದ ಸಾಧನೆ ಒಂದೆರಡಲ್ಲ

ಬಿಗ್ ಬಾಸ್ ಕನ್ನಡ ಸೀಸನ್ 11 ರ ವಿಜೇತ ಹನುಮಂತ ಅವರ ಜಯಕ್ಕೆ ಕಾರಣಗಳು ಹಲವು. ಅವರು ಸಿಂಪತಿಯಿಂದ ಗೆದ್ದರು ಎಂದು ಅನೇಕರು ಹೇಳಿದ್ದು ಇದೆ. ಆದರೆ, ವೈಲ್ಡ್ ಕಾರ್ಡ್ ಎಂಟ್ರಿಯಿಂದ ಮನೆಯಲ್ಲಿ ತಲ್ಲಣ ಸೃಷ್ಟಿಸಿದ್ದ ಅವರು, ಬಿಗ್ ಬಾಸ್​ನ ಆಟ ಆಡಿದರು. ಆ ಬಗ್ಗೆ ಇಲ್ಲಿದೆ ವಿವರ.

ಹನುಮಂತಂದು ಸಿಂಪತಿ ಕಾರ್ಡ್ ಎಂದವರು ಇದನ್ನು ಓದಲೇಬೇಕು; ದೋಸ್ತ ಮಾಡಿದ ಸಾಧನೆ ಒಂದೆರಡಲ್ಲ
ಹನುಮಂತ ಹಾಗೂ ತಾಯಿ
Follow us
ರಾಜೇಶ್ ದುಗ್ಗುಮನೆ
|

Updated on:Jan 27, 2025 | 8:13 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಹನುಮಂತ ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಅವರು ವಿನ್ ಆದರು ಎಂಬುದು ಕೆಲವರಿಗೆ ಖುಷಿ ತಂದಿದೆ. ತ್ರಿವಿಕ್ರಂ ಹಾಗೂ ರಜತ್ ಅಭಿಮಾನಿಗಳಿಗೆ ಇದು ಬೇಸರ ಮೂಡಿಸಿದೆ. ಅನೇಕರು ಹನುಮಂತ ಬಗ್ಗೆ ಅಪವಾದ ಹೊರಿಸುತ್ತಿದ್ದಾರೆ. ಅವರು ಸಿಂಪತಿ ಕಾರ್ಡ್ ಬಳಸಿದರು ಎಂದು ನೇರವಾಗಿ ಆರೋಪ ಮಾಡುತ್ತಿದ್ದಾರೆ. ಹಾಗಾದರೆ ಹನುಮಂತ ಅವರು ನಿಜಕ್ಕೂ ಸಿಂಪತಿ ಕಾರ್ಡ್ ಬಳಸಿದರಾ? ಅವರು ಆಡಿದ ಶೈಲಿ ನೋಡಿದರೆ ಇಲ್ಲ ಎಂಬ ಉತ್ತರ ನಿಮಗೆ ಸಿಗುತ್ತದೆ.

ವೈಲ್ಡ್ ಕಾರ್ಡ್

ಎಲ್ಲಾ ಸ್ಪರ್ಧಿಗಳು ಹೋಗಿ ಸೆಟಲ್ ಆದ ಬಳಿಕ ಎಂಟ್ರಿ ಕೊಟ್ಟು ತಮ್ಮ ಅಸ್ತಿತ್ವ ಸಾಧಿಸುವುದು ಇದೆಯಲ್ಲ ಅದು ನಿಜಕ್ಕೂ ದೊಡ್ಡ ಚಾಲೆಂಜ್. ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟು ಕೆಲವೇ ವಾರಗಳಲ್ಲಿ ಹೊರ ಬಿದ್ದವರು ಇದ್ದಾರೆ. ಈ ಸೀಸನ್​ನಲ್ಲೇ ಅದು ನಡೆದಿದೆ. ಆದರೆ, ಹನುಮಂತ ಆ ಚಾಲೆಂಜ್​ನ ಯಶಸ್ವಿಯಾಗಿ ನಿರ್ವಹಿಸಿದರು. ಹನುಮಂತ ಬರುವುದಕ್ಕೂ ಮೊದಲು ಬಿಗ್ ಬಾಸ್ ಮನೆಯಲ್ಲಿ ಜಗಳಗಳೇ ತುಂಬಿ ಹೋಗಿದ್ದವು. ಆದರೆ, ಹನುಮಂತ ಬಂದ ಬಳಿಕ ಕೊಂಚ ನಗುವಿನ ಅಲೆ ಶುರವಾಯಿತು. ಧನರಾಜ್ ಜೊತೆ ಸೇರಿ ಅವರು ನಗಿಸುವ ಕೆಲಸ ಮಾಡಿದರು.

