ಸುದೀಪ್ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್: ಜೀ ಕನ್ನಡ ರಿಯಾಲಿಟಿ ಶೋನಲ್ಲಿ ಕಿಚ್ಚ, ಇಲ್ಲಿದೆ ಪ್ರೋಮೋ
ಬಿಗ್ ಬಾಸ್ ಕನ್ನಡ ಸೀಸನ್ 11ನೇ ಸೀಸನ್ ಈಗಾಗಲೇ ಮೂರು ತಿಂಗಳು ಪೂರ್ಣಗೊಳಿಸಿದೆ. ಸದ್ಯ ದೊಡ್ಮನೆಯಲ್ಲಿ 9 ಮಂದಿ ಇದ್ದಾರೆ. ಫಿನಾಲೆಗೆ ದಿನಾಂಕ ಹತ್ತಿರ ಆಗುತ್ತಿರುವಾಗಲೇ ಸುದೀಪ್ ಕಡೆಯಿಂದ ಅಭಿಮಾನಿಗಳಿಗೆ ಸರ್ಪ್ರೈಸ್ ಸಿಕ್ಕಿದೆ. ಅವರು ಜೀ ಕನ್ನಡ ರಿಯಾಲಿಟಿ ಶೋಗೆ ಆಗಮಿಸಿದ್ದಾರೆ. ಈ ಪ್ರೋಮೋ ಗಮನ ಸೆಳೆದಿದೆ.
ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಹೋಸ್ಟ್ ಆಗಿದ್ದಾರೆ. ಅವರು ಯಶಸ್ವಿಯಾಗಿ ಈ ರಿಯಾಲಿಟಿ ಶೋನ ನಡೆಸಿಕೊಡುತ್ತಿದ್ದಾರೆ. ಇದು ಕೊನೆಯ ಸೀಸನ್ ಎಂದು ಅವರ ಹೇಳಿದ್ದಾರೆ. ಹೀಗಿರುವಾಗಲೇ ಸುದೀಪ್ ಅವರು ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಜೀ ಕನ್ನಡ ರಿಯಾಲಿಟಿ ಶೋಗೆ ಅವರ ಆಗಮನ ಆಗಿದೆ. ಇದರ ಪ್ರೋಮೋ ವೈರಲ್ ಆಗಿದೆ. ಈ ಎಪಿಸೋಡ್ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಜೀ ಕನ್ನಡದಲ್ಲಿ ‘ಸರಿಗಮಪ’ ಶೋ ಪ್ರಸಾರ ಕಾಣುತ್ತಿದೆ. ಇದು ಉತ್ತಮ ಟಿಆರ್ಪಿ ಕೂಡ ಪಡೆದುಕೊಂಡಿದೆ. ಈ ರಿಯಾಲಿಟಿ ಶೋಗೆ ಸುದೀಪ್ ಆಗಮಿಸಿದ್ದಾರೆ. ಕೇವಲ ಅವರು ಮಾತ್ರವಲ್ಲ ಅವರ ಪತ್ನಿ ಪ್ರಿಯಾ, ಮಗಳು ಸಾನ್ವಿ ಕೂಡ ವೇದಿಕೆ ಏರಿದ್ದಾರೆ. ಈ ವಾರಂತ್ಯದಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ. ಇದರ ಪ್ರೋಮೋ ಗಮನ ಸೆಳೆದಿದೆ.
‘ಮ್ಯಾಕ್ಸ್’ ಯಶಸ್ಸು ಕಂಡಿದೆ. ಈ ಚಿತ್ರದ ಸೆಟಲೈಟ್ ಹಕ್ಕನ್ನು ಖರೀದಿ ಮಾಡಿದ್ದು ಜೀ ಕನ್ನಡ. ಅವರು ವೇದಿಕೆ ಏರಲು ಇದೂ ಒಂದು ಕಾರಣ ಇರಬಹುದು. ಈ ವೇದಿಕೆ ಮೇಲೆ ‘ಮ್ಯಾಕ್ಸ್’ ಪ್ರಮೋಷನ್ ಕೂಡ ಮಾಡಲಾಗಿದೆ. ಸುದೀಪ್ ಅವರು ಈ ರಿಯಾಲಿಟಿ ಶೋಗೆ ಬಂದಿದ್ದು ಫ್ಯಾನ್ಸ್ ಖುಷಿ ಹೆಚ್ಚಿಸಿದೆ.
View this post on Instagram
ಇದನ್ನೂ ಓದಿ: ಸುದೀಪ್ಗೆ ನಡೆದಿತ್ತು ಎರಡನೇ ಮದುವೆ? ಶಾಕಿಂಗ್ ವಿಚಾರ ರಿವೀಲ್ ಮಾಡಿದ ಕಿಚ್ಚ
ಸುದೀಪ್ ಅವರು ವೇದಿಕೆ ಮೇಲೆ ‘ಸರಿಗಮಪ’ ರಿಯಾಲಿಟಿ ಶೋ ಬಗ್ಗೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ವೇಳೆ ಸುದೀಪ್ ಅವರು ಹಾಡನ್ನು ಹಾಡಿದ್ದಾರೆ. ಸಾನ್ವಿ ಕಂಠದಲ್ಲೂ ಹಾಡು ಮೂಡಿ ಬಂದಿದೆ. ಇನ್ನು, ಈ ಎಪಿಸೋಡ್ ಭಾವನಾತ್ಮಕವಾಗಿಯೂ ಸೆಳೆದುಕೊಳ್ಳಲಿದೆ. ಏಕೆಂದರೆ ಸುದೀಪ್ ಅವರ ತಾಯಿಯ ಮೂರ್ತಿ ಮಾಡಿ ತರಲಾಗಿದ್ದು, ಸುದೀಪ್ಗೆ ನೀಡಲಾಗಿದೆ. ಈ ವೇಳೆ ಸುದೀಪ್ ಭಾವುಕರಾದರು. ಸುದೀಪ್ ಅವರು ಇತ್ತೀಚೆಗಷ್ಟೇ ತಾಯಿಯನ್ನು ಕಳೆದುಕೊಂಡರು. ಈ ನೋವಿನಿಂದ ಅವರು ಹೊರ ಬಂದಿಲ್ಲ. ಅನೇಕ ವೇದಿಕೆ ಮೇಲೆ ಸುದೀಪ್ ಅವರು ತಾಯಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.