AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಟ್ಟ ಮಾತಂತೆ ಸ್ಪರ್ಧಿಗಳಿಗೆ ಭರ್ಜರಿ ಊಟ ಕಳಿಸಿದ ಕಿಚ್ಚ, ಆದರೆ…

Bigg Boss Kannada 12: ಪ್ರತಿ ಸೀಸನ್​​ನಲ್ಲಿಯೂ ಸುದೀಪ್ ಅವರು ಬಿಗ್​​ಬಾಸ್ ಸದಸ್ಯರಿಗಾಗಿ ಅಡುಗೆ ಮಾಡುತ್ತಾ ಬಂದಿದ್ದಾರೆ. ಕಳೆದ ವೀಕೆಂಡ್ ಎಪಿಸೋಡ್​​ನಲ್ಲಿ ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಾ, ಈ ವಾರ ನನ್ನ ಕಡೆಯಿಂದ ನಿಮಗೆಲ್ಲ ಒಂದು ಒಳ್ಳೆಯ ಭೋಜನ ವ್ಯವಸ್ಥೆ ಇರಲಿದೆ ಎಂದಿದ್ದರು. ಸಹಜವಾಗಿಯೇ ಸ್ಪರ್ಧಿಗಳೆಲ್ಲ ಬಹಳ ಖುಷಿ ಪಟ್ಟಿದ್ದರು. ಅದರಂತೆ ಬುಧವಾರದ ಎಪಿಸೋಡ್​​ನಲ್ಲಿ ಸುದೀಪ್ ಅವರು ಮನೆ ಮಂದಿಗೆಲ್ಲ ಭಾರಿ ಭೋಜನ ಕಳಿಸಿಕೊಟ್ಟಿದ್ದಾರೆ.

ಕೊಟ್ಟ ಮಾತಂತೆ ಸ್ಪರ್ಧಿಗಳಿಗೆ ಭರ್ಜರಿ ಊಟ ಕಳಿಸಿದ ಕಿಚ್ಚ, ಆದರೆ...
Kichcha Sudeep
ಮಂಜುನಾಥ ಸಿ.
|

Updated on: Jan 15, 2026 | 8:00 AM

Share

ಕಿಚ್ಚ ಸುದೀಪ್ (Kichcha Sudeep) ವಾರಾಂತ್ಯದಲ್ಲಿ ಸ್ಪರ್ಧಿಗಳ ತಪ್ಪು ತಿದ್ದುವುದು, ತಪ್ಪು ಮಾಡಿದವರಿಗೆ ಕ್ಲಾಸ್ ತೆಗೆದುಕೊಳ್ಳುವುದು ಮಾತ್ರವಲ್ಲ ಅವರ ಬಗ್ಗೆ ಸಾಕಷ್ಟು ಪ್ರೀತಿ ಮತ್ತು ಕಾಳಜಿಯನ್ನು ಸಹ ಹೊಂದಿದ್ದಾರೆ. ಇದಕ್ಕೆ ಸಾಕ್ಷಿ ಪ್ರತಿ ಬಾರಿ ಅವರು ಖುದ್ದು ಅಡುಗೆ ಮಾಡಿ ಅದನ್ನು ಬಿಗ್​​ಬಾಸ್ ಸ್ಪರ್ಧಿಗಳಿಗೆ ಕಳಿಸಿಕೊಡುತ್ತಾರೆ. ಅದೂ ಸ್ಪರ್ಧಿಗಳ ಇಷ್ಟದ ತಿನಿಸುಗಳನ್ನು ಮೊದಲೇ ತಿಳಿದುಕೊಂಡು ಅವರ ಇಷ್ಟಕ್ಕೆ ಅನುಗುಣವಾಗಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಡುಗೆಗಳನ್ನು ಮಾಡಿ ಕಿಚ್ಚ ಕಳಿಸುತ್ತಾರೆ. ಈ ಬಾರಿ ಸಹ ಸುದೀಪ್ ಅವರು ಮನೆಯ ಸದಸ್ಯರಿಗಾಗಿ ಅಡುಗೆ ಕಳಿಸಿದ್ದಾರೆ, ಆದರೆ….

ಪ್ರತಿ ಸೀಸನ್​​ನಲ್ಲಿಯೂ ಸುದೀಪ್ ಅವರು ಬಿಗ್​​ಬಾಸ್ ಸದಸ್ಯರಿಗಾಗಿ ಅಡುಗೆ ಮಾಡುತ್ತಾ ಬಂದಿದ್ದಾರೆ. ಕಳೆದ ವೀಕೆಂಡ್ ಎಪಿಸೋಡ್​​ನಲ್ಲಿ ಸ್ಪರ್ಧಿಗಳೊಟ್ಟಿಗೆ ಮಾತನಾಡುತ್ತಾ, ಈ ವಾರ ನನ್ನ ಕಡೆಯಿಂದ ನಿಮಗೆಲ್ಲ ಒಂದು ಒಳ್ಳೆಯ ಭೋಜನ ವ್ಯವಸ್ಥೆ ಇರಲಿದೆ ಎಂದಿದ್ದರು. ಸಹಜವಾಗಿಯೇ ಸ್ಪರ್ಧಿಗಳೆಲ್ಲ ಬಹಳ ಖುಷಿ ಪಟ್ಟಿದ್ದರು. ಅದರಂತೆ ಬುಧವಾರದ ಎಪಿಸೋಡ್​​ನಲ್ಲಿ ಸುದೀಪ್ ಅವರು ಮನೆ ಮಂದಿಗೆಲ್ಲ ಭಾರಿ ಭೋಜನ ಕಳಿಸಿಕೊಟ್ಟಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಗಿಲ್ಲಿಗೆ ಹೊಡೆಯಲು ಯತ್ನಿಸಿದ್ದ ಡಾಗ್ ಸತೀಶ್?