ಟಾಸ್ಕ್​

ಟಾಸ್ಕ್ ಎನ್ನುವ ವಿಚಾರ ಬಂದಾಗ ಹನುಮಂತ ಅವರು ಎಂದಿಗೂ ಹಿಂದೇಟು ಹಾಕಿದ್ದೇ ಇಲ್ಲ. ಅವರು ಅನೇಕ ಟಾಸ್ಕ್​ಗಳನ್ನು ಯಶಸ್ವಿಯಾಗಿ ಗೆದ್ದಿದ್ದಾರೆ. ಘಟಾನು ಘಟಿಗಳನ್ನು ಹನುಮಂತ ಅವರು ಸೋಲಿಸಿದ್ದಾರೆ. ಫಿನಾಲೆ ಟಿಕೆಟ್​​ ಸಂದರ್ಭದಲ್ಲಿ ತ್ರಿವಿಕ್ರಂ ಅವರನ್ನು ಸೋಲಿಸಿ ಭೇಷ್ ಎನಿಸಿಕೊಂಡರು. ರಜತ್ ಹಾಗೂ ಭವ್ಯಾ ಅವರಿಗೂ ಸೋಲು ಉಣಿಸಿದ್ದರು. ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಆದಾಗೆಲ್ಲ ಅವರ ತಂಡಕ್ಕೆ ಜಯ ಸಿಕ್ಕಿದೆ. ಕೆಲವು ಕಡೆಗಳಲ್ಲಿ ಕ್ಲೀನ್ ಸ್ವೀಪ್ ಕೂಡ ಆಗಿದೆ.

ಫೇವರಿಸಂ

ಹನುಮಂತ ಅವರು ಎಂದಿಗೂ ಫೇವರಿಸಂ ಮಾಡಿದವರೇ ಅಲ್ಲ. ಇದು ಸಾಕಷ್ಟು ಬಾರಿ ಸಾಬೀತಾಗಿದೆ. ಫಿನಾಲೆ ಟಿಕೆಟ್ ಕೊಡಬೇಕು ಎಂದಾಗ ಅವರು ಆಪ್ತ ಎನಿಸಿಕೊಂಡಿದ್ದ, ಧನರಾಜ್ ಬದಲು ಮೋಕ್ಷಿತಾ ಆಟ ನೋಡಿ ಅವರಿಗೆ ನೀಡಿದರು. ಇದು ಕೂಡ ಎಲ್ಲರ ಗಮನ ಸೆಳೆಯಿತು.

ಇದನ್ನೂ ಓದಿ: ಹನುಮಂತ-ತ್ರಿವಿಕ್ರಂ ವೋಟ್​ಗಳ ಮಧ್ಯೆ ಅಜಗಜಾಂತರ; 3 ಕೋಟಿ ಅಂತರದಲ್ಲಿ ವಿನ್ ಆದ ದೋಸ್ತ

ಸಿಂಪಲ್ ಮಂದಿ

ಹನುಮಂತ ಅವರು ಸಿಂಪಲ್ ವ್ಯಕ್ತಿ. ತಲೆಯಲ್ಲಿ ಅವರು ಸಾಕಷ್ಟು ಪ್ಲ್ಯಾನ್ ಮಾಡುತ್ತಾರೆ ಎಂದು ಕೆಲವರು ಆರೋಪಿಸಿದ್ದು ಇದೆ. ಬಿಗ್ ಬಾಸ್ ಆಡುವ ಪ್ರತಿ ವ್ಯಕ್ತಿಯೂ ತಂತ್ರ ಮಾಡುತ್ತಾರೆ. ಅದೇ ರೀತಿಯ ತಂತ್ರವನ್ನು ಹನುಮಂತ ಕೂಡ ಹೆಣೆದಿರಬಹುದು. ನಾಮಿನೇಟ್ ಮಾಡಿ ಎಲ್ಲರೂ ಕೂಗಾಡಿದರೆ ಹನುಮಂತ ಮಾತ್ರ ತಲೆ ಕೆಡಿಸಿಕೊಳ್ಳದೆ, ಟೆನ್ಷನ್ ಮಾಡಿಕೊಳ್ಳದೆ ಆಡಿದ್ದರು. ತಲೆಕೆಡಿಸಿಕೊಂಡವರು ಔಟ್ ಆದರೆ, ಸಿಂಪಲ್ ಆಗಿದ್ದವರು ಗೆದ್ದಿದ್ದಾರೆ.

ಇದನ್ನೂ ಓದಿ: 50 ಲಕ್ಷದಲ್ಲಿ ಹನುಮಂತಗೆ ಸಿಗೋ ಹಣ ಎಷ್ಟು? ಕಟ್ ಆಗೋ ತೆರಿಗೆ ಎಷ್ಟು?

ಸಿಂಪತಿ ಸಿಕ್ಕಿರಬಹುದು..

ಹನುಮಂತ ಅವರು ಬಡತನ ಹಿನ್ನೆಲೆಯಿಂದ ಬಂದವರು. ಹೆಚ್ಚು ಓದಿದವರೂ ಅಲ್ಲ. ಹೀಗಾಗಿ ಸಿಂಪತಿಯಿಂದಲೂ ಕೆಲವು ವೋಟ್ ಸಿಕ್ಕರಬಹುದು. ಅದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಆದರೆ, 5 ಕೋಟಿ ವೋಟ್​ಗಳು ಕೇವಲ ಸಿಂಪತಿಯಿಂದ ಮಾತ್ರ ಸಿಕ್ಕಿತು ಎಂದು ಹೇಳಲು ಸಾಧ್ಯವೇ ಇಲ್ಲ. ಅದರ ಹಿಂದೆ ಅವರು ಹಾಕಿದ ಶ್ರಮವೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:08 am, Mon, 27 January 25

ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?