ತ್ರಿವಿಕ್ರಮ್-ಭವ್ಯಾ ‘ಸ್ನೇಹ’ದ ಬಗ್ಗೆ ಪೋಷಕರು ಅಭಿಪ್ರಾಯ ಏನು?

|

Updated on: Dec 31, 2024 | 11:08 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ತ್ರಿವಿಕ್ರಮ್ ಮತ್ತು ಭವ್ಯಾ ಬಲು ಆತ್ಮೀಯರಾಗಿದ್ದಾರೆ. ಇಬ್ಬರ ನಡುವೆ ಬಹಳ ಆತ್ಮೀಯತೆ ಇದೆ. ಈ ಗಾಢ ‘ಸ್ನೇಹ’ದ ಬಗ್ಗೆ ಸುದೀಪ್ ಸಹ ಆಗಾಗ್ಗೆ ಕಾಲೆಳೆಯುತ್ತಿರುತ್ತಾರೆ. ಇದೀಗ ಬಿಗ್​ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬದವರು ಬಂದಿದ್ದು, ತ್ರಿವಿಕ್ರಮ್ ತಾಯಿ ಹಾಗೂ ಭವ್ಯಾ ಅವರ ತಾಯಿ ಇವರಿಬ್ಬರ ‘ಸ್ನೇಹ’ದ ಬಗ್ಗೆ ಏನು ಹೇಳಿದ್ದಾರೆ?

ತ್ರಿವಿಕ್ರಮ್-ಭವ್ಯಾ ‘ಸ್ನೇಹ’ದ ಬಗ್ಗೆ ಪೋಷಕರು ಅಭಿಪ್ರಾಯ ಏನು?
Trivikram Bhavya
Follow us on

ಬಿಗ್​ಬಾಸ್​ನ ಪ್ರತಿ ಸೀಸನ್​ನಲ್ಲೂ ಒಂದೊಂದು ಲವ್​ ಸ್ಟೋರಿಗಳು ನಡೆಯುತ್ತಲೇ ಇರುತ್ತವೆ. ಕೆಲವು ಸಫಲ ಆಗುತ್ತವೆ ಕೆಲವು ಆಗುವುದಿಲ್ಲ. ಇದೀಗ ಬಿಗ್​ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ನಡುವೆ ಅಂಥಹದ್ದೊಂದು ಆಪ್ತ ಬಂಧ ಇದೆ. ಮನೆ ಮಂದಿ ಹಾಗೂ ಸ್ವತಃ ಸುದೀಪ್ ಸಹ ಈ ಇಬ್ಬರ ಆಪ್ತತೆಯ ಬಗ್ಗೆ ತಮಾಷೆ ಮಾಡುತ್ತಿರುತ್ತಾರೆ, ಕಾಲೆಳೆಯುತ್ತಿರುತ್ತಾರೆ. ಭವ್ಯಾ ಹಾಗೂ ತ್ರಿವಿಕ್ರಮ್ ಇಬ್ಬರೂ ಸಹ ಪರಸ್ಪರರ ಬಗ್ಗೆ ಅತೀವ ಕಾಳಜಿ ತೋರುತ್ತಾರೆ. ಪರಸ್ಪರರಿಗೆ ವಿಶೇಷ ಸ್ಥಾನವನ್ನು ನೀಡಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಯಲ್ಲಿದ್ದಾರೆ ಎಂಬ ಅನುಮಾನ ಮೂಡುವಷ್ಟು ಆಪ್ತವಾಗಿದ್ದಾರೆ. ಇದೀಗ ಬಿಗ್​ಬಾಸ್ ಮನೆಗೆ ಭವ್ಯಾ ಹಾಗೂ ತ್ರಿವಿಕ್ರಮ್ ಅವರ ತಾಯಿ ಬಂದಿದ್ದು, ಈ ಇಬ್ಬರ ಸಂಬಂಧದ ಬಗ್ಗೆ ಅವರ ಅಭಿಪ್ರಾಯ ಏನು?

