
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಚಿತ್ರ ವಿಚಿತ್ರ ಸ್ಪರ್ಧಿಗಳು ಆಗಮಿಸಿದ್ದಾರೆ. ಅನೇಕ ಸ್ಪರ್ಧಿಗಳು ತಮ್ಮ ಪ್ರತಿಷ್ಠೆ ಮುಖ್ಯ ಎಂಬ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಈಗ ದೊಡ್ಮನೆಯಲ್ಲಿ ಸತೀಶ್ ಅವರು ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ ಆರು ಗಂಟೆ ಸ್ನಾನ ಮಾಡಿದ್ದಾರೆ! ಇದನ್ನು ನೋಡಿ ಮನೆ ಮಂದಿ ಶಾಕ್ಗೆ ಒಳಗಾಗಿದ್ದಾರೆ. ಅನೇಕರ ತಾಳ್ಮೆಯ ಕಟ್ಟೆ ಒಡೆದು ಹೋಗಿದೆ.
ಮನೆಯಲ್ಲಿ ನಡೆದಂತೆ ಬಿಗ್ ಬಾಸ್ ಮನೆಯಲ್ಲೂ ನಡೆದುಕೊಳ್ಳುತ್ತೇನೆ ಎಂದರೆ ಅದು ಸಾಧ್ಯವೇ ಇಲ್ಲ. ಇಲ್ಲಿ ಸಾಕಷ್ಟು ಶ್ರಮ ಹಾಕಬೇಕಾಗುತ್ತದೆ. ನಿಯಮಗಳಿಗೆ ತಕ್ಕಂತೆ ನಡೆದುಕೊಳ್ಳಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಹಲವು ಅಭ್ಯಾಸಗಳನ್ನು ಬಿಡಬೇಕಾಗುತ್ತದೆ. ಆದರೆ, ಸತೀಶ್ ಮಾತ್ರ ಇದ್ಯಾವುದಕ್ಕೂ ಸಿದ್ಧರಿಲ್ಲ.
ಸತೀಶ್ ಶ್ರೀಮಂತ ಜೀವನ ನಡೆಸಿಕೊಂಡು ಬಂದವರು. ಅವರು ಮನೆಯಲ್ಲಿದ್ದಾಗ ಐಷಾರಾಮಿ ಜೀವನ ನಡೆಸುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಈಗ ದೊಡ್ಮನೆಗೆ ಅವರಿಗೆ ಕಷ್ಟ ಆಗಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ಆ ರೀತಿ ಆಗುತ್ತಿಲ್ಲ. ಅಲ್ಲಿಯೂ ಅವರು ತಮಗೆ ಬೇಕಾದಂತೆ ವಾಸ ಮಾಡುತ್ತಿದ್ದಾರೆ.
ಸತೀಶ್ ಅವರು ಬಿಗ್ ಬಾಸ್ ಮನೆಯಲ್ಲಿ 4-6 ತಾಸುಗಳಷ್ಟು ಸ್ನಾನ ಮಾಡಿದ್ದಾರೆ. ಅವರ ಜೋಡಿ ಚಂದ್ರಪ್ರಭ ಅವರು ಬಾತ್ರೂಂನಲ್ಲಿ ಕುಳಿತು ಕುಳಿತು ಸುಸ್ತಾಗಿದ್ದಾರೆ. ಇದನ್ನು ಅವರಿಂದ ತಡೆದುಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಈ ವಿಚಾರದಲ್ಲಿ ಅವರ ತಾಳ್ಮೆಯ ಕಟ್ಟೆ ಒಡೆದಿದೆ. ಬಾಯಾರಿಕೆ ಆದರೂ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ಮಾಡಿಕೊಂಡು ಗಾಜಿನ ಲೋಟವನ್ನು ಬೀಸಿ ನೆಲಕ್ಕೆ ಎಸೆದಿದ್ದಾರೆ. ಇದರಿಂದ ಗಾಜಿನ ಲೋಟ ಒಡೆದು ಚೂರಾಗಿದೆ.
ಇದನ್ನೂ ಓದಿ: ಕಾಮಿಡಿ ಬಿಟ್ಟು ಕೆಂಡವಾದ ಚಂದ್ರಪ್ರಭ: ಬಿಗ್ ಬಾಸ್ ಮನೆಯ ವಸ್ತುಗಳಿಗೂ ಹಾನಿ
ಸತೀಶ್ ನಡೆದುಕೊಳ್ಳುತ್ತಿರುವ ರೀತಿ ಸರಿ ಇಲ್ಲ ಎಂದು ಮನೆಯ ಅನೇಕರು ಹೇಳಿದ್ದಾರೆ. ಆದರೆ, ಸತೀಶ್ ಮಾತ್ರ ಇದಕ್ಕೆ ತಲೆಕೆಡಿಸಿಕೊಳ್ಳಲೇ ಇಲ್ಲ. ‘ನಾನು ಇರೋದೇ ಹೀಗೆ. ನಾನು ಹೀಗೆಯೇ ನಡೆದುಕೊಳ್ಳೋದು’ ಎಂದು ಆವಾಜ್ ಹಾಕಿದ್ದಾರೆ. ಇದು ಅನೇಕರಿಗೆ ಬೇಸರ ಮೂಡಿಸಿದೆ. ಧನುಷ್ ಗೌಡ ಜಗಳಕ್ಕೆ ಮುಂದಾಗಿದ್ದಾರೆ. ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಈ ಮಾತಿನ ಚಕಮಕಿ ಸಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.