ಈ ವಾರ ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿದ್ದು ಯಾರು? ಕಾದಿದೆ ದೊಡ್ಡ ಟ್ವಿಸ್ಟ್

ಬಿಗ್ ಬಾಸ್ ಕನ್ನಡ ಸೀಸನ್ 12ರ ಈ ವಾರದ ಎಲಿಮಿನೇಷನ್‌ನಲ್ಲಿ ಅಚ್ಚರಿಯ ಟ್ವಿಸ್ಟ್ ಕಾದಿದೆ. ಒಂದೇ ವಾರ ಇಬ್ಬರು ಹೊರ ಹೋಗಿದ್ದರಿಂದ ಹಾಗೂ ಸ್ಪರ್ಧಿಗಳ ಮನಸ್ಸು ಚದುರಿದ್ದರಿಂದ ಈ ವಾರ ಎಲಿಮಿನೇಷನ್ ಅಲ್ಲಿ ಟ್ವಿಸ್ಟ್ ಇದೆ. ಇಂದು (ಅಕ್ಟೋಬರ್ 12) ರಾತ್ರಿ ಸಂಪೂರ್ಣ ಮಾಹಿತಿ ಸಿಗಲಿದೆ.

ಈ ವಾರ ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿದ್ದು ಯಾರು? ಕಾದಿದೆ ದೊಡ್ಡ ಟ್ವಿಸ್ಟ್
ಬಿಗ್ ಬಾಸ್ ನಾಮಿನೇಷನ್

Updated on: Oct 12, 2025 | 8:37 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12)  ಈಗಾಗಲೇ ಒಂದೇ ವಾರ ಇಬ್ಬರು ಎಲಿಮಿನೇಟ್ ಆಗಿದ್ದಾರೆ. ಮೂರನೇ ವಾರಕ್ಕೆ ದೊಡ್ಡ ಫಿನಾಲೆ ನಡೆಯಲಿದ್ದು, ಆಗ ಎಷ್ಟು ಜನರು ಎಲಿಮಿನೇಟ್ ಆಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈ ಮಧ್ಯೆ ಬಿಗ್ ಬಾಸ್​​ನಲ್ಲಿ ಒಂದು ದೊಡ್ಡ ಟ್ವಿಸ್ಟ್ ಕಾದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹರಿದಾಡಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಊಹಿಸದೇ ಇರುವ ಘಟನೆಗಳು ನಡೆಯುತ್ತವೆ ಎಂಬ ಸೂಚನೆಯನ್ನು ಬಿಗ್ ಬಾಸ್ ಹಾಗೂ ಸುದೀಪ್ ನೀಡಿದ್ದರು. ಅದೇ ರೀತಿಯಲ್ಲಿ ಗೇಮ್​ನ ಸಿದ್ಧಪಡಿಸಲಾಗುತ್ತಿದೆ. ಸಾಕಷ್ಟು ಟ್ವಿಸ್ಟ್​ಗಳನ್ನು ನೀಡಲಾಗುತ್ತಿದೆ. ಅದೇ ರೀತಿ ಈ ವಾರದ ಎಲಿಮಿನೇಷನ್​ನಲ್ಲೂ ಸರ್​ಪ್ರೈಸ್ ಇಡಲಾಗಿದೆ ಎನ್ನಲಾಗುತ್ತಿದೆ.

