‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಕಾಳ ಬಚಾವ್ ಮಾಡಲು ಬಂದ, ‘ಅಣ್ಣಯ್ಯ’, ‘ಕರ್ಣ’
ಅಮೃತಧಾರೆ ಧಾರಾವಾಹಿಯಲ್ಲಿ ಗರ್ಭಿಣಿ ಭೂಮಿಕಾ ಮೇಲೆ ದಾಳಿ ನಡೆದಿದೆ. ಅಣ್ಣಯ್ಯ ಮತ್ತು ಕರ್ಣ ಧಾರಾವಾಹಿಗಳ ಕಲಾವಿದರು ಭೂಮಿಕಾಗೆ ಸಹಾಯಕ್ಕೆ ಬಂದಿದ್ದಾರೆ. ಈ ಮಹಾ ಸಂಗಮ ಧಾರಾವಾಹಿಯ ಟಿಆರ್ಪಿಯನ್ನು ಹೆಚ್ಚಿಸಲಿದೆ. ಜಯದೇವನ ಕುತಂತ್ರದಿಂದ ಭೂಮಿಕಾ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಪಾರ್ವತಿ ಮತ್ತು ಶಿವಣ್ಣ (ಅಣ್ಣಯ್ಯ) ರಕ್ಷಣೆಗೆ ಬಂದಿದ್ದಾರೆ. ಕಿರಣ್ ರಾಜ್ (ಕರ್ಣ) ಕೂಡ ವೈದ್ಯರಾಗಿ ಸಹಾಯ ಮಾಡುತ್ತಾರೆ.

‘ಅಮೃತಧಾರೆ’ ಧಾರಾವಾಹಿ (Amruthadhare Serial) ಹಲವು ಟ್ವಿಸ್ಟ್ಗಳನ್ನು ಪಡೆದು ಸಾಗುತ್ತಿದೆ. ಈ ಧಾರಾವಾಹಿ ಟಿಆರ್ಪಿಯಲ್ಲೂ ಒಳ್ಳೆಯ ರೇಟಿಂಗ್ ಪಡೆಯುತ್ತಿದೆ. ಈಗ ಧಾರಾವಾಹಿ ದೊಡ್ಡ ತಿರುವು ಪಡೆದುಕೊಂಡಿದೆ. ಪ್ರೆಗ್ನೆಂಟ್ ಆಗಿರೋ ಭೂಮಿಕಾ ವಿರುದ್ಧ ಜಯದೇವ್ ಅಟ್ಯಾಕ್ ಮಾಡಿಸೋಕೆ ಪ್ರಯತ್ನಿಸಿದ್ದಾನೆ. ಈ ವೇಳೆ ಸಹಾಯಕ್ಕೆ ‘ಅಣ್ಣಯ್ಯ’ ಹಾಗೂ ‘ಕರ್ಣ’ ಧಾರಾವಾಹಿ ಕಲಾವಿದರು ಬಂದಿದ್ದಾರೆ! ಈ ಮೂಲಕ ‘ಅಮೃತಧಾರೆ’ ಧಾರಾವಾಹಿಯಲ್ಲಿ ಮಹಾ ಸಂಗಮ ಆಗಿದೆ.
ಭೂಮಿಕಾಗೆ ಕಾಮಾಲೆ ಆಗಿದೆ ಎಂಬ ವಿಚಾರ ತಿಳಿಯುತ್ತದೆ. ತುಂಬು ಗರ್ಭಿಣಿಗೆ ಕಾಮಾಲೆ ಆಗಿದ ಎಂದಾಗ ಸಹಜವಾಗಿಯೇ ಆತಂಕ ಸೃಷ್ಟಿ ಆಗುತ್ತದೆ. ಆದರೆ, ಈ ಆತಂಕವನ್ನು ದೂರ ಮಾಡುವ ಅಜ್ಜಿ, ಹಳ್ಳಿ ಔಷಧಿ ಮಾಡಿಸಲು ಸೂಚನೆ ನೀಡುತ್ತಾಳೆ. ಈ ಔಷಧವನ್ನು ಹಾಕಿಸಿಕೊಳ್ಳೋಕೆ ಭೂಮಿಕಾ ಹೊರಡುತ್ತಾಳೆ. ಇದೇ ಸರಿಯಾದ ಸಮಯ ಎಂದು ಭಾವಿಸೋ ಜಯದೇವ್ ದೊಡ್ಡ ಪ್ಲ್ಯಾನ್ ಮಾಡುತ್ತಾನೆ. ಹೇಗಾದರೂ ಮಾಡಿ ಭೂಮಿಕಾನ ಅಲ್ಲಿಯೇ ಮುಗಿಸಬೇಕು ಎಂದು ಕುತಂತ್ರ ರೂಪಿಸುತ್ತಾನೆ.
