ಭವ್ಯಾ ಗೌಡಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು? ವೇದಿಕೆ ಮೇಲೆ ರಿವೀಲ್ ಆಯ್ತು

| Updated By: ರಾಜೇಶ್ ದುಗ್ಗುಮನೆ

Updated on: Jan 25, 2025 | 11:24 PM

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಭವ್ಯಾ ಗೌಡ ಅವರು ಎಲಿಮಿನೇಟ್ ಆಗಿದ್ದಾರೆ. ಅವರಿಗೆ 64,48,853 ಮತಗಳು ಬಿದ್ದಿವೆ. ಅವರು ವಿವಿಧ ಸ್ಪಾನ್ಸರ್‌ಗಳಿಂದ ಸಾಕಷ್ಟು ಬಹುಮಾನ ಮೊತ್ತ ಪಡೆದಿದ್ದಾರೆ. 117 ದಿನಗಳ ಪ್ರಯಾಣಕ್ಕೆ ಪ್ರತ್ಯೇಕ ಸಂಭಾವನೆಯನ್ನು ಪಡೆಯಲಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಭವ್ಯಾ ಗೌಡಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು? ವೇದಿಕೆ ಮೇಲೆ ರಿವೀಲ್ ಆಯ್ತು
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಟಾಪ್ 6 ಸ್ಪರ್ಧಿಗಳ ಪೈಕಿ ಭವ್ಯಾ ಗೌಡ ಅವರು ಎಲಿಮಿನೇಟ್ ಆಗಿರೋದು ಗೊತ್ತೇ ಇದೆ. ಕಡಿಮೆ ವೋಟ್ ಪಡೆದ ಅವರು ದೊಡ್ಮನೆಯಿಂದ ಔಟ್ ಆಗಿದ್ದಾರೆ. ಇದಕ್ಕೆ ಅವರು ಸಾಕಷ್ಟು ಬೇಸರ ಮಾಡಿಕೊಂಡರು. ಹಾಗಾದರೆ, ಭವ್ಯಾ ಗೌಡ ಅವರಿಗೆ ಸಿಕ್ಕ ಮತಗಳು ಎಷ್ಟು? ಅವರಿಗೆ ಈ ಸೀಸನ್​ನಲ್ಲಿ ಪಡೆದ ಬಹುಮಾನದ ಮೊತ್ತ ಎಷ್ಟು? ಈ ವಿಚಾರಗಳನ್ನು ನಾವು ನಿಮಗೆ ಹೇಳುತ್ತಿದ್ದೇವೆ.

ಭವ್ಯಾ ಗೌಡ ಅವರು ಕಲರ್ಸ್ ಕನ್ನಡದ ‘ಗೀತಾ’ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ನಟಿಸಿ ಸಾಕಷ್ಟು ಟ್ರೋಲ್ ಆದರು. ಆದರೆ, ಇದಕ್ಕೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆ ಬಳಿಕ ಅವರು ಬಿಗ್ ಬಾಸ್​ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟರು. ಆರಂಭದಲ್ಲಿ ತ್ರಿವಿಕ್ರಂ ಅವರ ನೆರಳಾಗಿದ್ದ ಭವ್ಯಾ ಗೌಡ ಅವರು ನಂತರ ಅವರು ತಮ್ಮ ವಯಕ್ತಿಕ ಆಟವನ್ನು ತೋರಿಸಿದರು.

ಟಾಪ್ 6ರಲ್ಲಿ ಭವ್ಯಾ ಗೌಡ ಸ್ಥಾನ ಪಡೆದುಕೊಂಡಿದ್ದರು. ಮಹಿಳಾ ಸ್ಪರ್ಧಿಗಳ ಪೈಕಿ ಟಾಪ್ 6ರಲ್ಲಿ ಇದ್ದ ಇಬ್ಬರಲ್ಲಿ ಭವ್ಯಾ ಕೂಡ ಒಬ್ಬರು. ಈಗ ಅವರು ಎಲಿಮಿನೇಟ್ ಆಗಿ ಹೊರಕ್ಕೆ ಬಂದಿದ್ದಾರೆ. ಭವ್ಯಾಗೆ ಬರೋಬ್ಬರಿ 64,48,853 ವೋಟ್​ಗಳು ಬಿದ್ದಿವೆ. ಈ ಸೀಸನ್​ನಲ್ಲಿ ಟಾಪ್ 6ರಲ್ಲಿ ಇರುವ ವ್ಯಕ್ತಿಗೆ ಬಿದ್ದ ಅತಿ ಕಡಿಮೆ ವೋಟ್ ಇದಾಗಿದೆ. ಗೆದ್ದ ಸ್ಪರ್ಧಿಗೆ 5 ಕೋಟಿ ವೋಟ್ ಬಿದ್ದಿದೆ ಅನ್ನೋದು ವಿಶೇಷ. ಅವರು ಯಾರು ಎನ್ನುವ ಪ್ರಶ್ನೆಗೆ ನಾಳೆಗೆ ಉತ್ತರ ಸಿಗಲಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಭವ್ಯಾ ಗೌಡ ಎಲಿಮಿನೇಟ್ ಆಗಿದ್ದಕ್ಕೆ ಕಾರಣಗಳು ಏನು?

ಇನ್ನು, ಭವ್ಯಾ ಗೌಡ ಅವರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬಹುಮಾನದ ಮೊತ್ತ ಸಿಕ್ಕಿದೆ. ಶ್ರೀಕೃಷ್ಣ ಹಳ್ಳಿ ತುಪ್ಪದ ಕಡೆಯಿಂದ 2 ಲಕ್ಷ ರೂಪಾಯಿ, ಸುದರ್ಶನ್ ಸಿಲ್ಕ್ಸ್ ಕಡೆಯಿಂದ 1 ಲಕ್ಷ ರೂಪಾಯಿ ಹಾಗೂ ಇಕೋ ಪ್ಲ್ಯಾನೆಟ್ ಎಲಿವೇಟರ್ ಕಡೆಯಿಂದ 50 ಸಾವಿರ ರೂಪಾಯಿ ಅವರಿಗೆ ಬಹುಮಾನ ಮೊತ್ತದ ರೂಪದಲ್ಲಿ ಸಿಕ್ಕಿದೆ. ಈ ಹಣದ ಜೊತೆ 117 ದಿನ ದೊಡ್ಮನೆಯಲ್ಲಿ ಕಳೆದಿರುವುದಕ್ಕೆ ಪ್ರತ್ಯೇಕ ಸಂಭಾವನೆಯನ್ನು ಅವರು ಪಡೆದುಕೊಳ್ಳಲಿದ್ದಾರೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:23 pm, Sat, 25 January 25