ಮಂಜು ಭಾಷಿಣಿ-ರಿಷಿಕಾ, ಮಾಳು-ಸ್ಪಂದನಾ ಸೋಮಣ್ಣ, ಅಭಿ-ಅಶ್ವಿನಿ ಜಂಟಿಗಳಲ್ಲಿ ನಾಮಿನೇಟ್ ಆಗಿದ್ದಾರೆ. ಜಾನ್ವಿ, ರಕ್ಷಿತಾ ಶೆಟ್ಟಿ, ಧನು, ಅಶ್ವಿನಿ ಗೌಡ ಒಂಟಿಗಳಲ್ಲಿ ನಾಮಿನೇಟ್ ಆಗಿದ್ದಾರೆ. ಹಾಗೆ ನೋಡೋದಾದರೆ ಎಲ್ಲರೂ ಸ್ಟ್ರಾಂಗ್ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ. ಈ ವಾರ ಯಾರು ಹೊರ ಹೋಗುತ್ತಾರೆ ಎನ್ನುವ ಕುತೂಹಲ ಇತ್ತು. ಆದರೆ, ಈ ವಾರ ಬಿಗ್ ಬಾಸ್ ಮನೆಯಲ್ಲಿ ನೋ ಎಲಿಮಿನೇಷನ್ ವೀಕ್ ಮಾಡಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ
ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ ಅಮಿತಾಭ್ ಬಚ್ಚನ್; ಇಲ್ಲಿದೆ ವಿವರ
ಒಂದಲ್ಲ, ಎರಡಲ್ಲ ಆರು ಗಂಟೆ ಸ್ನಾನ ಮಾಡಿದ ಸತೀಶ್; ಒಡೆಯಿತು ತಾಳ್ಮೆಯ ಕಟ್ಟೆ
‘ಕಾಂತಾರ: ಚಾಪ್ಟರ್ 1’; ಕರ್ನಾಟಕದ ಗಳಿಕೆ ಹಿಂದಿಕ್ಕಿದ ಉತ್ತರದ ಮಂದಿ
‘ಅಮೃತಧಾರೆ’ ಧಾರಾವಾಹಿಯಲ್ಲಿ ರೋಚಕ ತಿರುವು; ಮಗಳು ಗೌತಮ್​ಗೆ ಸಿಕ್ಕೇ ಬಿಟ್ಳು

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮೊದಲವಾರವೇ ಇಬ್ಬರು ಎಲಿಮಿನೇಟ್ ಆಗಿರುವುದರಿಂದ ಈ ವಾರ ಯಾರನ್ನೂ ಹೊರಕ್ಕೆ ಕಳುಹಿಸುತ್ತಿಲ್ಲ ಎನ್ನಲಾಗಿದೆ. ಅಲ್ಲದೆ, ಎಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಒಂದು ದಿನ ಹೊರ ಹೋಗಿ ಬರಬೇಕಾಯಿತು. ಈ ವೇಳೆ ಸ್ಪರ್ಧಿಗಳ ಮನಸ್ಸು ಚದುರಿತ್ತು. ಆ ಸಮಯದಲ್ಲಿ ಎಲ್ಲಾ ಸ್ಪರ್ಧಿಗಳಿಗೆ ತಮ್ಮ ಸಾಮರ್ಥ್ಯ ತೋರಿಸಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಎಲಿಮಿನೇಷನ್ ಇಡುತ್ತಿಲ್ಲ ಎಂದು ವರದಿ ಆಗಿದೆ.

ಇದನ್ನೂ ಓದಿ: ಟಿಆರ್​ಪಿಯಲ್ಲಿ ಮತ್ತೆ ದಾಖಲೆ ಬರೆದ ಬಿಗ್ ಬಾಸ್; ಸಿಕ್ತು ಡಬಲ್ ಡಿಜಿಟ್ ನಂಬರ್

ಇಂದು (ಅಕ್ಟೋಬರ್ 12) ರಾತ್ರಿ ಎಪಿಸೋಡ್ ಪ್ರಸಾರ ಕಾಣಲಿದೆ. ಈ ಎಪಿಸೋಡ್​ನಲ್ಲಿ ಎಲಿಮಿನೇಷನ್ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಒಂದೊಮ್ಮೆ ಇಂದು ಎಲಿಮಿನೇಷನ್ ನಡೆಯದೇ ಇದ್ದರೆ ಮುಂದಿನ ವಾರ ನಡೆಯುವ ಫೈನಲ್​ಗೆ 17 ಸ್ಪರ್ಧಿಗಳು ಎಂಟ್ರಿ ಕೊಟ್ಟಂತೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:01 am, Sun, 12 October 25