ಭೂಮಿಕಾ ಹಳ್ಳಿಗೆ ತೆರಳೋ ದಾರಿ ಮಧ್ಯೆ ಕಾರು ಕೆಟ್ಟಿ ನಿಲ್ಲುತ್ತದೆ. ಆಗ ಅವಳ ಮೇಲೆ ಅಟ್ಯಾಕ್ ಆಗುತ್ತದೆ. ಆಗ ‘ಅಣ್ಣಯ್ಯ’ ಧಾರಾವಾಹಿಯ ಶಿವಣ್ಣ, ಪಾರ್ವತಿ ಬರುತ್ತಾರೆ. ಶಿವಣ್ಣ ರೌಡಿಗಳ ವಿರುದ್ಧ ಹೋರಾಡಿದರೆ, ಪಾರು, ಭೂಮಿಕಾನಾ ಆಪರೇಷನ್ ಥಿಯೇಟರ್ಗೆ ಕರೆದುಕೊಂಡು ಹೋಗುತ್ತಾಳೆ.
View this post on Instagram
‘ಅಣ್ಣಯ್ಯ’ ಧಾರಾವಾಹಿಯಲ್ಲಿ ಪಾರುಳದ್ದು ವೈದ್ಯೆಯ ಪಾತ್ರ. ಈ ಕಾರಣಕ್ಕೆ ಈ ಸಿಚ್ಯುವೇಶನ್ಗೆ ಹೊಂದುತ್ತದೆ ಎಂದು ಅವರನ್ನು ಕರೆತರಲಾಗಿದೆ. ಇಷ್ಟೇ ಅಲ್ಲ, ಇತ್ತೀಚೆಗೆ ಆರಂಭ ಆದ ‘ಕರ್ಣ’ ಧಾರಾವಾಹಿಯ ಕಲಾವಿದ ಕಿರಣ್ ರಾಜ್ ಕೂಡ ‘ಅಮೃತಧಾರೆ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಇದಕ್ಕೂ ಕಾರಣ ಇದೆ. ‘ಕರ್ಣ’ ಧಾರಾವಾಹಿಯಲ್ಲಿ ಕಿರಣ್ ರಾಜ್ ಅವರದ್ದು ಡಾಕ್ಟರ್ ಪಾತ್ರ. ಹೀಗಾಗಿ, ಅವರನ್ನು ಕರೆತರಲಾಗಿದೆ.
ಇದನ್ನೂ ಓದಿ: ಜುಲೈ 3ರಿಂದ ‘ಕರ್ಣ’ ಧಾರಾವಾಹಿ; ಟಿವಿಗೂ ಮೊದಲೇ ಒಟಿಟಿಯಲ್ಲಿ ಪ್ರಸಾರ
ಈ ರೀತಿಯ ಮಹಾ ಸಂಗಮದಿಂದ ಧಾರಾವಾಹಿ ಟಿಆರ್ಪಿ ಸಾಕಷ್ಟು ಹೆಚ್ಚಲಿದೆ. ಈಗ ‘ಅಣ್ಣಯ್ಯ’ ಹಾಗೂ ‘ಕರ್ಣ’ ಧಾರಾವಾಹಿಯ ವೀಕ್ಷಕರು ಕೂಡ ‘ಅಮೃತಧಾರೆ’ ಧಾರಾವಾಹಿಯನ್ನು ನೋಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:59 am, Sat, 5 July 25







