ಅಂದು ಮುದ್ದು ಕಂದಮ್ಮ, ಇಂದು ಕಿರುತೆರೆ ಸುಂದರಿ: ಧೂಳೆಬ್ಬಿಸಿದ ಭವ್ಯಾ ಗೌಡ ಬಾಲ್ಯದ ಫೋಟೋ

ಕಿರುತೆರೆ ನಟಿ ಭವ್ಯಾ ಗೌಡ ಅವರ ಬಾಲ್ಯದ ಮತ್ತು ಈಗಿನ ಅಪರೂಪದ ಫೋಟೋಗಳ ಕೊಲಾಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 1999ರ ಮುದ್ದು ಬಾಲ್ಯದಿಂದ 2026ರ 'ಕರ್ಣ' ಧಾರಾವಾಹಿಯ ಜನಪ್ರಿಯ ನಟಿಯವರೆಗಿನ ಅವರ ಸುಂದರ ಪಯಣವನ್ನು ಈ ಚಿತ್ರಗಳು ಬಿಂಬಿಸುತ್ತವೆ. ಅಭಿಮಾನಿಗಳು ಭವ್ಯಾ ಗೌಡ ಅವರ ಈ ಪರಿವರ್ತನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಮುಗ್ಧ ನಗುವಿಗೆ ಮನಸೋತಿದ್ದಾರೆ.

ಅಂದು ಮುದ್ದು ಕಂದಮ್ಮ, ಇಂದು ಕಿರುತೆರೆ ಸುಂದರಿ: ಧೂಳೆಬ್ಬಿಸಿದ ಭವ್ಯಾ ಗೌಡ ಬಾಲ್ಯದ ಫೋಟೋ
ಭವ್ಯಾ ಗೌಡ
Edited By:

Updated on: Jun 30, 2026 | 7:50 AM

ಮುಖ್ಯಾಂಶಗಳು

  • ನಟಿ ಭವ್ಯಾ ಗೌಡ ಬಾಲ್ಯದ ಫೋಟೋ ವೈರಲ್
  • ಸಾಮಾಜಿಕ ಜಾಲತಾಣಗಳಲ್ಲಿ ಭವ್ಯಾ ಗೌಡ ಫೋಟೋಗೆ ಪ್ರೀತಿ
  • 'ಕರ್ಣ' ಧಾರಾವಾಹಿಯ ನಟಿಯ ಪಯಣ ಇಲ್ಲಿದೆ

ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ಅಪರೂಪದ ಫೋಟೋಗಳು ಮತ್ತು ಅವರ ಬಾಲ್ಯದ ನೆನಪುಗಳು ವೈರಲ್ ಆಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ನೆಚ್ಚಿನ ನಟ-ನಟಿಯರ ಬಾಲ್ಯದ ಮುಗ್ಧ ಮುಖವನ್ನು ನೋಡಲು ಅಭಿಮಾನಿಗಳು ಸದಾ ಕಾತರರಾಗಿರುತ್ತಾರೆ. ಅದೇ ರೀತಿ, ಸದ್ಯ ಇನ್‌ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಕಿರುತೆರೆಯ ಖ್ಯಾತ ನಟಿಯೊಬ್ಬರ ಬಾಲ್ಯದ ಹಾಗೂ ಇಂದಿನ ಸುಂದರ ಕೊಲಾಜ್ ಚಿತ್ರವೊಂದು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.

ವೈರಲ್ ಆಗಿರುವ ಈ ಚಿತ್ರದಲ್ಲಿರುವುದು ಬೇರೆ ಯಾರೂ ಅಲ್ಲ, ಪ್ರೇಕ್ಷಕರ ನೆಚ್ಚಿನ ನಟಿ ಭವ್ಯಾ ಗೌಡ. ಈ ಕೊಲಾಜ್ ಫೋಟೋದಲ್ಲಿ 1999ರ ಅವರ ಬಾಲ್ಯದ ದಿನಗಳು ಮತ್ತು 2026ರ ಪ್ರಸ್ತುತ ಝಲಕ್ ಕಾಣಬಹುದು. ಎಡಭಾಗದಲ್ಲಿರುವ 1999ರ ಹಳೆಯ ಚಿತ್ರದಲ್ಲಿ ಭವ್ಯಾ ಗೌಡ ಅವರು ಕ್ರಾಪ್ ಕಟ್ ಕೂದಲಿನೊಂದಿಗೆ, ಕಪ್ಪು ಬಣ್ಣದ ಉಡುಪಿನಲ್ಲಿ ಮುದ್ದಾದ ನಗು ಬೀರುತ್ತಾ ಕಂಗೊಳಿಸುತ್ತಿದ್ದಾರೆ. ಈ ಫೋಟೋಗೆ ಚಿಕ್ಕ ಕನಸುಗಳು, ದೊಡ್ಡ ನಗು ಎಂಬ ಅಡಿಬರಹ ನೀಡಲಾಗಿದೆ.

ಇನ್ನು ಬಲಭಾಗದಲ್ಲಿರುವ 2026ರ ಇತ್ತೀಚಿನ ಚಿತ್ರದಲ್ಲಿ ಭವ್ಯಾ ಗೌಡ ಅವರು ಸಾಂಪ್ರದಾಯಿಕ ನೇರಳೆ ಮತ್ತು ಹಳದಿ ಬಣ್ಣದ ರೇಷ್ಮೆ ಸೀರೆಯನ್ನು ಉಟ್ಟು, ಸುಂದರ ಒಡವೆಗಳೊಂದಿಗೆ ಅದ್ಭುತವಾಗಿ ಮಿಂಚುತ್ತಿದ್ದಾರೆ. ಈ ಚಿತ್ರಕ್ಕೆ ಅದೇ ನಗು, ಹೊಸ ಅಧ್ಯಾಯ ಎಂಬ ಕ್ಯಾಪ್ಷನ್ ಇದ್ದು, ಚಿತ್ರದ ಕೆಳಗೆ ಅಂದಿನಿಂದ ಇಂದಿನವರೆಗೆ, ಸದಾ ಬೆಳವಣಿಗೆ, ಸದಾ ಹೊಳಪು’ ಎಂದು ಬರೆಯುವ ಮೂಲಕ ಅಭಿಮಾನಿಗಳು ಭವ್ಯಾ ಜರ್ನಿಯನ್ನು ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಶೂಟಿಂಗ್ ಸೆಟ್​​ನಲ್ಲಿ ನಮ್ರತಾಗೆ ಪ್ರ್ಯಾಂಕ್ ಮಾಡಿದ ಭವ್ಯಾ ಗೌಡ: ವಿಡಿಯೋ

ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟಿ ಭವ್ಯಾ ಗೌಡ ಅವರು ಸದ್ಯ ‘ಕರ್ಣ’ ಧಾರಾವಾಹಿಯ ಮೂಲಕ ಮನೆಮಾತಾಗಿದ್ದಾರೆ. ಈ ಸೀರಿಯಲ್‌ನಲ್ಲಿನ ಅವರ ಅದ್ಭುತ ನಟನೆ ಹಾಗೂ ಪಾತ್ರ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸುತ್ತಿದೆ. ನಟನೆಯ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದಾರೆ. ‘ಕರ್ಣ’ ಧಾರಾವಾಹಿಯ ವೀಕ್ಷಕರು ಕಮೆಂಟ್ಸ್ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us