
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಗಿಲ್ಲಿ ನಟ ಅವರು ಒಳ್ಳೆಯ ರೀತಿಯಲ್ಲಿ ಆಟ ಪ್ರದರ್ಶನ ಮಾಡುತ್ತಿದ್ದಾರೆ. ರಕ್ಷಿತಾ ಶೆಟ್ಟಿ ಹಾಗೂ ಕಾವ್ಯಾ ಶೈವ ತಂಟೆಗೆ ಯಾರಾದರೂ ಬಂದರೆ ಮುಲಾಜೇ ಇಲ್ಲದೆ ತಿರುಗೇಟು ನೀಡುತ್ತಿದ್ದಾರೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ರಕ್ಷಿತಾ ಶೆಟ್ಟಿ ತಂಟೆಗೆ ಬಂದ ರಾಶಿಕಾಗೆ ಗಿಲ್ಲಿ ನಟ ಮಣ್ಣು ಮುಕ್ಕಿಸಿದ್ದಾರೆ. ರಾಶಿಕಾ ಹಾಗೂ ಗಿಲ್ಲಿ ನಟ ಒಂದೇ ತಂಡದಲ್ಲಿ ಇದ್ದರು. ಇದನ್ನು ಗಿಲ್ಲಿ ಲೆಕ್ಕಿಸಿಲ್ಲ. ಕೊನೆಗೆ ರಾಶಿಕಾ ಅಳುತ್ತಾ ಕೂರುವಂತೆ ಆಯಿತು.
ಗಿಲ್ಲಿ ನಟ ಅವರ ಆಟದ ಪ್ರದರ್ಶನ ಅನೇಕರಿಗೆ ಖುಷಿ ಕೊಟ್ಟಿದೆ. ಅದರಲ್ಲೂ ಅಶ್ವಿನಿ ಗೌಡ, ರಾಶಿಕಾ ಮೊದಲಾದವರ ವಿರುದ್ಧ ಅವರು ಟೊಂಕ ಕಟ್ಟಿ ನಿಲ್ಲುತ್ತಾರೆ. ಈ ಕಾರಣಕ್ಕೆ ಅವರು ಹೆಚ್ಚು ಇಷ್ಟ ಆಗುತ್ತಿದ್ದಾರೆ. ಅಕ್ಟೋಬರ್ 29ರ ಎಪಿಸೋಡ್ನಲ್ಲಿ ರಾಶಿಕಾ ಅವರು ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಿದ್ದರು. ಕೈ ನೋವಿದೆ ಎಂದು ಹೇಳಿ ಅಡುಗೆ ಮಾಡುವುದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು ರಾಶಿಕಾ. ಎಲ್ಲಾ ಕೆಲಸವನ್ನು ರಕ್ಷಿತಾ ಶೆಟ್ಟಿ ಬಳಿ ಮಾಡಿಸಬೇಕು ಎಂಬುದು ಇವರ ಉದ್ದೇಶ ಆಗಿತ್ತು.
#BBK12#GilliNata vs #RashikaShetty
Sweetest revenge of the show. 💥#Gilli cooked well. #BBKSeason12 pic.twitter.com/zFfdjNVAD6
— Cinema Premi✍🏻 (@karansharmain) October 29, 2025
ರಕ್ಷಿತಾ ಶೆಟ್ಟಿ ಅವರು ಇದಕ್ಕೆಲ್ಲ ಅಂಜುವವರಲ್ಲ. ಅಶ್ವಿನಿ ಗೌಡ, ರಾಶಿಕಾ ಮೊದಲಾದವರು ಒಟ್ಟಾಗಿ ರಕ್ಷಿತಾ ಶೆಟ್ಟಿ ಮೇಲೆ ಬಿದ್ದರೂ ಅವರು ಲೆಕ್ಕಿಸಿಲ್ಲ. ಇನ್ನು ಗೇಮ್ ಆಡುವಾಗ ರಕ್ಷಿತಾ ಶೆಟ್ಟಿ ಅವರ ಮೇಲೆ ರಾಶಿಕಾ ಬಿದ್ದಿದ್ದಾರೆ. ಅವರು ಮೇಲೇಳಲೂ ಕೊಟ್ಟಿಲ್ಲ. ಬಿಡಿ ಬಿಡಿ ಎಂದು ರಕ್ಷಿತಾ ಪರಿಪರಿ ಆಗಿ ಕೇಳಿಕೊಂಡರೂ ರಾಶಿಕಾ ಇದಕ್ಕೆ ಕಿವಿಕೊಡಲಿಲ್ಲ. ಇದನ್ನು ಗಿಲ್ಲಿ ನಟ ಅವರು ಖಂಡಿಸಿದ್ದಾರೆ. ‘ನಮ್ಮದೇ ಟೀಂ ವಿರುದ್ಧ ತಿರುಗಿ ಬೀಳ್ತಾ ಇದೀಯಲ್ಲ’ ಎಂದು ಗಿಲ್ಲಿಗೆ ರಾಶಿಕಾ ಅವಾಜ್ ಹಾಕಿದ್ದಾರೆ.
ಇದನ್ನೂ ಓದಿ: Mallamma: ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರ ನಡೆದ ಮಲ್ಲಮ್ಮ?
‘ನೀನು ಹೆಣ್ಣಾಗಿದ್ದರೆ ರಕ್ಷಿತಾಗೆ ಆ ರೀತಿ ಮಾಡ್ತಾ ಇರಲಿಲ್ಲ’ ಎಂದು ಗಿಲ್ಲಿ ನಟ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ಗಿಲ್ಲಿ ಟೀಂ ಗೆದ್ದಿತ್ತು. ಎಲ್ಲರ ಸಮ್ಮತದ ಮೂಲಕ ಒಬ್ಬರನ್ನು ಕ್ಯಾಪ್ಟನ್ ಕಂಟೆಸ್ಟಂಟ್ ಆಗಿ ಆಯ್ಕೆ ಮಾಡಬೇಕಿತ್ತು. ಎಲ್ಲರೂ ರಾಶಿಕಾ ಹೆಸರನ್ನು ಸೂಚಿಸಿದರು. ಆದರೆ, ಗಿಲ್ಲಿ ನಟಗೆ ರಿವೇಂಜ್ ತೀರಿಸಿಕೊಳ್ಳಬೇಕಿತ್ತು. ಹೀಗಾಗಿ, ಆ ವೋಟ್ನ ರಾಶಿಕಾಗೆ ಹಾಕೋದಿಲ್ಲ ಎಂದರು. ಹೀಗಾಗಿ, ಬಿಗ್ ಬಾಸ್ ಈ ಅವಕಾಶವನ್ನು ಹಿಂದಕ್ಕೆ ಪಡೆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:58 am, Thu, 30 October 25