ಹನುಮಂತನ ಆಟದ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದ ಸುದೀಪ್; ಎಚ್ಚೆತ್ತುಕೊಳ್ಳಲೇ ಇಲ್ಲ ಮನೆ ಮಂದಿ
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಹನುಮಂತ ಅವರ ಗೆಲುವು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸುದೀಪ್ ಅವರು ಹನುಮಂತ ಆಟದ ಬಗ್ಗೆ ಮುಂಚೆಯೇ ಎಚ್ಚರಿಕೆ ನೀಡಿದ್ದ ವಿಡಿಯೋಗಳು ವೈರಲ್ ಆಗಿವೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ ಹನುಮಂತ ಅವರ ಬುದ್ಧಿವಂತಿಕೆ ಮತ್ತು ಆಟದ ತಂತ್ರಗಳು ಎಲ್ಲರನ್ನು ಆಶ್ಚರ್ಯಗೊಳಿಸಿವೆ.
ಹನುಮಂತ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಎಂದು ಸುದೀಪ್ ಘೋಷಣೆ ಮಾಡಿದಾಗಿನಿಂದಲೂ ಚರ್ಚೆ ಜೋರಾಗಿದೆ. ಇವರು ನಿಜವಾದ ವಿನ್ನರ್ ಎಂದು ಎಲ್ಲರೂ ಹೊಗಳುತ್ತಿದ್ದಾರೆ. ಹೀಗಿರುವಾಗಲೇ ಸುದೀಪ್ ಅವರು ಹನುಮಂತ ಅವರ ಆಟದ ಬಗ್ಗೆ ಈ ಮೊದಲು ಎಚ್ಚರಿಕೆ ನೀಡಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.
ಹನುಮಂತ ಒಂದು ಲುಂಗಿ ಹಾಗೂ ಶರ್ಟ್ ಆಗಿ ದೊಡ್ಮನೆಗೆ ಎಂಟ್ರಿ ಪಡೆದವವರು. ಅದೂ ವೈಲ್ಡ್ ಕಾರ್ಡ್ ಮೂಲಕ. ಈಗ ವೈಲ್ಡ್ ಕಾರ್ಡ್ ಸ್ಪರ್ಧಿ ದೊಡ್ಮನೆಯಲ್ಲಿ ಗೆದ್ದಿದ್ದು ಇದೇ ಮೊದಲು ಅನ್ನೋದು ವಿಶೇಷ. ಹನುಮಂತನ ಆಟದ ಬಗ್ಗೆ ಸುದೀಪ್ ಅವರು ಇತರ ಸ್ಪರ್ಧಿಗಳಿಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ, ಯಾರೊಬ್ಬರೂ ಈ ಎಚ್ಚರಿಕೆಯನ್ನು ಗಂಭೀರವಾಗಿ ಸ್ವೀಕರಿಸಿರಲಿಲ್ಲ.
‘ಹನುಮಂತ ದಡ್ಡನಾ ಅಥವಾ ಬುದ್ಧಿವಂತನಾ’ ಎಂದು ಕೇಳಿದಾಗ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ಕೊಟ್ಟಿದ್ದರು. ಹನುಮಂತ ಅವರು ಬುದ್ಧಿವಂತ ಎಂದು ಸುದೀಪ್ ಹೇಳುತ್ತಲೇ ಬರುತ್ತಿದ್ದರು. ಆದರೆ, ಯಾರೊಬ್ಬರೂ ಇದನ್ನು ಅಷ್ಟು ಗಂಭೀರವಾಗಿ ಕಿವಿಮೇಲೆ ಹಾಕಿಕೊಂಡಿರಲಿಲ್ಲ.
ವೇದಿಕೆ ಮೇಲೆ ಮಾತನಾಡುವಾಗ ಸುದೀಪ್ ಅವರು ಒಂದು ಮಾತನ್ನು ಹೇಳಿದ್ದರು. ‘ಮನೆ ಒಳಗೆ ಬಂದಿದ್ದು ಆಮೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಅದು ಮೊಲ ಅಂತ ಕೊನೆಗೆ ಗೊತ್ತಾಯ್ತು’ ಎಂದು ಸುದೀಪ್ ಹೇಳಿದರು. ಅಂದರೆ ಹನುಮಂತ ಅವರು ನಿಧಾನವಾಗಿ ಆಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರು ಸಖತ್ ಶಾರ್ಪ್ ಇದ್ದಾರೆ ಎಂಬುದು ಅವರ ಮಾತಿನ ಅರ್ಥ ಆಗಿತ್ತು.
ಇದನ್ನೂ ಓದಿ: ಹನುಮಂತಂದು ಸಿಂಪತಿ ಕಾರ್ಡ್ ಎಂದವರು ಇದನ್ನು ಓದಲೇಬೇಕು; ದೋಸ್ತ ಮಾಡಿದ ಸಾಧನೆ ಒಂದೆರಡಲ್ಲ
ಹನುಮಂತ ಅವರು 50 ಲಕ್ಷ ರೂಪಾಯಿ ಬಹುಮಾನ ಮೊತ್ತ ಹಾಗೂ ಆಕರ್ಷಕ ಕಪ್ ಜೊತೆ ಮನೆಗೆ ತೆರಳಿದ್ದಾರೆ. ಅವರಿಗೆ ‘ಬಾಯ್ಸ್ vs ಗರ್ಲ್ಸ್’ ಶೋನಲ್ಲಿ ಸ್ಪರ್ಧಿಸೋ ಅವಕಾಶ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.