ಹನುಮಂತ-ತ್ರಿವಿಕ್ರಂ ವೋಟ್ಗಳ ಮಧ್ಯೆ ಅಜಗಜಾಂತರ; 3 ಕೋಟಿ ಅಂತರದಲ್ಲಿ ವಿನ್ ಆದ ದೋಸ್ತ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಅವರು ವಿನ್ನರ್ ಎಂದು ಘೋಷಣೆ ಆಗಿದೆ. ಅವರು ದೊಡ್ಮನೆಯಲ್ಲಿ ಕೆಲ ವಾರಗಳ ಬಳಿಕ ಎಂಟ್ರಿ ಕೊಟ್ಟರೂ ಮೆಚ್ಚುಗೆ ಪಡೆದರು. ಈಗ ದೊಡ್ಮನೆಯಲ್ಲಿ ಅವರು ಕಪ್ ಎತ್ತುವ ಮೂಲಕ ಗಮನ ಸೆಳೆದಿದ್ದಾರೆ. ಅವರ ಗೆಲುವಿನ ಬಗ್ಗೆ ಫ್ಯಾನ್ಸ್ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ಅವರು ದೊಡ್ಡ ಅಂತರದಿಂದ ಗೆದ್ದಿದ್ದಾರೆ ಅನ್ನೋ ವಿಚಾರ ರಿವೀಲ್ ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿಜೇತನಾಗಿ ಹನುಮಂತ ಅವರು ಹೊರ ಹೊಮ್ಮಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹನುಮಂತ ಅವರು ವಿನ್ನರ್ ಎಂದು ಸಂಭ್ರಮಿಸಲಾಗುತ್ತಿದೆ. ಹಾಗಾದರೆ, ಹನುಮಂತ ಅವರಿಗೆ ಸಿಕ್ಕ ಒಟ್ಟೂ ವೋಟ್ ಎಷ್ಟು? ರನ್ನರ್ ಅಪ್ ಆದ ತ್ರಿವಿಕ್ರಂ ಅವರಿಗೆ ಸಿಕ್ಕ ಮತಗಳು ಎಷ್ಟು? ಈ ವಿಚಾರವನ್ನು ಸುದೀಪ್ ರಿವೀಲ್ ಮಾಡಿದ್ದಾರೆ. ಸುಮಾರು 3 ಕೋಟಿ ಮತಗಳ ಅಂತರದಿಂದ ಹನುಮಂತ ಅವರು ವಿಜಯ ಸಾಧಿಸಿದ್ದಾರೆ.
ಕಳೆದ ವರ್ಷಕ್ಕಿಂತ ಈ ವರ್ಷ ವೋಟ್ ಮಾಡುವವರ ಸಂಖ್ಯೆ ಹೆಚ್ಚಿದೆ. ಕಳೆದ ವರ್ಷ ವಿನ್ನರ್ಗೆ ಬಿದ್ದಷ್ಟು ವೋಟ್ ರನ್ನರ್ ಅಪ್ಗೆ ಸಿಕ್ಕಿದೆ ಎಂದು ಸುದೀಪ್ ರಿವೀಲ್ ಮಾಡಿದ್ದಾರೆ. ಜಿಯೋ ಸಿನಿಮಾದಲ್ಲಿ ಪ್ರತಿ ವ್ಯಕ್ತಿಗೆ ಒಂದು ದಿನಕ್ಕೆ 99 ವೋಟ್ ಮಾಡಲು ಅವಕಾಶ ಇತ್ತು. ಇದನ್ನು ಜನರು ಹೆಚ್ಚು ಆಸಕ್ತಿಯಿಂದ ಮಾಡಿದ್ದಾರೆ.
ವಿನ್ನರ್ ಹನುಮಂತ ಅವರಿಗೆ ಬರೋಬ್ಬರಿ 5,23,89,313 ಮತಗಳು ಬಿದ್ದಿವೆ. ಸೆಕೆಂಡರ್ ರನ್ನರ್ ಅಪ್ ರಜತ್ಗೆ 2,53,01,251 ವೋಟ್ಗಳು ಬಿದ್ದಿವೆ. ಅಂದರೆ ಇಬ್ಬರ ಮಧ್ಯೆ ಸುಮಾರು 2.70 ಕೋಟಿ ಮತಗಳ ಅಂತರ ಇದೆ. ಇಷ್ಟು ದೊಡ್ಡ ಮತಗಳ ಅಂತರದ ಮಧ್ಯೆ ಗೆದ್ದಿರುವುದಕ್ಕೆ ಹನುಮಂತ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಾ ಇದ್ದಾರೆ.
‘ಬಿಗ್ ಬಾಸ್’ ವೀಕ್ಷಕರ ಬಳಗ ಹೆಚ್ಚಿದೆ. ಅದಕ್ಕೆ ಬಿಗ್ ಬಾಸ್ ಟಿಆರ್ಪಿಯೇ ಸಾಕ್ಷಿ. ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚಿನ ಟಿಆರ್ಪಿ ಸಿಕ್ಕಿದೆ. ಇದು 13 ಟಿವಿಆರ್ನ ಗಡಿ ತಲುಪಿತ್ತು ಅನ್ನೋದು ವಿಶೇಷ. ಫಿನಾಲೆ ದಿನ ಎಷ್ಟು ಟಿಆರ್ಪಿ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: 50 ಲಕ್ಷದಲ್ಲಿ ಹನುಮಂತಗೆ ಸಿಗೋ ಹಣ ಎಷ್ಟು? ಕಟ್ ಆಗೋ ತೆರಿಗೆ ಎಷ್ಟು?
ಹನುಮಂತ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ತ್ರಿವಿಕ್ರಂ ಅವರು ವಿನ್ ಆಗಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದು ಇದೆ. ಅವರ ಅಭಿಮಾನಿಗಳಿಗೆ ಈಗ ಸಾಕಷ್ಟು ಬೇಸರ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.