ಕಪ್ ಗೆದ್ದಷ್ಟೇ ಖುಷಿಯಲ್ಲಿದ್ದಾರೆ ಐಶ್ವರ್ಯಾ; ಇದಕ್ಕೆ ಕಾರಣ ಆಗಿದ್ದು ಬಿಗ್ ಬಾಸ್​ನ ಆ ಒಂದು ನಿರ್ಧಾರ

ಐಶ್ವರ್ಯಾ ಶಿಂಧೋಗಿ ಅವರು ಬಿಗ್ ಬಾಸ್ ಕನ್ನಡದಿಂದ ಎಲಿಮಿನೇಟ್ ಆಗಿದ್ದಾರೆ. ಅವರ ಭಾವನಾತ್ಮಕ ವಿದಾಯ ಮತ್ತು 90 ದಿನಗಳ ಪ್ರಯಾಣದ ಅನುಭವಗಳನ್ನು ಅವರು ಹಂಚಿಕೊಂಡಿದ್ದಾರೆ. ತಂದೆ-ತಾಯಿ ಇಲ್ಲದ ಐಶ್ವರ್ಯಾ ಅವರಿಗೆ ಬಿಗ್ ಬಾಸ್ ತಂಡದಿಂದ ವಿಶೇಷ ಗೌರವ ಸಿಕ್ಕಿದೆ. ಅವರ ಬಾಂಧವ್ಯಗಳು ಮತ್ತು ಮನೆಯಲ್ಲಿನ ಅನುಭವಗಳ ಬಗ್ಗೆ ಅವರು ಮಾತನಾಡಿದ್ದಾರೆ.

ಕಪ್ ಗೆದ್ದಷ್ಟೇ ಖುಷಿಯಲ್ಲಿದ್ದಾರೆ ಐಶ್ವರ್ಯಾ; ಇದಕ್ಕೆ ಕಾರಣ ಆಗಿದ್ದು ಬಿಗ್ ಬಾಸ್​ನ ಆ ಒಂದು ನಿರ್ಧಾರ
ಐಶ್ವರ್ಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 31, 2024 | 12:53 PM

ಬಿಗ್ ಬಾಸ್ ಮನೆಯಿಂದ ಐಶ್ವರ್ಯಾ ಶಿಂಧೋಗಿ ಅವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಅವರು ಅಲ್ಲಿ ಸಾಕಷ್ಟು ಏರಿಳಿತ ಕಂಡರು. 90 ದಿನಗಳ ಬಿಗ್ ಬಾಸ್ ಜರ್ನಿಯಲ್ಲಿ ಅವರು ಸಾಕಷ್ಟು ನೆನಪುಗಳೊಂದಿಗೆ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಈಗ ಅವರಿಗೆ ಕಪ್​ ಗೆದ್ದಷ್ಟೇ ಖುಷಿ ಆಗಿದೆ. ಈ ಬಗ್ಗೆ ಅವರು ಟಿವಿ9 ಕನ್ನಡ ಜೊತೆ ಮಾತನಾಡಿದ್ದಾರೆ. ಬಿಗ್ ಬಾಸ್ ಜರ್ನಿಯನ್ನು ಅವರು ನೆನಪಿಸಿಕೊಂಡಿದ್ದಾರೆ.

ಐಶ್ವರ್ಯಾಗೆ ತಂದೆ-ತಾಯಿ ಇಲ್ಲ. ಹೀಗಾಗಿ, ಅವರು ಎಲಿಮಿನೇಟ್ ಆಗುವಾಗ ಬಿಗ್ ಬಾಸ್ ಭಾವುಕ ಸಾಲುಗಳನ್ನು ಬರೆದಿದ್ದರು. ಈ ಬಗ್ಗೆ ಐಶ್ವರ್ಯಾ ಮಾತನಾಡಿದ್ದಾರೆ. ‘ಬಿಗ್ ಬಾಸ್ ವೀಕೆಂಡ್ ಒಬ್ಬರು ಎಲಿಮಿನೇಟ್ ಆಗುತ್ತಾರೆ. ಈ ವಾರದ ಎಲಿಮಿನೇಷನ್ ಕಾಲೇಜುಗಳಲ್ಲಿ ನಡೆಸುವ ಒಂದು ಫೇರ್​ವೆಲ್​ ರೀತಿಯೇ ಇತ್ತು. ಬಿಗ್ ಬಾಸ್ ಪ್ರೀತಿ ಹಾರೈಕೆ ಮೂಲಕ ನನ್ನನ್ನು ಕಳುಹಿಸಿದ್ದಾರೆ. ಒಂದು ಕಡೆ ಬೇಸರ ಇದೆ, ಮತ್ತೊಂದು ಕಡೆ ಖುಷಿ ಇದೆ’ ಎಂದಿದ್ದಾರೆ ಐಶ್ವರ್ಯಾ ಅವರು.