ಮೊದಲಿಗೆ ಭವ್ಯಾ ಅವರ ತಾಯಿ ಹಾಗೂ ಸಹೋದರಿ ಬಿಗ್​ಬಾಸ್ ಮನೆಗೆ ಬಂದರು. ಭವ್ಯಾ ಅವರ ತಾಯಿ, ಮಗಳೊಟ್ಟಿಗೆ ಮಾತನಾಡುತ್ತಾ. ‘ಚೆನ್ನಾಗಿ ಆಡುತ್ತಿದ್ದೀಯ ಇನ್ನೂ ಚೆನ್ನಾಗಿ ಆಡು, ಆಟ ಆಡಲು, ಯಾವುದಾದರೂ ನಿರ್ಧಾರ ಮಾಡಲು ಬೇರೆಯವರ ಸಹಾಯ ತೆಗೆದುಕೊಳ್ಳುವುದು ಕಡಿಮೆ ಮಾಡು’ ಎಂದು ಸಲಹೆ ನೀಡಿದರು. ಅದಾದ ಬಳಿಕ ತ್ರಿವಿಕ್ರಮ್ ಬಗ್ಗೆ ಮಾತನಾಡುತ್ತಾ, ‘ನನಗೆ ಏನೂ ವಿಶೇಷ ಅನಿಸಲಿಲ್ಲ. ಇಬ್ಬರೂ ಒಳ್ಳೆಯ ಗೆಳೆಯರಾಗಿದ್ದೀರ ಹಾಗೆಯೇ ಇರಿ. ನನಗೆ ಅದರಲ್ಲೇನೂ ವಿಶೇಷ ಅನಿಸಲಿಲ್ಲ. ನನ್ನ ಮಗಳು ಏನೆಂಬುದು ನನಗೆ ಗೊತ್ತಿದೆ. ಆ ವ್ಯಕ್ತಿ ಏನೆಂಬುದು ಅವರಿಗೆ ಗೊತ್ತಿದೆ’ ಎಂದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಗೆ ಬಂದ ಅಮ್ಮನನ್ನು ಮಾತನಾಡಿಸಲಾಗದೆ ತ್ರಿವಿಕ್ರಮ್ ಕಣ್ಣೀರು

ಆ ಬಳಿಕ ತ್ರಿವಿಕ್ರಮ್ ಅವರ ತಾಯಿ ಬಿಗ್​ಬಾಸ್ ಮನೆಗೆ ಬಂದರು. ಭವ್ಯಾ ಅವರೊಟ್ಟಿಗೆ ಮಾತನಾಡುತ್ತಾ, ‘ನೀನು ನನ್ನ ಮಗ ಚೆನ್ನಾಗಿ ಆಡುತ್ತಿದ್ದೀರ. ನೀವಿಬ್ಬರೂ ಕೃಷ್ಣ-ರಾಧೆ ಇದ್ದಹಾಗೆ ಇದ್ದೀರ ಎಂದರು. ಕೃಷ್ಣ ರಾಧೆ ಎಂದರೆ ಪರಸ್ಪರ ಪ್ರೀತಿ ಮಾಡುತ್ತಿದ್ದೀರ ಎಂದಲ್ಲ. ಅಷ್ಟು ಅನ್ಯೋನ್ಯವಾಗಿ ಪರಸ್ಪರ ಸ್ನೇಹವಾಗಿ ಇದ್ದೀರ ಎಂದು ಅರ್ಥ’ ಎಂದರು. ಅದಕ್ಕೆ ಭವ್ಯಾ ಸಹ ಹೌದು ಎಂದರು.

ಆ ನಂತರ ತ್ರಿವಿಕ್ರಮ್ ಆಕ್ಟಿವಿಟಿ ರೂಂನಿಂದ ಹೊರಗೆ ಬಂದ ಮೇಲೆ ತ್ರಿವಿಕ್ರಮ್ ತಾಯಿ ಬಳಿ ಭವ್ಯಾ ದೂರುಗಳನ್ನು ಹೇಳಿದರು. ಸುಮ್ಮನೆ ಹೊಡೆಯುತ್ತಾನೆ ಎಂದೆಲ್ಲ ಹೇಳಿದರು. ಆ ನಂತರ ಇಬ್ಬರ ಬಳಿಯೂ ನೀವಿಬ್ಬರೂ ಹೀಗೆ ಒಳ್ಳೆಯ ಗೆಳೆತನದಿಂದ ಆಟ ಆಡಿ ಎಂದು ಸಲಹೆ ಕೊಟ್ಟರು. ತ್ರಿವಿಕ್ರಮ್ ಅನ್ನು ಉದ್ದೇಶಿಸಿ, ಯಾರಿಗಾಗಿಯೂ ನೀನು ಆಟ ಬಿಟ್ಟುಕೊಡಲು ಹೋಗಬೇಡ, ಇದು ಕ್ರಿಕೆಟ್ ಅಲ್ಲ, ಇದು ಒಬ್ಬನೇ ಆಡಬೇಕಾದ ಆಟ’ ಎಂದು ಸಲಹೆ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