AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್​​ಗೆ ನಾನೇ ಫೇವರಿಟ್; ಹೆಮ್ಮೆಯಿಂದ ಹೇಳಿಕೊಂಡ ಸತೀಶ್

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಡಾಗ್ ಸತೀಶ್ ಫಿನಾಲೆ ದಿನ ಸುದೀಪ್ ತಮ್ಮನ್ನು ಹೆಚ್ಚು ಮಾತನಾಡಿಸಿದ್ದಾಗಿ ಹೇಳಿ ಸುದ್ದಿಯಲ್ಲಿದ್ದಾರೆ. ಸುದೀಪ್‌ಗೆ ತಾನೇ ಅಚ್ಚುಮೆಚ್ಚಿನ ಸ್ಪರ್ಧಿ ಎಂಬರ್ಥದಲ್ಲಿ ಅವರು ಮಾತಾಡಿದ್ದಾರೆ. ಸುದೀಪ್ ವ್ಯಂಗ್ಯವಾಗಿ ಹೇಳಿದ್ದನ್ನೂ ಸತೀಶ್ ಸಕಾರಾತ್ಮಕವಾಗಿ ತೆಗೆದುಕೊಂಡು ಪ್ರಚಾರ ಪಡೆಯಲು ಯತ್ನಿಸಿದ್ದಾರೆ.

ಸುದೀಪ್​​ಗೆ ನಾನೇ ಫೇವರಿಟ್; ಹೆಮ್ಮೆಯಿಂದ ಹೇಳಿಕೊಂಡ ಸತೀಶ್
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Jan 27, 2026 | 7:34 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಸ್ಪರ್ಧಿ ಡಾಗ್ ಸತೀಶ್ ಅವರು ಸದ್ಯ ಸುದ್ದಿಯಲ್ಲಿ ಇದ್ದಾರೆ. ಅವರು ಮೂರನೇ ವಾರವೇ ಹೊರ ಹೋದರು ಎಲ್ಲಾ ರೀತಿಯಲ್ಲೂ ಚರ್ಚೆಯಲ್ಲಿರುವ ಪ್ರಯತ್ನಮಾಡುತ್ತಿದ್ದಾರೆ. ಈಗ ಸತೀಶ್ ಅವರು ಫಿನಾಲೆ ದಿನ ಸುದೀಪ್ ಅವರು 12 ಬಾರಿ ಮಾತನಾಡಿಸಿದ್ದಾಗಿ ಹೇಳಿದ್ದಾರೆ. ಯಾವ ಸ್ಪರ್ಧಿಯನ್ನೂ ಅವರು ಇಷ್ಟು ಮಾತನಾಡಿಸಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಮೂಲಕ ಸುದೀಪ್​ ಅವರಿಗೆ ನಾನೇ ಫೇವರಿಟ್ ಸ್ಪರ್ಧಿ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಸತೀಶ್ ಅವರ ಕ್ಯಾರೆಕ್ಟರ್ ತುಂಬಾನೇ ವಿಚಿತ್ರ. ಅವರು ಯಾವುದೇ ವಿಷಯ ಸಿಕ್ಕರೂ ಅದರಿಂದ ಮೈಲೇಜ್ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಈಗ ಅವರು ಬಿಗ್ ಬಾಸ್ ಫಿನಾಲೆ ಬಗ್ಗೆ ಮಾತನಾಡಿದ್ದಾರೆ. ‘ಫಿನಾಲೆ ದಿನ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ನನ್ನನ್ನು 18 ಬಾರಿ ಮಾತನಾಡಿಸಿದರು. ಉಳಿದ ಸ್ಪರ್ಧಿಗಳನ್ನು ಒಮ್ಮೆಯೂ ಮಾತನಾಡಿಸಿಲ್ಲ’ ಎಂದು ಹೇಳಿದ್ದಾರೆ.

ಸತೀಶ್ ಅವರು ಪಾರ್ಟಿ ಆಯೋಜನೆ ಮಾಡುತ್ತಿದ್ದಾರಂತೆ. ಗಿಲ್ಲಿಯನ್ನು ಈ ಪಾರ್ಟಿಗೆ ಅವರು ಕರೆಯೋದಿಲ್ಲವಂತೆ. ‘ನಾನು ಎಲ್ಲರಿಗೂ ಗೆಟ್ ಟುಗೆದರ್ ರೀತಿ ಪಾರ್ಟಿ ಆಯೋಜನೆ ಮಾಡುತ್ತಿದ್ದೇನೆ. ಗಿಲ್ಲಿನ ಇದಕ್ಕೆ ಕರೆಯಲ್ಲ. ಉಳಿದ ಸ್ಪರ್ಧಿಗಳು ಬರುತ್ತಾ ಬಿಡ್ತಾರೋ ಅವರಿಗೆ ಬಿಟ್ಟಿದ್ದು’ ಎಂದು ಸತೀಶ್ ಹೇಳಿದ್ದಾರೆ.