ಬಿಗ್​​ಬಾಸ್ ಮನೆಯ ಅಂಗಳದಲ್ಲಿ ಡೈನಿಂಗ್ ಟೇಬಲ್ ಸೆಟಪ್ ಹಾಕಿ, ‘ಸುದೀಪ್ ಕಡೆಯಿಂದ’ ಎಂಬ ಪೋಸ್ಟರ್ ಹಾಕಲಾಗಿತ್ತು. ಅಲ್ಲಿ ಪ್ರತಿಯೊಬ್ಬರಿಗೂ ಭಿನ್ನ-ಭಿನ್ನ ರೀತಿಯ ಭಕ್ಷ್ಯ ಭೋಜನಗಳನ್ನು ಇರಿಸಲಾಗಿತ್ತು. ಗಿಲ್ಲಿಗೆ ಬಿರಿಯಾನಿ ವಿತ್ ನಲ್ಲಿ ಮೂಳೆ, ರಕ್ಷಿತಾಗೆ ಅವರ ಇಷ್ಟದ ತಿನಿಸು, ಸಸ್ಯಹಾರ ಮಾತ್ರವೇ ಇಷ್ಟ ಪಡುವವರಿಗೆ ಸಸ್ಯಹಾರ, ಕೊನೆಗೆ ಐಸ್​​ಕ್ರೀಂ ಎಲ್ಲವೂ ಇತ್ತು. ಸ್ಪರ್ಧಿಗಳು ಸಹ ಬಹಳ ಇಷ್ಟಪಟ್ಟು ಭೋಜನ ಸವಿದರು. ಅದರ ಬಳಿಕ ಸುದೀಪ್ ಅವರು ಎಲ್ಲರಿಗೂ ವಿಶೇಷ ಸಂದೇಶವನ್ನು ಸಹ ನೀಡಿದರು. ಪ್ರತಿಯೊಬ್ಬರಿಗೆ ಸುದೀಪ್ ಸಹಿ ಮಾಡಿದ ವಿಶೇಷ ಕವರ್​​​ನಲ್ಲಿ ಅವರ ಬಿಗ್​​ಬಾಸ್ ಜರ್ನಿಯ ಸಂದೇಶವೊಂದು ದೊರಕಿತು.

ಆದರೆ ಸುದೀಪ್ ಅವರು ಈ ಬಾರಿ ಖುದ್ದಾಗಿ ಅಡುಗೆ ಮಾಡಿದಂತಿಲ್ಲ. ಪ್ರತಿ ಬಾರಿ ಸುದೀಪ್ ಅವರೇ ಖುದ್ದಾಗಿ ಅಡುಗೆ ಮಾಡಿ ಅದನ್ನು ಸ್ಪರ್ಧಿಗಳಿಗೆ ತಲುಪಿಸುತ್ತಾರೆ. ಸುದೀಪ್ ಅಡುಗೆ ಮಾಡುವ ವಿಡಿಯೋವನ್ನು ಸಹ ಬಿಗ್​​ಬಾಸ್ ಶೋನಲ್ಲಿ ತೋರಿಸಲಾಗುತ್ತದೆ. ಆದರೆ ಈ ಬಾರಿ ಅದೆಲ್ಲ ಇಲ್ಲ. ಸುದೀಪ್ ಅವರು ಊಟವನ್ನು ಕಳಿಸಿಕೊಟ್ಟಿದ್ದಾರೆ ಆದರೆ ಅವರೇ ಖುದ್ದು ಅಡುಗೆ ಮಾಡಿಲ್ಲ. ಸ್ಪರ್ಧಿಗಳು ಸಹ ಈ ಬಗ್ಗೆ ಮಾತನಾಡಿಲ್ಲ, ಬಿಗ್​​ಬಾಸ್ ಸಹ ಸುದೀಪ್ ಅವರೇ ಅಡುಗೆ ಮಾಡಿದ ಬಗ್ಗೆಯೂ ಉಲ್ಲೇಖಿಸಿಲ್ಲ. ಹಾಗಾಗಿ ಇದು ಸುದೀಪ್ ಮಾಡಿದ ಅಡುಗೆ ಅಲ್ಲ ಬದಲಿಗೆ ಸುದೀಪ್ ಅವರು ಕೊಡಿಸಿದ ಅಡುಗೆ ಎನ್ನಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