ಬಿಗ್ ಬಾಸ್ ಫಿನಾಲೆ: ಅಶ್ವಿನಿ ಗೌಡ ಪರವಾಗಿ ಸುದೀಪ್ ಮನೆಗೆ ಕರವೇ ನಾರಾಯಣ ಗೌಡ ಹೋಗಿದ್ದು ನಿಜವೇ?

ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಫಿನಾಲೆ ತಲುಪಿದ್ದಾರೆ. ಇದೇ ಸಂದರ್ಭದಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಸುದೀಪ್ ಅವರನ್ನು ಭೇಟಿ ಮಾಡಿದ ಫೋಟೋ ವೈರಲ್ ಆಗಿದೆ. ಈ ಭೇಟಿಯ ಉದ್ದೇಶ ಏನು ಎಂಬುದನ್ನು ಕರವೇ ಧರ್ಮಣ್ಣ ಅವರು ವಿವರಿಸಿದ್ದಾರೆ. ಟಿವಿ9 ಜೊತೆ ಅವರು ಮಾತಾಡಿದ್ದಾರೆ.

ಬಿಗ್ ಬಾಸ್ ಫಿನಾಲೆ: ಅಶ್ವಿನಿ ಗೌಡ ಪರವಾಗಿ ಸುದೀಪ್ ಮನೆಗೆ ಕರವೇ ನಾರಾಯಣ ಗೌಡ ಹೋಗಿದ್ದು ನಿಜವೇ?
Viral Photo, Ashwini Gowda
Edited By:

Updated on: Jan 14, 2026 | 7:25 PM

ಈಗ ಎಲ್ಲೆಲ್ಲೂ ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಯಾರು ವಿನ್ ಆಗುತ್ತಾರೆ ಎಂಬ ಕೌತುಕ ಹೆಚ್ಚಾಗಿದೆ. ಗಿಲ್ಲಿ ನಟ (Gilli Nata), ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ಧನುಷ್, ಧ್ರುವಂತ್, ಮ್ಯೂಟೆಂಟ್ ರಘು ಅವರು ಫಿನಾಲೆ ವಾರದ ತನಕ ಸಾಗಿಬಂದಿದ್ದಾರೆ. ಫಿನಾಲೆ ಹತ್ತಿರ ಆಗುತ್ತಿದ್ದಂತೆಯೇ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರ ಫೋಟೋ ವೈರಲ್ ಆಗಿದೆ. ಕಿಚ್ಚ ಸುದೀಪ್ ಮನೆಗೆ ನಾರಾಯಣ ಗೌಡ ಅವರು ಹೋಗಿರುವುದು ಈ ಫೋಟೋದಲ್ಲಿ ಕಾಣಿಸಿದೆ. ಅಶ್ವಿನಿ ಗೌಡ (Ashwini Gowda) ಅವರ ಪರವಾಗಿ ಮಾತಾಡಲು ನಾರಾಯಣ ಗೌಡ ಹೋಗಿದ್ದರು ಎಂದು ಕೆಲವರು ಸುದ್ದಿ ಹಬ್ಬಿಸುತ್ತಿದ್ದಾರೆ. ಆ ಬಗ್ಗೆ ಕರವೇ ಧರ್ಮಣ್ಣ ಅವರು ಸ್ಪಷನೆ ನೀಡಿದ್ದಾರೆ.

ಅಂದಹಾಗೆ, ಈ ಭೇಟಿಗೂ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಸಂಬಂಧ ಇಲ್ಲ. ನಾರಾಯಣ ಗೌಡ ಅವರು ತಮ್ಮ ಮಗನ ಮದುವೆಗೆ ಆಹ್ವಾನ ನೀಡಲು ಸುದೀಪ್ ಮನೆಗೆ ಹೋಗಿದ್ದಾಗ ತೆಗೆದ ಫೋಟೋ ಇದು. ಈ ಫೋಟೋವನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆ ಬಗ್ಗೆ ಕರವೇ ಧರ್ಮಣ್ಣ ಅವರು ಟಿವಿ9 ಜೊತೆ ಮಾತನಾಡಿದ್ದಾರೆ.

‘ನಾರಾಯಣ ಗೌಡ ಅವರು ಮಗನ ಮದುವೆ ಪತ್ರಿಕೆಯನ್ನು ಕೊಡುತ್ತಿರುವುದನ್ನು ತಿಂಗಳ ಹಿಂದೆಯೇ ರಾಜ್ಯದ ಜನರು ನೋಡಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಹಾಗೂ ಕಲಾವಿದರಿಗೆ ನಾರಾಯಣ ಗೌಡ ಅವರು ಮದುವೆ ಪತ್ರಿಕೆ ನೀಡುತ್ತಿದ್ದಾರೆ. ಹಾಗಾಗಿ ಸುದೀಪ್ ಅವರು ನಿನ್ನೆ ಬರಲು ಹೇಳಿದ್ದರು. ಅವರನ್ನು ಭೇಟಿ ಮಾಡಿ ಮದುವೆ ಆಹ್ವಾನ ಪತ್ರಿಕೆ ನೀಡಲಾಗಿದೆ’ ಎಂದು ಧರ್ಮಣ್ಣ ಅವರು ಹೇಳಿದ್ದಾರೆ.

‘ಬೇರೆಯವರ ರೀತಿಯೇ ಸುದೀಪ್ ಅವರಿಗೆ ಮದುವೆ ಪತ್ರಿಕೆ ನೀಡಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗಿದೆ. ಅದನ್ನು ಕೆಲವು ಟ್ರೋಲ್ ಪೇಜ್​​ಗಳು ತೆಗೆದುಕೊಂಡು ಈ ರೀತಿ ಮಾಡುತ್ತಿದ್ದಾರೆ. ನಾರಾಯಣ ಗೌಡ್ರು ಹಾಗೂ ಸುದೀಪ್ ಅವರ ವಿರೋಧಿಗಳು ಈ ರೀತಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವುದಕ್ಕೆ ನಾಚಿಕೆ ಆಗಬೇಕು’ ಎಂದು ಧರ್ಮಣ್ಣ ಹೇಳಿದ್ದಾರೆ.

ಇದನ್ನೂ ಓದಿ: ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದುಗಳು ನೋಡಿ..

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರ ಆಟ ಎಲ್ಲರಿಗೂ ಮೆಚ್ಚುಗೆ ಆಗಿದೆ. ಹಾಗಾಗಿ ಅವರೇ ಗೆಲ್ಲಬಹುದು ಎಂಬ ಅಭಿಪ್ರಾಯ ಎಲ್ಲರಿಗೂ ಇದೆ. ಜನವರಿ 17 ಮತ್ತು 18ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ಸ್ಪರ್ಧಿಗಳ ಪರವಾಗಿ ಭರ್ಜರಿ ಪ್​ರಚಾರ ಮಾಡಲಾಗುತ್ತಿದೆ. ಗಿಲ್ಲಿ ಹವಾ ಸಿಕ್ಕಾಪಟ್ಟೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.