ಇದನ್ನೂ ಓದಿ: ಸುದೀಪ್ ವ್ಯಂಗ್ಯವಾಗಿ ಹೇಳಿದ್ದನ್ನೇ ಇಟ್ಟುಕೊಂಡು ಬಡಾಯಿಕೊಚ್ಚಿಕೊಂಡ ಸತೀಶ್ ‘ನಿಮಗೆ ಶೇಕ್​ಹ್ಯಾಂಡ್ ಮಾಡೋ ವಿಡಿಯೋ ಹಾಕಿದ್ರೆ ಲಕ್ಷ ಲಕ್ಷ ವೀವ್ಸ್ ಬರುತ್ತದೆ’ ಎಂದು ಸುದೀಪ್ ಹೇಳಿದ್ದರು. ಇದನ್ನು ಸುದೀಪ್ ಹೇಳಿದ್ದು ವ್ಯಂಗದ ರೀತಿಯಲ್ಲಿ. ಆದರೆ, ಇದನ್ನು ಸತೀಶ್ ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ. ‘ಸುದೀಪ್ ನನ್ನ ಬಗ್ಗೆ ಹೀಗೆ ಹೇಳಿದ್ದಾರೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಚಿವರಿಂದ ಗಣರಾಜ್ಯೋತ್ಸವದ ಧ್ವಜಾರೋಹಣದ ವೇಳೆ ಬಿದ್ದ ಧ್ವಜಸ್ತಂಭ!
ಸಚಿವರಿಂದ ಗಣರಾಜ್ಯೋತ್ಸವದ ಧ್ವಜಾರೋಹಣದ ವೇಳೆ ಬಿದ್ದ ಧ್ವಜಸ್ತಂಭ!
ಆಟೋದಿಂದ ಹಾರಿದ 4 ಗೆಳತಿಯರು; ಒಬ್ಬಳ ದುರಂತ ಸಾವಿಗೆ ಕಾರಣ ಯಾರು?
ಆಟೋದಿಂದ ಹಾರಿದ 4 ಗೆಳತಿಯರು; ಒಬ್ಬಳ ದುರಂತ ಸಾವಿಗೆ ಕಾರಣ ಯಾರು?
ಸುದೀಪ್ ಸರ್ ಈ ಕೂಲಿಂಗ್ ಗ್ಲಾಸ್ ಗಿಫ್ಟ್ ಕೇಳಿದ್ರು, ಕೊಡಲ್ಲ ಅಂದೆ: ಸತೀಶ್
ಸುದೀಪ್ ಸರ್ ಈ ಕೂಲಿಂಗ್ ಗ್ಲಾಸ್ ಗಿಫ್ಟ್ ಕೇಳಿದ್ರು, ಕೊಡಲ್ಲ ಅಂದೆ: ಸತೀಶ್
ಆರ್​ಸಿಬಿ ವಿರುದ್ಧ ಐತಿಹಾಸಿಕ ಶತಕ ಬಾರಿಸಿದ ನ್ಯಾಟ್ ಸಿವರ್-ಬ್ರಂಟ್
ಆರ್​ಸಿಬಿ ವಿರುದ್ಧ ಐತಿಹಾಸಿಕ ಶತಕ ಬಾರಿಸಿದ ನ್ಯಾಟ್ ಸಿವರ್-ಬ್ರಂಟ್
ಗಣರಾಜ್ಯೋತ್ಸವ ಪರೇಡ್​​ನಲ್ಲಿ ಗಮನ ಸೆಳೆದ ಆಪರೇಷನ್ ಸಿಂಧೂರ್‌ ವಿಜಯೋತ್ಸವ
ಗಣರಾಜ್ಯೋತ್ಸವ ಪರೇಡ್​​ನಲ್ಲಿ ಗಮನ ಸೆಳೆದ ಆಪರೇಷನ್ ಸಿಂಧೂರ್‌ ವಿಜಯೋತ್ಸವ
ಅಟ್ಟಾರಿ-ವಾಘಾ ಗಡಿಯಲ್ಲಿ 'ಬೀಟಿಂಗ್ ರಿಟ್ರೀಟ್'
ಅಟ್ಟಾರಿ-ವಾಘಾ ಗಡಿಯಲ್ಲಿ 'ಬೀಟಿಂಗ್ ರಿಟ್ರೀಟ್'
ಟ್ರಾಫಿಕ್ ಜಾಮ್, ಹಿಮಪಾತದಿಂದ 24 ಗಂಟೆ ಕಾರಲ್ಲೇ ಕುಳಿತ ಮನಾಲಿ ಪ್ರವಾಸಿಗರು!
ಟ್ರಾಫಿಕ್ ಜಾಮ್, ಹಿಮಪಾತದಿಂದ 24 ಗಂಟೆ ಕಾರಲ್ಲೇ ಕುಳಿತ ಮನಾಲಿ ಪ್ರವಾಸಿಗರು!
ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ
ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ
ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಆರೋಪ
ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಆರೋಪ
ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