‘ನನ್ನ ಎಲಿಮಿನೇಷನ್ ವೇಳೆ ಬಿಗ್ ಬಾಸ್ ವಿಶೇಷ ಲೆಟರ್ ಕಳುಹಿಸಿದ್ದರು. ನಿಮ್ಮ ನವರಸಗಳನ್ನು ಬಿಗ್ ಬಾಸ್ ಮನೆ ನೋಡಿದೆ ಎಂದು ಲೆಟರ್​​ನಲ್ಲಿ ಬರೆಯಲಾಗಿತ್ತು. ಡೋರ್ ಹತ್ತಿರ ನಿಲ್ಲುವಾಗ ಬಿಗ್ ಬಾಸ್ ಮಾತನಾಡಿದರು. ತವರನ್ನು ಬಿಟ್ಟು ಹೋಗುತ್ತಿದ್ದೀಯಾ, ಹೋಗಿ ಬಾ ಮಗಳೆ ಎಂದರು. ಇದರಿಂದ ಕಪ್ ಗೆದ್ದಷ್ಟೇ ಖುಷಿ ಆಗಿದೆ. ಬಿಗ್ ಬಾಸ್ ಇತಿಹಾಸದಲ್ಲಿ ಇಷ್ಟು ಎಮೋಷನಲ್ ಫೇರ್​ವೆಲ್​ ಯಾರಿಗೂ ಸಿಕ್ಕಿರುವುದಿಲ್ಲ ಎಂಬುದು ನನ್ನ ಭಾವನೆ. ಎಲಿಮಿನೇಷನ್ ಪ್ರಕ್ರಿಯೆ ಕೂಡ ಇಷ್ಟು ಬ್ಯೂಟಿಫುಲ್ ಇರುತ್ತದೆ ಎಂಬುದು ಗೊತ್ತಿರಲಿಲ್ಲ. ಬಿಗ್ ಬಾಸ್ ಸಾಕಷ್ಟು ನೀತಿ ಪಾಠಗಳನ್ನು ಕಲಿಸಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ

