ಕ್ಯಾಬಿನ್ ಕ್ರ್ಯೂ ಆಗಿದ್ದ ಧ್ರುವಂತ್; ವಿಮಾನದಲ್ಲಿ ನಿತ್ಯಾನಂದ ಭೇಟಿ ಆದಾಗ ಕೇಳಿದ್ದೇನು?
ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿ ಧ್ರುವಂತ್ ಟಾಪ್ 7 ತಲುಪಿದರೂ ಫಿನಾಲೆಗೂ ಮೊದಲು ಎಲಿಮಿನೇಟ್ ಆಗಿದ್ದರು. ಅವರ ಹಳೆಯ ಸಂದರ್ಶನವೊಂದು ಈಗ ವೈರಲ್ ಆಗಿದ್ದು, ಅದರಲ್ಲಿ ಅವರು ನಿತ್ಯಾನಂದ ಜೊತೆ ಪ್ರಯಾಣಿಸಿದ್ದನ್ನು ಬಹಿರಂಗಪಡಿಸಿದ್ದಾರೆ. ವಿಮಾನ ಸಿಬ್ಬಂದಿಯಾಗಿ ನಾಲ್ಕೂವರೆ ವರ್ಷ ಕೆಲಸ ಮಾಡಿದ್ದ ಧ್ರುವಂತ್, ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ಹಲವು ಗಣ್ಯರ ಜೊತೆ ಪ್ರಯಾಣಿಸಿರುವುದನ್ನು ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಧ್ರುವಂತ್ (Dhruvanth) ಅವರು ಸಾಕಷ್ಟು ಗಮನ ಸೆಳೆದರು. ಅವರು ಫಿನಾಲೆ ತಲುಪುವುದಕ್ಕೂ ಮೊದಲು ಎಲಿಮಿನೇಟ್ ಆದರು. ಟಾಪ್ 7ರಲ್ಲಿ ಧ್ರುವಂತ್ಗೆ ಸ್ಥಾನ ಸಿಕ್ಕಿತ್ತು. ಧ್ರುವಂತ್ ಅವರ ಹಳೆಯ ಸಂದರ್ಶನ ಒಂದು ವೈರಲ್ ಆಗಿದೆ. ಈ ಸಂದರ್ಶನದಲ್ಲಿ ಅವರು ನಿತ್ಯಾನಂದ ಜೊತೆ ಪ್ರಯಾಣ ಮಾಡಿದ್ದಾಗಿ ಹೇಳಿಕೊಂಡಿದ್ದರು. ಇದಕ್ಕೆ ಕಾರಣವನ್ನು ಅವರು ವಿವರಿಸಿದ್ದಾರೆ.
ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್ಗೆ ಧ್ರುವಂತ್ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಅವರು ತಾವು ಜೆಟ್ ಏರ್ವೇಸ್ ಕ್ರ್ಯೂ ಆಗಿದ್ದಾಗಿನ ಅನುಭವ ಹಂಚಿಕೊಂಡಿದ್ದರು. ಹಲವು ದೇಶಗಳಿಗೆ ಪ್ರಯಾಣ ಮಾಡಿದ್ದರು ಧ್ರುವಂತ್. ಈ ವೇಳೆ ಧ್ರುವಂತ್ ಅವರಿಗೆ ನಿತ್ಯಾನಂದ ಸಿಕ್ಕಿದ್ದರಂತೆ.
‘ನಾನು ಯಾವಾಗಲೂ ಫೇಸ್ ಆಫ್ ದಿ ಕ್ಯಾಬಿನ್ ಆಗಿರುತ್ತಿದ್ದೆ. ನಾನು ಪ್ರಯಾಣ ಮಾಡುವಾಗ ಎಪಿಜೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿದ್ದೆ. ನಾನು ನಾಲ್ಕೂವರೆ ವರ್ಷ ಆ ಕ್ಷೇತ್ರದಲ್ಲಿ ಇದ್ದೆ. ಎಪಿಜೆ ಅಬ್ದುಲ್ ಕಲಾಂ, ರಾ ಏಜೆಂಟ್ಸ್ ಮೊದಲಾದವರು ಜೊತೆ ಪ್ರಯಾಣ ಮಾಡಿದ್ದೆ’ ಎಂದು ಧ್ರುವಂತ್ ಹೇಳಿದ್ದಾರೆ.
ಇದನ್ನೂ ಓದಿ: ‘ನಾನು ಕಪ್ ಗೆಲ್ಲದಿರಬಹುದು, ಶೋ ಗೆದ್ದಿದ್ದೇನೆ’; ಸೀಸನ್ ಚಪ್ಪಾಳೆ ಬದಲಿಸಿದ ಬಗ್ಗೆ ಧ್ರುವಂತ್ ಮಾತು
‘ನಾನು ನಿತ್ಯಾನಂದ ಅವರ ಜೊತೆ ಪ್ರಯಾಣ ಮಾಡಿದ್ದೇನೆ. ದೆಹಲಿಯಿಂದ, ಕೊಚ್ಚಿಗೆ ಅವರು ಪ್ರಯಾಣ ಮಾಡುತ್ತಿದ್ದರು. ಬೆಳ್ಳುಳ್ಳಿ ಬೇಡ, ಈರುಳ್ಳಿ ಬೇಡ, ಅದು ಬೇಡ ಇದು ಬೇಡ ಎನ್ನುತ್ತಿದ್ದರು. ಬ್ರೆಡ್ ಇದೆ ಕೊಡಲ ಎಂದು ಕೇಳಿದೆ. ಅವರ ಸಹಾಯಕರು ಫುಡ್ ತಂದಿದ್ದರು. ಅದನ್ನೇ ಕೊಟ್ಟರು’ ಎಂದಿದ್ದಾರೆ ಧ್ರುವಂತ್. ಧ್ರುವಂತ್ ಅವರು ನಾಲ್ಕೂವರೆ ವರ್ಷಗಳ ಕಾಲ ವಿಮಾನ ಕ್ಷೇತ್ರದಲ್ಲಿ ಇದ್ದರು. ಈ ವಿಷಯ ಅನೇಕರಿಗೆ ತಿಳಿದೇ ಇಲ್ಲ. ಬಿಗ್ ಬಾಸ್ ಮನೆಯಲ್ಲೂ ಈ ವಿಷಯ ಪ್ರಸ್ತಾಪ ಆಗಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




