‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಬರೋಬ್ಬರಿ 5 ಕೋಟಿ ವೋಟ್ ಪಡೆದು ಹನುಮಂತ ಅವರು ಗೆದ್ದು ಬೀಗಿದ್ದಾರೆ. ಈ ಮೂಲಕ ಕರ್ನಾಟಕ ಜನರ ಫೇವರಿಟ್ ಎನಿಸಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗೆದ್ದ ಮೊದಲ ಸ್ಪರ್ಧಿ ಹನುಮಂತ ಆಗಿದ್ದಾರೆ. ಈ ಮೂಲಕ ಅವರು ದಾಖಲೆ ಬರೆದಿದ್ದಾರೆ. ಅವರಿಂದ ಇತಿಹಾಸವೇ ಸೃಷ್ಟಿ ಆಗಿದೆ.
ಈ ಬಾರಿಯ ಬಿಗ್ ಬಾಸ್ನಲ್ಲಿ ಒಟ್ಟೂ 20 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಅವರಲ್ಲಿ 19 ಜನರನ್ನು ಹಿಂದಿಕ್ಕಿ ಹನುಮಂತ ಅವರು ಕಪ್ನ ಒಲಿಸಿಕೊಂಡಿದ್ದಾರೆ. ಜವಾರಿ ಹುಡುಗನಾಗಿ, ಜವಾರಿ ಹಾಡುಗಳನ್ನು ಹಾಡುತ್ತಾ ಗಮನ ಸೆಳೆದರು. ಯಾರೇ ನಾಮಿನೇಟ್ ಮಾಡಲಿ, ಯಾರು ಏನೇ ಕಾರಣ ಕೊಡಲಿ, ಅವರನ್ನು ಕಳಪೆಗೆ ಹಾಕಲಿ ಇದಕ್ಕೆಲ್ಲ ಅವರು ತಲೆಕೆಡಿಸಿಕೊಳ್ಳದೆ ಆಡಿದರು. ಅದಕ್ಕೆ ಕೊನೆಗೂ ಜಯ ಸಿಕ್ಕಂತೆ ಆಗಿದೆ. ‘ಒಳ್ಳೆಯತನಕ್ಕೆ ಜಯ ಇದೆ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ.
ಹನುಮಂತನ ಪರವಾಗಿ ಅನಕೇರು ವೋಟ್ ಮಾಡುವಂತೆ ಕೋರಿದ್ದರು. ಉತ್ತರ ಕರ್ನಾಟಕ ಮಂದಿ ಹನುಮಂತಗೆ ಭರ್ಜರಿ ವೋಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಉತ್ತರ ಕರ್ನಾಟಕ ಮಂದಿ ಮಾತ್ರ ಅಲ್ಲದೆ, ಎಲ್ಲಾ ಭಾಗದ ಜನರಿಗೂ ಅವರು ಇಷ್ಟ ಆಗಿದ್ದರು. ಈ ಕಾರಣಕ್ಕೆ ಅವರಿಗೆ 5 ಕೋಟಿ ವೋಟ್ ಬಿದ್ದಿದೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಜನರಿಗೆ ಇಷ್ಟವಾದ ಹನುಮಂತಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.
ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಹನುಮಂತ; ಮೊದಲೇ ಸೋರಿಕೆ ಆಯ್ತು ಮಾಹಿತಿ
ಹನುಮಂತ ಅವರು ಸಾಕಷ್ಟು ಕಷ್ಟವನ್ನು ನೋಡಿದವರು. ಅವರು ಕೆಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ರೀತಿ ವಿನ್ ಆಗಿದ್ದು ಎಲ್ಲಿಯೂ ಇಲ್ಲ. ಕೇವಲ ಲುಂಗಿ-ಶರ್ಟ್ನಲ್ಲಿ ಕಾಣಿಸಿಕೊಳ್ಳುತ್ತಾ, ಬಿಗ್ ಬಾಸ್ನಲ್ಲಿ ಸಿಂಪಲ್ ಆಗಿದ್ದ ಅವರು ವಿನ್ ಆಗಿಯೇ ಬಿಟ್ಟರು.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಕಪ್ ಎತ್ತಿದ್ದು ಇವರೇ? ಮೊದಲೇ ಶುರುವಾಗಿದೆ ಸಂಭ್ರಮ
ಹನುಮಂತ ಅವರ ಬುದ್ಧಿವಂತಿಕೆಯನ್ನು ಸುದೀಪ್ ಅವರು ಮೊದಲಿಂದ ಹೊಗಳುತ್ತಾ ಬರುತ್ತಿದ್ದರು. ಹನುಮಂತ ಅವರು ಉತ್ತಮವಾಗಿ ಆಡುತ್ತಿದ್ದಾರೆ ಎಂದು ಅನೇಕ ಬಾರಿ ಹೇಳಿದ್ದಾರೆ. ಅವರು ಯಾವುದೇ ತಾರತಮ್ಯ ಮಾಡದೆ ತೆಗೆದುಕೊಳ್ಳುತ್ತಿದ್ದ ನಿರ್ಧಾರಕ್ಕೆ ಸುದೀಪ್ ಮೆಚ್ಚುಗೆ ಸೂಚಿಸಿದ್ದರು. ಈಗ ಅವರಿಗೆ ಜಯ ಸಿಕ್ಕಿದೆ. ಹನುಮಂತನ ಅಭಿಮಾನಿಗಳು ದೊಡ್ಮನೆ ಹೊರಗೆ ಸಂಭ್ರಮಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.