ನಾಮಿನೇಷನ್ ವಿಷಯದಲ್ಲಿ ಸ್ಪರ್ಧಿಗಳಿಗಿಲ್ಲ ಗಾಂಭೀರ್ಯತೆ; ಬೇಕಿದೆ ಕಿಚ್ಚನ ಕ್ಲಾಸ್

ಬಿಗ್ ಬಾಸ್ ಕನ್ನಡ 13ರ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳ ಗಂಭೀರತೆಯ ಕೊರತೆ ಎದ್ದು ಕಾಣುತ್ತಿದೆ. ಅರ್ಹರ ಬದಲಿಗೆ ವೈಯಕ್ತಿಕ ದ್ವೇಷಕ್ಕಾಗಿ ಪರಸ್ಪರ ನಾಮಿನೇಟ್ ಮಾಡಿಕೊಳ್ಳುತ್ತಿದ್ದು, ಗೇಮ್‌ನ ಉದ್ದೇಶವೇ ಹಾದಿ ತಪ್ಪಿದೆ. ಈ ಗೊಂದಲದ ನಾಮಿನೇಷನ್ ವೈಖರಿಗೆ ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಸೂಕ್ತ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆಯಿದೆ.

ನಾಮಿನೇಷನ್ ವಿಷಯದಲ್ಲಿ ಸ್ಪರ್ಧಿಗಳಿಗಿಲ್ಲ ಗಾಂಭೀರ್ಯತೆ; ಬೇಕಿದೆ ಕಿಚ್ಚನ ಕ್ಲಾಸ್
ಬಿಗ್ ಬಾಸ್

Updated on: Sep 17, 2026 | 7:38 AM

ಮುಖ್ಯಾಂಶಗಳು

  • ಹಾದಿ ತಪ್ಪಿದ ನಾಮಿನೇಷನ್
  • ಅಸಮರ್ಥರ ಬದಲು ದ್ವೇಷ ಸಾಧನೆಯೇ ಟಾರ್ಗೆಟ್
  • ರಿವೇಂಜ್ ನಾಮಿನೇಷನ್ ಆಟ

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಸ್ಪರ್ಧಿಗಳಿಗೆ ನಾಮಿನೇಷನ್ ಎಂದರೆ ಏನು? ಅದು ಯಾವ ರೀತಿಯಲ್ಲಿ ನಡೆಯಬೇಕು ಎನ್ನುವ ಬಗ್ಗೆ ಒಂಚೂರು ಗಾಂಭೀರ್ಯತೆ ಇದ್ದಂತೆ ಇಲ್ಲ. ಎಲ್ಲಾ ಸ್ಪರ್ಧಿಗಳು ಇದನ್ನು ಹಗುರವಾಗಿಯೇ ಪರಿಗಣಿಸಿರುವುದು ಸ್ಪಷ್ಟವಾಗುತ್ತದೆ. ನಾಮಿನೇಷನ್ ವೇಳೆ ಎಲ್ಲಾ ಸ್ಪರ್ಧಿಗಳು ನಗುತ್ತಾ, ತಮ್ಮನ್ನು ನಾಮಿನೇಟ್ ಮಾಡಿದವರನ್ನು ಪ್ರತಿಯಾಗಿ ನಾಮಿನೇಟ್ ಮಾಡುತ್ತಾ ಸಮಯ ಕಳೆದಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ.

ಬಿಗ್ ಬಾಸ್​​ ಎರಡನೇ ವಾರಕ್ಕೆ ಕಾಲಿಟ್ಟಿದ್ದು ನಾಮಿನೇಷನ್ ಪ್ರಕ್ರಿಯೆ ನಡೆಸಲಾಗಿದೆ. ದೊಡ್ಮನೆಯಲ್ಲಿ ಎಲ್ಲರ ಮಧ್ಯೆ ತಂದಿಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ಬಹುತೇಕರು ಅವಿನಾಶ್​ಗೆ ವೋಟ್ ಮಾಡಿದರು. ಈ ರೀತಿ ವೋಟ್ ಮಾಡಿದ್ದಕ್ಕೆ ಒಂದು ಅರ್ಥ ಇತ್ತು ಎಂದು ಒಪ್ಪಿಕೊಳ್ಳೋಣ. ಆದರೆ, ಬಹುತೇಕರು ನಾಮಿನೇಟ್ ಮಾಡಿದವರನ್ನೇ ನಾಮಿನೇಟ್ ಮಾಡಿ ದ್ವೇಷ ತೀರಿಸಿಕೊಂಡಿದ್ದಾರೆ.

