‘ಅಮೃತಧಾರೆ’: ತುಂಬು ಗರ್ಭಿಣಿ ಭೂಮಿಕಾಳ ಸಹಾಯಕ್ಕೆ ಶಿವು-ಪಾರು ಮಾಡಿದ ಸಾಹಸ ಒಂದೆರಡಲ್ಲ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಅಕಾಲಿಕ ಹೆರಿಗೆ ನೋವು ಆರಂಭವಾಗಿದೆ. ದೂರದ ಹಳ್ಳಿಯಲ್ಲಿ ಸಿಲುಕಿರುವ ಭೂಮಿಕಾಳನ್ನು ಅಣ್ಣಯ್ಯ ಧಾರಾವಾಹಿಯ ಶಿವು ಮತ್ತು ಪಾರು ರಕ್ಷಿಸುತ್ತಾರೆ. ರೌಡಿಗಳ ದಾಳಿಯನ್ನು ಎದುರಿಸಿ, ಹಳ್ಳಿ ಔಷಧಿ ಪಡೆದು, ಆಸ್ಪತ್ರೆಗೆ ತಲುಪಿಸಲು ಅವರು ಹೋರಾಡುತ್ತಾರೆ. ಜಯದೇವ್ ಮತ್ತು ಆತನ ತಾಯಿ ಭೂಮಿಕಾಳನ್ನು ಕೊಲ್ಲಿಸಲು ಯೋಜಿಸುತ್ತಿದ್ದಾರೆ.

‘ಅಮೃತಧಾರೆ’: ತುಂಬು ಗರ್ಭಿಣಿ ಭೂಮಿಕಾಳ ಸಹಾಯಕ್ಕೆ ಶಿವು-ಪಾರು ಮಾಡಿದ ಸಾಹಸ ಒಂದೆರಡಲ್ಲ
ಶಿವು-ಪಾರು

Updated on: Jul 09, 2025 | 8:53 AM

‘ಅಮೃತಧಾರೆ’ ಧಾರಾವಾಹಿ (Amruthadhare Serial) ಈಗ ಪ್ರಮುಖ ಘಟ್ಟ ತಲುಪಿದೆ. ಭೂಮಿಕಾ ಪ್ರೆಗ್ನೆಂಟ್. ಆದರೆ, ತಿಂಗಳು ತುಂಬುವ ಮೊದಲೇ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆದರೆ, ಇದು ಕಾಣಿಸಿಕೊಂಡಿದ್ದು ದೂರದ ಹಳ್ಳಿಯಲ್ಲಿ. ಈ ವೇಳೆ ಅವಳ ಸಹಾಯಕ್ಕೆ ‘ಅಣ್ಣಯ್ಯ’ ಧಾರಾವಾಹಿಯ ಶಿವು ಹಾಗೂ ಪಾರು ಬಂದಿದ್ದಾರೆ. ಭೂಮಿಕಾ ಸಹಾಯಕ್ಕೆ ಇವರು ಮಾಡಿದ ಸಾಹಸಗಳು ಒಂದೆರಡಲ್ಲ. ಇದರ ಪ್ರೋಮೋಗಳನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ.

ಭೂಮಿಕಾಗೆ ಕಾಮಾಲೆ ಆಗಿದೆ ಎಂದು ವೈದ್ಯರು ಹೇಳಿದರು. ಹಳ್ಳಿ ಔಷಧಿ ಕೊಡಿಸಲು ಆಕೆಯನ್ನು ಹಳ್ಳಿಗೆ ಕರೆತರಲಾಯಿತು. ಈ ವೇಳೆ ಕಾರು ಡ್ರೈವರ್ ಕೀ ಸಮೇತ ಓಡಿ ಹೋಗಿದ್ದಾನೆ. ಆಗ ಇಬ್ಬರೂ ನಡೆದೇ ಬರಬೇಕಾಯಿತು. ಆಗ ಅಲ್ಲಿದ್ದ ಕೆಲವರು ಇವರ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾರೆ. ಆಗ ಸಹಾಯಕ್ಕೆ ಬಂದಿದ್ದು ಶಿವು. ಶಿವು ಹಾಗೂ ಗೌತಮ್ ಸೇರಿ ರೌಡಿಗಳನ್ನು ಹೊಡೆದುರುಳಿಸಿದರು.

