ಜಗದೀಶ್ ಮನೆ ಮೇಲೆ ದಾಳಿ ಪ್ರಯತ್ನ; ನಡೆಯಿತು ಶಾಕಿಂಗ್ ಬೆಳವಣಿಗೆ

| Updated By: ರಾಜೇಶ್ ದುಗ್ಗುಮನೆ

Updated on: Oct 25, 2024 | 7:24 AM

ಬಿಗ್ ಬಾಸ್ ಖ್ಯಾತಿಯ ವಕೀಲ ಜಗದೀಶ್ ಅವರ ಮನೆ ಮೇಲೆ ಎರಡನೇ ಬಾರಿಗೆ ದಾಳಿ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಘಟನೆಯ ಬಗ್ಗೆ ದೂರು ನೀಡಲು ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಅವರನ್ನು ಭೇಟಿ ಮಾಡಲಿದ್ದಾರೆ. ಮನೆ ಮೇಲೆ ದಾಳಿ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಗದೀಶ್ ಅವರು ಪೊಲೀಸ್ ರಕ್ಷಣೆ ಕೋರಿದ್ದು, ಸಾರ್ವಜನಿಕರಲ್ಲಿ ಚರ್ಚೆ ಹುಟ್ಟುಹಾಕಿದೆ.

ಜಗದೀಶ್ ಮನೆ ಮೇಲೆ ದಾಳಿ ಪ್ರಯತ್ನ; ನಡೆಯಿತು ಶಾಕಿಂಗ್ ಬೆಳವಣಿಗೆ
ಜಗದೀಶ್
Follow us on

ಲಾಯರ್ ಜಗದೀಶ್ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿದೆ. ಹೀಗಿರುವಾಗಲೇ ತಮ್ಮ ಮನೆಯ ಮೇಲೆ ದಾಳಿ ಪ್ರಯತ್ನ ನಡೆದಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ಇಂದು (ಅಕ್ಟೋಬರ್ 25) ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಅವರನ್ನು ಭೇಟಿ ಮಾಡೋದಾಗಿ ಹೇಳಿದ್ದಾರೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.

‘ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ ಅವರನ್ನು ಭೇಟಿ ಮಾಡಬೇಕಿದೆ. ಕಳೆದ ಒಂದೂವರೆ ತಿಂಗಳಲ್ಲಿ ನಡೆದ ಎರಡನೇ ಅಟ್ಯಾಕ್ ಇದು. ಒಂದೂವರೆ ತಿಂಗಳ ಹಿಂದೆ ಸುಮಾರು 25 ಪುಡಾರಿಗಳು ಮನೆ ಹತ್ತಿರ ಬಂದು ಏನು ಮಾಡಿದ್ದರು ಎಂಬುದು ನಿಮಗೆ ಗೊತ್ತೇ ಇದೆ. ಇಂದು (ಅಕ್ಟೋಬರ್ 24) ಬೆಳಿಗ್ಗೆಯಿಂದ 3 ಸಾವಿರ ಜನರನ್ನು ಭೇಟಿ ಮಾಡಿದ್ದೇನೆ. ಆಗ ಏನೂ ಸಮಸ್ಯೆ ಆಗಲಿಲ್ಲ. ಆದರೆ ಮೂರು ಜನರು ಕುಡಿದು ಮನೆಮೇಲೆ ಅಟ್ಯಾಕ್ ಮಾಡೋಕೆ ಬಂದರು. ಭದ್ರತಾ ಸಿಬ್ಬಂದಿ ತಡೆಯೋಕೆ ಹೋದರೆ ಅದು ಸಾಧ್ಯವಾಗಿಲ್ಲ’ ಎಂದಿದ್ದಾರೆ ಜಗದೀಶ್.

‘ನಮ್ಮ ಮಗನ ಫೋನ್​ನಿಂದ ಪೊಲೀಸರಿಗೆ ಕರೆ ಮಾಡಿದೆವು. ಪೊಲೀಸರು ಬಂದು ಅವರನ್ನು ಕಸ್ಟಡಿಗೆ ತೆಗೆದುಕೊಂಡು ಹೋದರು. ವಶಕ್ಕೆ ಪಡೆದ ವ್ಯಕ್ತಿ ಚನ್ನಪಟ್ಟಣದವನಂತೆ. ಬರೋಕೆ ಹೇಳಿ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಅವಾಜ್ ಹಾಕಿದ್ದಾನೆ. ಅಭಿಮಾನ ಓಕೆ ಆದರೆ, ಈ ರೀತಿ ಮನೆಗೆ ನುಗ್ಗೋದು ಎಷ್ಟು ಸರಿ?’ ಎಂದು ಜಗದೀಶ್ ಪ್ರಶ್ನೆ ಮಾಡಿದ್ದಾರೆ.

‘ನಮ್ಮಂಥವರು ಈ ರೀತಿ ಹೋರಾಟ ಮಾಡಿದಾಗ ಇಷ್ಟೆಲ್ಲ ಮಾಡಿದಾಗ ಸೆಕ್ಯುರಿಟಿ ಮೆಶರ್ಸ್ ಏನು ತೆಗೆದುಕೊಂಡಿದ್ದೀರಾ. ಬೆಂಗಳೂರು ಪೊಲೀಸರ ಆಯುಕ್ತರು ಬಳಿ ಇದಕ್ಕೆ ಏನು ವಿವರಣೆ ಇದೆ. ಈ ಕಾರಣಕ್ಕೆ ಅವರನ್ನು ಭೇಟಿ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ನಮ್ಮಂಥವರು ಈ ರೀತಿ ಹೋರಾಟ ಮಾಡಿದಾಗ ಇಷ್ಟೆಲ್ಲ ಮಾಡಿದಾಗ ಸೆಕ್ಯುರಿಟಿ ಮೆಶರ್ಸ್ ಏನು ತೆಗೆದುಕೊಂಡಿದ್ದೀರಾ. ಬೆಂಗಳೂರು ಪೊಲೀಸರ ಆಯುಕ್ತರು ಬಳಿ ಇದಕ್ಕೆ ಏನು ವಿವರಣೆ ಇದೆ. ಈ ಕಾರಣಕ್ಕೆ ಅವರನ್ನು ಭೇಟಿ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.