AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ತೊರೆಯುವ ಬಗ್ಗೆ ವೇದಿಕೆಯ ಮೇಲೆ ಸುದೀಪ್ ಹೇಳಿದ್ದೇನು?

ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 11 ರ ವೇದಿಕೆಯ ಮೇಲೆ ತಮ್ಮ ನಿರ್ಗಮನದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, ಅವರ ಇತ್ತೀಚಿನ ಟ್ವೀಟ್‌ಗಳು ಮತ್ತು ಹೇಳಿಕೆಗಳು ಅಭಿಮಾನಿಗಳಲ್ಲಿ ಗೊಂದಲ ಉಂಟುಮಾಡಿದೆ. ಅವರು ಕಾರ್ಯಕ್ರಮಕ್ಕೆ ಧನ್ಯವಾದ ಹೇಳಿದ್ದಾರೆ ಮತ್ತು ಭವಿಷ್ಯದ ಬಿಗ್ ಬಾಸ್ ಸೀಸನ್‌ಗಳಿಗೆ ಬೆಂಬಲವನ್ನು ಕೋರಿದ್ದಾರೆ.

ಬಿಗ್ ಬಾಸ್ ತೊರೆಯುವ ಬಗ್ಗೆ ವೇದಿಕೆಯ ಮೇಲೆ ಸುದೀಪ್ ಹೇಳಿದ್ದೇನು?
ಸುದೀಪ್
ರಾಜೇಶ್ ದುಗ್ಗುಮನೆ
|

Updated on:Jan 27, 2025 | 1:00 PM

Share

ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ತೊರೆಯುವ ಬಗ್ಗೆ ಈಗಾಗಲೇ ಎರಡು ಬಾರಿ ಟ್ವೀಟ್ ಮಾಡಿದ್ದಾರೆ. ಈ ವಿಚಾರ ಅವರ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ. ಈ ಮೊದಲು ಅವರು ನೀಡಿದ್ದ ಒಂದು ಹೇಳಿಕೆಯಿಂದ ಜನರಿಗೆ ಇನ್ನೂ ನಿರೀಕ್ಷೆ ಇದೆ. ಮನಸ್ಸು ಬದಲಿಸುವ ಸಾಧ್ಯತೆ ಇದೆ ಎಂದು ಸುದೀಪ್ ಈ ಮೊದಲು ಹೇಳಿಕೊಂಡಿದ್ದರು. ಹಾಗಾದರೆ, ಈ ಬಗ್ಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವೇದಿಕೆಯ ಮೇಲೆ ಸುದೀಪ್ ಏನು ಹೇಳಿದರು, ಬಿಗ್ ಬಾಸ್ ತೊರೆಯುವ ಬಗ್ಗೆ ಅವರು ಏನಾದರೂ ನಿರ್ಧಾರ ಮಾಡಿದ್ದಾರಾ? ಆ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವೇದಿಕೆ ಮೇಲೆ ಸುದೀಪ್ ಅವರು ಬಿಗ್ ಬಾಸ್ ತೊರೆಯುವ ಬಗ್ಗೆಯಾಗಲೀ, ಇದೇ ತಮ್ಮ ಕೊನೆಯ ಸೀಸನ್ ಎಂಬುದಾಗಿ ಅವರು ಹೇಳಿಲ್ಲ. ಆದರೆ, ಅವರು ‘ಕಲರ್ಸ್ ಕನ್ನಡ’ಕ್ಕೆ ಹಾಗೂ ಮುಂದೆ ಬರುವ ಬಿಗ್ ಬಾಸ್ ಸೀಸನ್​ಗಳನ್ನು ಬೆಂಬಲಿಸುವಂತೆ ಕೋರಿದ್ದಾರೆ.

ಸುದೀಪ್ ಅವರು ಬಿಗ್ ಬಾಸ್ ಪೂರ್ಣಗೊಳ್ಳುವಾಗ ಎಲ್ಲರಿಗೂ ಧನ್ಯಾವಾದ ಹೇಳಿದ್ದಾರೆ. ತಮ್ಮ ಸಹಾಯಕ್ಕೆ ನಿಂತವರಿಗೆ ಹಾಗೂ ಶೋನ ಉತ್ತಮವಾಗಿ ಮೂಡಿ ಬರಲು ಕಾರಣ ಆದವರಿಗೆ ಸುದೀಪ್ ಧನ್ಯವಾದ ಹೇಳಿದ್ದಾರೆ. ‘119 ದಿನಗಳ ಜರ್ನಿಗೆ ಪೂರ್ಣ ವಿರಾಮ ಹಾಕುವ ಸಮಯ. ನನ್ನ ಸ್ಟಾಫ್​ಗೆ ಧನ್ಯವಾದ. ಡಿಸೈನರ್ ಸಾಗರ್​ಗೆ ಥ್ಯಾಂಕ್ಸ್’ ಎಂದರು ಸುದೀಪ್.

‘ಪ್ರತಿ ಬಾರಿ ವೇದಿಕೆಗೆ ಸ್ವಾಗತಿಸಿದ್ದಕ್ಕೆ ಥ್ಯಾಂಕ್ಸ್. ಬಿಗ್ ಬಾಸ್ ಕಾರ್ಯಕ್ರಮ ಹೀಗೆ ಚೆನ್ನಾಗಿ ಆಗಲಿ. ಮತ್ತೆ ಮುಂದಿನ ಬಿಗ್ ಬಾಸ್ ಸ್ಟಾರ್ಟ್ ಆಗೋವರೆಗೂ ನೀವೆಲ್ಲರೂ ಬೇರೆ ಕಾರ್ಯಕ್ರಮ ನೋಡಿ. ಬಿಗ್ ಬಾಸ್​ಗೆ ನಿಮ್ಮ ಬೆಂಬಲ ಯಾವಾಗಲೂ ಇರಲಿ’ ಎಂದು ಸುದೀಪ್ ಅವರು ಕೋರಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ವೇದಿಕೆ ಮೇಲೆ ಮಾಡಿದ ತಪ್ಪಿಗೆ ಅಪ್ಪನ ಬಳಿ ಕ್ಷಮೆ ಕೇಳಿದ ಸುದೀಪ್

ಎಲ್ಲಾ ಸ್ಪರ್ಧಿಗಳು ಇದೇ ತಮ್ಮ ಕೊನೆಯ ಸೀಸನ್​ ಎಂಬುದನ್ನು  ಎಲ್ಲಿಯೂ ಉಲ್ಲೇಖಿಸಿಲ್ಲ. ಈ ಕಾರಣಕ್ಕೆ ಬಿಗ್ ಬಾಸ್ ವೀಕ್ಷಕರಿಗೆ ಸುದೀಪ್ ಮುಂದಿನ ವರ್ಷವೂ ಬರಬಹುದು ಎಂಬ ನಿರೀಕ್ಷೆ ಇದೆ. ಅವರ ಜಾಗದಲ್ಲಿ ಬೇರೆ ಯಾವುದೇ ಸ್ಪರ್ಧಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:41 pm, Mon, 27 January 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್