ಇದನ್ನೂ ಓದಿ
‘ನಾನು ಗೌರಿಯನ್ನು ಮದುವೆಯಾಗಿ ಆಗಿದೆ..’; ಶಾಕಿಂಗ್ ಅಪ್​ಡೇಟ್ ಕೊಟ್ಟ ಆಮಿರ್
ನಿರ್ದೇಶಕನ ಜೊತೆಗಿನ ಪ್ರೀತಿ ವಿಚಾರವನ್ನು ಖಚಿತಪಡಿಸಿದ ಸಮಂತಾ; ಕ್ಯೂಟ್ ಫೋಟೋ
ಆಂಧ್ರ ಪ್ರದೇಶದಲ್ಲಿ ಗಾಂಜಾ ಕಡಿಮೆ ಮಾಡಿದ ನಟ ಪವನ್ ಕಲ್ಯಾಣ್
‘ನಿವೇದಿತಾಳನ್ನು ಈಗಲೂ ಮಿಸ್ ಮಾಡಿ ಕೊಳ್ತೀನಿ’; ಚಂದನ್ ಶೆಟ್ಟಿ

ಆ ಬಳಿಕ ಭೂಮಿಕಾಳನ್ನು ಹತ್ತಿರದ ಹಳ್ಳಿ ಔಷಧಿ ಕೊಡುವ ವ್ಯಕ್ತಿ ಬಳಿಗೆ ಕರೆದುಕೊಂಡು ಹೋಗಲಾಯಿತು. ಅವರು ಭೂಮಿಕಾಗೆ ಹಳ್ಳಿ ಔಷಧಿಯನ್ನು ಕೊಟ್ಟರು. ಆಗ ಕಾಣಿಸಿಕೊಂಡಿತು ಹೆರಿಗೆ ನೋವು. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಎಂದರೆ ಟ್ರ್ಯಾಕ್ಟರ್ ಸ್ಟಾರ್ಟ್ ಆಗಲೇ ಇಲ್ಲ.


ಈ ವೇಳೆ ಶಿವು ಪತ್ನಿ ಡಾ. ಪಾರುಗೆ ಕರೆ ಮಾಡಿದ್ದಾನೆ. ಆಕೆ ಸಹಾಯಕ್ಕೆ ಬರೋದಾಗಿ ಹೇಳಿ ಕಾರನ್ನು ಡ್ರೈವ್ ಮಾಡಿಕೊಂಡು ಬಂದಿದ್ದಾಳೆ. ಇತ್ತ ತರಕಾರಿಯನ್ನು ತೆಗೆದುಕೊಂಡು ಹೋಗುವ ತಳ್ಳುವ ಗಾಡಿಯಲ್ಲೇ ಭೂಮಿಕಾಳನ್ನು ಕೂರಿಸಿಕೊಂಡು ಮುಖ್ಯ ರಸ್ತೆವರೆಗೆ ತೆರಳಿದ್ದಾನೆ ಶಿವು. ಭೂಮಿಕಾಳ ಸಹಾಯಕ್ಕೆ ಪ್ರಸೂತಿ ತಜ್ಞ ಕರ್ಣ ಕೂಡ ಬರಲಿದ್ದಾನೆ. ‘ಕರ್ಣ’ ಧಾರಾವಾಹಿ ಇತ್ತೀಚೆಗೆ ಪ್ರಸಾರ ಆರಂಭಿಸಿದೆ. ಇದರ ಪ್ರಚಾರವನ್ನು ‘ಅಮೃತಧಾರೆ’ ಧಾರಾವಾಹಿಯಲ್ಲಿ ಮಾಡಲಾಗುತ್ತಿದೆ.

ಇದನ್ನೂ ಓದಿ: ‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಕಾಳ ಬಚಾವ್ ಮಾಡಲು ಬಂದ, ‘ಅಣ್ಣಯ್ಯ’, ‘ಕರ್ಣ’

ಭೂಮಿಕಾಳನ್ನು ಕೊಲ್ಲಿಸಬೇಕು ಎಂದು ಜಯದೇವ್ ಹಾಗೂ ಆತನ ತಾಯಿ ನಿರ್ಧರಿಸಿದ್ದಾರೆ. ಆದರೆ, ಅದು ಅಷ್ಟು ಸುಲಭದಲ್ಲಿ ಇಲ್ಲ. ಗೌತಮ್ ದಿವಾನ್ ಅವರು ಎಲ್ಲವನ್ನೂ ಎದುರಿಸಿ ಪತ್ನಿಗೆ ಸಹಾಯ ಮಾಡುತ್ತಾ ಇದ್ದಾನೆ. ಭೂಮಿಕಾಗೆ ಮಗು ಹುಟ್ಟುತ್ತದೆಯೋ ಅಥವಾ ಸಾಯುತ್ತದೆಯೋ ಎಂಬುದು ಸದ್ಯದ ಪ್ರಶ್ನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.