‘ಬಿಗ್ ಬಾಸ್ ಮನೇನ ನಾನು ಮನೆಯ ರೀತಿ ನೋಡಿಲ್ಲ. ಅದುವೇ ನನ್ನ ಮನೆ ಆಯ್ತು. ಎಲ್ಲವೂ ಕಂಫರ್ಟ್​ಜೋನ್ ತರ ಫೀಲ್ ಆಯ್ತು. ಅಲ್ಲಿ ಹೋಗಾದ ಬಳಿಕ ಅದು ನನ್ನ ಮನೆ ಆಯ್ತು. ಬಾಂಡ್ ಶೇರ್ ಮಾಡಿಕೊಂಡಿದ್ದೆ. ಒಬ್ಬರು ಅಣ್ಣ ಆಗಿದ್ದರು, ಒಬ್ಬರು ತಂಗಿ ಆಗಿದ್ದರು. ಎಷ್ಟೇ ಕಿತ್ತಾಡಿದರೂ ಮತ್ತೆ ಹೋಗಿ ಮಾತನಾಡಬೇಕಿತ್ತು’ ಎಂದು ಬಿಗ್ ಬಾಸ್ ಮನೆಯ ದಿನಗಳನ್ನು ಐಶ್ವರ್ಯಾ ನೆನಪಿಸಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಯಾರ ಮಾತು ಕೇಳಬೇಕೆಂದು ಗೊತ್ತಾಗದ ಪೊಲೀಸ್ ಪರಿಸ್ಥಿತಿಯ ಕೈಗೊಂಬೆ!
ಯಾರ ಮಾತು ಕೇಳಬೇಕೆಂದು ಗೊತ್ತಾಗದ ಪೊಲೀಸ್ ಪರಿಸ್ಥಿತಿಯ ಕೈಗೊಂಬೆ!
ನನ್ನ ಮುಟ್ಟಿದರೆ ಹುಷಾರ್ ಪೊಲೀಸರ ಬಳಿ ಅಶೋಕ್ ಅಬ್ಬರ
ನನ್ನ ಮುಟ್ಟಿದರೆ ಹುಷಾರ್ ಪೊಲೀಸರ ಬಳಿ ಅಶೋಕ್ ಅಬ್ಬರ
ಸಿದ್ದರಾಮಯ್ಯ ನಡೆಸುತ್ತಿರೋದು ಒಂದು ಕಳಂಕಿತ ಸರ್ಕಾರ: ಪ್ರತಾಪ್ ಸಿಂಹ
ಸಿದ್ದರಾಮಯ್ಯ ನಡೆಸುತ್ತಿರೋದು ಒಂದು ಕಳಂಕಿತ ಸರ್ಕಾರ: ಪ್ರತಾಪ್ ಸಿಂಹ
ಚಿರತೆ ಕಂಡರೆ ಜನ ಪ್ಯಾನಿಕ್ ಆಗದೆ 1926 ನಂಬರ್​ಗೆ ಕರೆ ಮಾಡಬೇಕು: ಡಿಸಿಎಫ್
ಚಿರತೆ ಕಂಡರೆ ಜನ ಪ್ಯಾನಿಕ್ ಆಗದೆ 1926 ನಂಬರ್​ಗೆ ಕರೆ ಮಾಡಬೇಕು: ಡಿಸಿಎಫ್
10 ವರ್ಷಗಳಿಂದ ಅಯ್ಯಪ್ಪ ಮಾಲೆ ಧರಿಸುತ್ತಿದ್ದಾರೆ ಈ ಮುಸ್ಲಿಂ ವ್ಯಕ್ತಿ
10 ವರ್ಷಗಳಿಂದ ಅಯ್ಯಪ್ಪ ಮಾಲೆ ಧರಿಸುತ್ತಿದ್ದಾರೆ ಈ ಮುಸ್ಲಿಂ ವ್ಯಕ್ತಿ
ದಿನಗೂಲಿ ನೌಕರರಿಗೆ ಹೆಚ್ಚಿನ ಸಮಸ್ಯೆ, ಮಗುವನ್ನು ಹೊತ್ತುಕೊಂಡೇ ನಡೆದ ಮಹಿಳೆ
ದಿನಗೂಲಿ ನೌಕರರಿಗೆ ಹೆಚ್ಚಿನ ಸಮಸ್ಯೆ, ಮಗುವನ್ನು ಹೊತ್ತುಕೊಂಡೇ ನಡೆದ ಮಹಿಳೆ
ತುಮಕೂರು: ದೂರು ನೀಡಲು ಬಂದ ಮಹಿಳೆಗೆ ಡಿವೈಎಸ್​ಪಿಯಿಂದ ಲೈಂಗಿಕ ಕಿರುಕುಳ
ತುಮಕೂರು: ದೂರು ನೀಡಲು ಬಂದ ಮಹಿಳೆಗೆ ಡಿವೈಎಸ್​ಪಿಯಿಂದ ಲೈಂಗಿಕ ಕಿರುಕುಳ
ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಸುರಿಮಳೆ; ಫ್ರಸ್ಟ್ರೇಟ್ ಆದ ಧನರಾಜ್
ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಸುರಿಮಳೆ; ಫ್ರಸ್ಟ್ರೇಟ್ ಆದ ಧನರಾಜ್
ಗ್ರಾ.ಪಂ. ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ಪ್ರಾರ್ಥನೆ ವಿಡಿಯೋ ವೈರಲ್
ಗ್ರಾ.ಪಂ. ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ಪ್ರಾರ್ಥನೆ ವಿಡಿಯೋ ವೈರಲ್
ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ ಕೊಹ್ಲಿ; ನಾಟೌಟ್ ಎಂದ ಅಂಪೈರ್
ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ ಕೊಹ್ಲಿ; ನಾಟೌಟ್ ಎಂದ ಅಂಪೈರ್