ಯಶಸ್ ಅವರು ದೊಡ್ಮನೆಯಲ್ಲಿ ಕಾಣಿಸಿಕೊಳ್ಳುತ್ತಲೇ ಇಲ್ಲ. ಅವರ ಆಟ ಯಾರಿಗೂ ಕಾಣಿಸುತ್ತಾ ಇಲ್ಲ. ಈ ವಿಷಯ ನಾಮಿನೇಷನ್​​ನಲ್ಲಿ ಚರ್ಚೆ ಆಗುವಂತಹ ವಿಷಯವಾಗಿತ್ತು. ಧನುಷ್ ಅವರನ್ನು ಹೊರತುಪಡಿಸಿ ಯಶಸ್ ಹೆಸರನ್ನು ಮತ್ಯಾರೂ ತೆಗೆದುಕೊಳ್ಳಲೇ ಇಲ್ಲ. ಆಸಿಯಾ ಫಿರ್ದೋಸ್ ಅವರು ಗಗನ್ ಹೆಸರನ್ನು ನಾಮಿನೇಷನ್​ಗೆ ತೆಗೆದುಕೊಂಡರು. ಆ ಬಳಿಕ ಬಂದ ಗಗನ್ ಅವರು ಆಸಿಯಾ ಹೆಸರನ್ನು ತೆಗೆದುಕೊಂಡರು. ಸೌಂದರ್ಯಾ ಅವರು ಮಂಜು ಹೆಸರನ್ನು ತೆಗೆದುಕೊಂಡರೆ, ಇದಕ್ಕೆ ಪ್ರತಿಯಾಗಿ ಮಂಜು ಅವರು ಸೌಂದರ್ಯಾ ಹೆಸರನ್ನು ಆಯ್ಕೆ ಮಾಡಿದರು. ಇದು ನಾಮಿನೇಷನ್​ ಪ್ರಕ್ರಿಯೆ ಉದ್ದಕ್ಕೂ ನಡೆದೇ ಇತ್ತು.

ಇದನ್ನೂ ಓದಿ: ಬಿಗ್ ಬಾಸ್​​ನಲ್ಲಿ ಹೆಚ್ಚು ಸದ್ದು ಮಾಡಲೇ ಇಲ್ಲ ಬಳೆ ವಿವಾದ; ಮಹಿಳಾ ಸ್ಪರ್ಧಿಗಳಿಗೆ ತರಾಟೆ ಫಿಕ್ಸ್?

ಬಿಗ್ ಬಾಸ್​ನ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಇದೇ ನಡೆಯಿತು. ಯಾರು ಅಸಮರ್ಥರೋ ಅವರ ಹೆಸರನ್ನು ನಾಮಿನೇಟ್ ಮಾಡೋದು ಬಿಟ್ಟು, ವೈಯಕ್ತಿಕ ದ್ವೇಷಕ್ಕೆ ಸರಿ ಹೊಂದುವವರನ್ನು ನಾಮಿನೇಟ್ ಮಾಡುತ್ತಾ ಬಂದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳಬೇಕಿದೆ. ನಾಮಿನೇಷನ್ ಪ್ರಕ್ರಿಯೆ ಹೇಗೆ ನಡೆಸಬೇಕು ಎಂಬುದನ್ನು ತಿದ್ದಿ ಹೇಳುವ ಅಗತ್ಯವಿದೆ. ಈ ವಾರ ಈಗಾಗಲೇ ಓಂ ಪ್ರಕಾಶ್ ರಾವ್ ಹೊರ ಹೋಗಿರುವುದರಿಂದ ಎಲಿಮಿನೇಷನ್ ನಡೆಯುತ್ತದೆಯೋ ಅಥವಾ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಈವರೆಗೆ ವೋಟಿಂಗ್ ಲೈನ್ ಓಪನ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us