ರಜತ್ ಕುಟುಂಬದವರಿಗೆ ಬ್ಲಾಕ್​ಮೇಲ್, ದೂರು ನೀಡಿದ ಪತ್ನಿ

|

Updated on: Jan 20, 2025 | 11:08 AM

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ರ ಫಿನಾಲೆಗೆ ಕೆಲವೇ ದಿನಗಳಿವೆ. ಹನುಮಂತು, ತ್ರಿವಿಕ್ರಮ್, ಉಗ್ರಂ ಮಂಜು, ಮೋಕ್ಷಿತಾ, ಭವ್ಯಾ ಮತ್ತು ರಜತ್ ಅವರುಗಳು ಫಿನಾಲೆ ವಾರದಲ್ಲಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ರಜತ್ ಗೆಲ್ಲುವ ಅಭ್ಯರ್ಥಿಗಳಲ್ಲಿ ಒಬ್ಬ ಎನಿಸಿಕೊಂಡಿದ್ದಾರೆ. ಆದರೆ ಇದೀಗ ಕೆಲವು ದುಷ್ಕರ್ಮಿಗಳು ರಜತ್ ಕುಟುಂಬದವರನ್ನು ಬ್ಲಾಕ್​ಮೇಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ರಜತ್ ಕುಟುಂಬದವರಿಗೆ ಬ್ಲಾಕ್​ಮೇಲ್, ದೂರು ನೀಡಿದ ಪತ್ನಿ
ರಜತ್ ಮತ್ತು ಪತ್ನಿ ಅಕ್ಷಿತಾ
Follow us on

ಬಿಗ್​ಬಾಸ್ ಕನ್ನಡ ಸೀಸನ್ 11ರ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಇದೇ ವೀಕೆಂಡ್​ನಲ್ಲಿ ಫಿನಾಲೆ ನಡೆಯಲಿದೆ. ಭವ್ಯಾ ಗೌಡ, ಮೋಕ್ಷಿತಾ, ಹನುಮಂತ, ತ್ರಿವಿಕ್ರಮ್, ಉಗ್ರಂ ಮಂಜು ಮತ್ತು ರಜತ್ ಬಿಗ್​ಬಾಸ್ ಫಿನಾಲೆ ತಲುಪಿದ್ದಾರೆ. ರಜತ್ ಅವರು ವೈಲ್ಡ್ ಕಾರ್ಡ್​ ಎಂಟ್ರಿ ಪಡೆದು ಬಿಗ್​ಬಾಸ್ ಮನೆಗೆ ಬಂದಿದ್ದಾರೆ. ತಮ್ಮ ನೇರ ಮಾತು, ಟಾಸ್ಕ್ ಆಡುವ ರೀತಿಗಳಿಂದಾಗಿ ರಜತ್ ಪ್ರೇಕ್ಷಕರ ಗಮನ ಸೆಳೆದಿದ್ದು, ಗೆಲ್ಲುವ ಸ್ಪರ್ಧಿಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.

ಆದರೆ ಫಿನಾಲೆ ವಾರ ಹತ್ತಿರ ಬರುತ್ತಿದ್ದಂತೆ ರಜತ್​ ಕುಟುಂಬಕ್ಕೆ ತಲೆನೋವೊಂದು ಶುರುವಾಗಿದೆ. ಕೆಲ ಟ್ರೋಲ್ ಪೇಜ್​ಗಳು ರಜತ್ ಅವರ ಹಳೆಯ ಚಿತ್ರಗಳನ್ನು ಹೆಕ್ಕಿ ತೆಗೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ರಜತ್​ರ ಮಾನ ಹಾನಿಗೆ ಯತ್ನ ನಡೆಸಿವೆ. ರಜತ್​ರ ಮಾಜಿ ಗರ್ಲ್​ಫ್ರೆಂಡ್​ ಜೊತೆಗಿನ ಚಿತ್ರಗಳನ್ನು ಕೆಲ ಟ್ರೋಲ್​ ಪೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದವು. ಇದು ರಜತ್​ರ ಪತ್ನಿಯ ಗಮನಕ್ಕೆ ಬಂದು, ಕೂಡಲೇ ಚಿತ್ರಗಳನ್ನು ತೆಗೆಯುವಂತೆ ಮನವಿ ಮಾಡಿದ್ದಾರೆ.

ಆಗ ಟ್ರೋಲ್ ಪೇಜ್​ನವರು, ಹಣ ಕೊಟ್ಟರೆ ಫೊಟೊ ಡಿಲೀಟ್ ಮಾಡುವುದಾಗಿ ಹೇಳಿದ್ದರೆ ಅದರಂತೆ ರಜತ್​ ಪತ್ನಿ ಅಕ್ಷಿತಾ ಅವರು 6500 ರೂಪಾಯಿ ಹಣ ಹಾಕಿದ್ದಾರೆ. ಅದಾದ ಬಳಿಕ ಫೋಟೊ ಡಿಲೀಟ್ ಮಾಡಿದ್ದ ಟ್ರೋಲ್ ಪೇಜ್​ಗಳು ಅದಾದ ಬಳಿಕ ಮತ್ತೊಂದು ಸಾಮಾಜಿಕ ಜಾಲತಾಣ ಖಾತೆಯಿಂದ ಮತ್ತೆ ಅದೇ ಫೋಟೊಗಳನ್ನು ಅಪ್​ಲೋಡ್ ಮಾಡಿದ್ದು, ಡಿಲೀಟ್ ಮಾಡುವಂತೆ ಕೇಳಿದರೆ ಮತ್ತೆ ಹಣ ಕೇಳಿದ್ದಾರೆ.

ಇದನ್ನೂ ಓದಿ:ಹಣ ವಾಪಸ್ ಕೊಡಿಸಿ: ನ್ಯಾಯಾಲಯದ ಮೊರೆ ಹೋದ ದರ್ಶನ್

ಇದರಿಂದ ಬೇಸತ್ತಿರುವ ರಜತ್​ರ ಪತ್ನಿ ಅಕ್ಷಿತಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್​ಐಆರ್ ದಾಖಲಾಗಿದೆ. ರಜತ್ ಅವರ ಪತ್ನಿ ಅವರಿಂದ ಹಣ ಕೇಳಿದ ಮತ್ತು ರಜತ್ ಹಾಗೂ ಅವರ ಮಾಜಿ ಗರ್ಲ್​ಫ್ರೆಂಡ್​ ಅವರುಗಳ ಖಾಸಗಿ ಫೋಟೊಗಳನ್ನು ಅಪ್​ಲೋಡ್ ಮಾಡಿದ್ದ ಖಾತೆಗಳ ಮಾಹಿತಿ, ತಾವು ಹಣ ಹಾಕಿದ ಖಾತೆಗಳ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಪೊಲೀಸರಿಗೆ ದೂರು ನೀಡುತ್ತಿದ್ದಂತೆ ರಜತ್​ರ ಫೋಟೊಗಳನ್ನು ಡಿಲೀಟ್ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