Hanumantha Lamani: 50 ಲಕ್ಷದಲ್ಲಿ ಹನುಮಂತಗೆ ಸಿಗೋ ಹಣ ಎಷ್ಟು? ಕಟ್ ಆಗೋ ತೆರಿಗೆ ಎಷ್ಟು?
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಹನುಮಂತ ವಿಜೇತರಾಗಿದ್ದಾರೆ. ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಆದರೆ, ಇಷ್ಟೂ ಹಣ ಅವರಿಗೆ ಸಿಗೋದಿಲ್ಲ. ಸರ್ಕಾರ ದೊಡ್ಡ ಮೊತ್ತದ ತೆರಿಗೆಯನ್ನು ವಿಜೇತರಿಗೆ ವಿಧಿಸುತ್ತದೆ. ಇದನ್ನು ಸರ್ಕಾರಕ್ಕೆ ಅವರು ಪಾವತಿಸಬೇಕಾಗುತ್ತದೆ. ಟಿವಿ ರಿಯಾಲಿಟಿ ಶೋ, ಲಾಟರಿ, ಸ್ಪರ್ಧೆ, ಕಾರ್ಡ್ ಗೇಮ್ನಲ್ಲಿ ಆಡಿ ಗೆದ್ದಲ್ಲಿಈ ತೆರಿಗೆ ಪಾವತಿಸಬೇಕಾಗುತ್ತದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಅವರು ವಿನ್ನರ್ ಎಂದು ಘೋಷಣೆ ಆಗಿದೆ. ಅವರು ದೊಡ್ಮನೆಯಲ್ಲಿ ಕೆಲ ವಾರಗಳ ಬಳಿಕ ಎಂಟ್ರಿ ಕೊಟ್ಟರೂ ಮೆಚ್ಚುಗೆ ಪಡೆದರು. ಈಗ ದೊಡ್ಮನೆಯಲ್ಲಿ ಅವರು ಕಪ್ ಎತ್ತುವ ಮೂಲಕ ಗಮನ ಸೆಳೆದಿದ್ದಾರೆ. ಅವರ ಗೆಲುವಿನ ಬಗ್ಗೆ ಫ್ಯಾನ್ಸ್ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ಅವರಿಗೆ ಬಿಗ್ ಬಾಸ್ ಬಹುಮಾನ ಮೊತ್ತವಾಗಿ ಬರೋಬ್ಬರಿ 50 ಲಕ್ಷ ರೂಪಾಯಿ ಸಿಕ್ಕಿದೆ. ಆದರೆ, ಇದರಲ್ಲಿ ಸಂಪೂರ್ಣ ಮೊತ್ತ ಅವರಿಗೆ ಸಿಗೋದಿಲ್ಲ.
‘ಬಿಗ್ ಬಾಸ್ ಕನ್ನಡ’ ದೊಡ್ಡ ಮಟ್ಟದ ಜನಪ್ರಿಯತೆ ಸಿಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ 50 ಲಕ್ಷ ರೂಪಾಯಿ ಸಿಗುತ್ತದೆ. ಆದರೆ, ಈ ಹಣ ಸಂಪೂರ್ಣವಾಗಿ ಗೆದ್ದ ವ್ಯಕ್ತಿಗೆ ಸಿಗುವುದಿಲ್ಲ ಎಂಬುದು ಅನೇಕರಿಗೆ ಗೊತ್ತಿಲ್ಲ. ಹೌದು, ಬಿಗ್ ಬಾಸ್ ಗೆದ್ದ ಹಣಕ್ಕೆ ಸರ್ಕಾರ ದೊಡ್ಡ ಮೊತ್ತದ ಟ್ಯಾಕ್ಸ್ ಹೇರುತ್ತದೆ.
ಎಷ್ಟು ತೆರಿಗೆ?
ಬಹುಮಾನ ಮೊತ್ತಕ್ಕೆ ಸರ್ಕಾರ ಬರೋಬ್ಬರಿ ಶೇ. 30ರಷ್ಟು ಟ್ಯಾಕ್ಸ್ ವಿಧಿಸುತ್ತದೆ. ಬರುವ ಒಟ್ಟೂ ಹಣದಲ್ಲಿ ಶೇ. 30 ಹಣ ಸರ್ಕಾರಕ್ಕೆ ಕೊಡಲೇಬೇಕಿದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ. ಹೀಗಾಗಿ ಹನುಮಂತಗೆ ಸಿಗೋದು ಕೇವಲ 35 ಲಕ್ಷ ರೂಪಾಯಿ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಟಿವಿ ರಿಯಾಲಿಟಿ ಶೋ, ಲಾಟರಿ, ಸ್ಪರ್ಧೆ, ಕಾರ್ಡ್ ಗೇಮ್ನಲ್ಲಿ ಆಡಿ ಗೆದ್ದಲ್ಲಿ ಶೇ. 30 ತೆರಿಗೆ ಪಾವತಿಸಬೇಕು. ಕನಿಷ್ಠ 10 ಸಾವಿರ ರೂಪಾಯಿ ಇಂದ ಈ ತೆರಿಗೆ ಅನ್ವಯ ಆಗುತ್ತದೆ.
ಇದನ್ನೂ ಓದಿ: Bigg Boss 11 Grand Finale Winner: ಹನುಮಂತ ಬಿಗ್ ಬಾಸ್ ವಿನ್ನರ್; ಜವಾರಿ ಹುಡುಗನಿಗೆ ಒಲಿದ ಕಪ್
ಉಳಿದ ಸ್ಪರ್ಧಿಗಳಿಗೂ
ಕೇವಲ ಹನುಮಂತ ಮಾತ್ರವಲ್ಲದೆ ರನ್ನರ್ ಅಪ್ ಆದ ತ್ರಿವಿಕ್ರಂ ಅವರೂ ತೆರಿಗೆ ಹಣ ಪಾವತಿಸಬೇಕು. ಅವರಿಗೆ ಒಟ್ಟೂ 15 ಲಕ್ಷ ರೂಪಾಯಿ ಸಿಕ್ಕಿದ್ದು, ಇದರಲ್ಲಿ ಅವರಿಗೆ 10,50,000 ಮಾತ್ರ ಸಿಗಲಿದೆ. ಉಳಿದ ಮೊತ್ತ ತೆರಿಗೆ ರೂಪದಲ್ಲಿ ಸರ್ಕಾರದ ಕೈ ಸೇರಲಿದೆ. ಇನ್ನು, ರಜತ್ ಅವರಿಗೆ 10 ಲಕ್ಷ ರೂಪಾಯಿ ಸಿಕ್ಕಿದ್ದು, ಅವರ ಕೈ ಸೇರೋದು 7 ಲಕ್ಷ ರೂಪಾಯಿ ಮಾತ್ರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:59 am, Mon, 27 January 25