ಬಿಗ್ ಬಾಸ್ ಕನ್ನಡ ಸೀಸನ್ 13: ಅತಿಯಾಗಿ ಮಾತಾಡಿದ ಮಂಜನಿಗೆ ಬುದ್ಧಿ ಕಲಿಸಿದ ಮನೆ ಮಂದಿ

ಈ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಅದರಲ್ಲಿ ಮಂಜನೇ ಹೊರಗೆ ಹೋಗಬೇಕು ಎಂದು ಬಹುತೇಕರು ಬಯಸಿದ್ದಾರೆ. ಆದ್ದರಿಂದ ಅವರನ್ನು ಟಾಸ್ಕ್​ನಿಂದ ಹೊರಗೆ ಇಟ್ಟಿದ್ದಾರೆ. ಮಂಜನ ಮಾತುಗಳು ಸರಿಯಿಲ್ಲ ಎಂಬ ಕಾರಣವನ್ನೇ ಎಲ್ಲರೂ ಪ್ರಮುಖವಾಗಿ ನೀಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 13: ಅತಿಯಾಗಿ ಮಾತಾಡಿದ ಮಂಜನಿಗೆ ಬುದ್ಧಿ ಕಲಿಸಿದ ಮನೆ ಮಂದಿ
Manja
Image Credit source: Colors Kannada

Updated on: Sep 21, 2026 | 11:01 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಮಂಜ ಮಾತನಾಡುವ ರೀತಿ ಬಗ್ಗೆ ಹಲವರಿಗೆ ಅಸಮಾಧಾನ ಇದೆ. ಇದೇ ವಿಚಾರವನ್ನು ಇಟ್ಟುಕೊಂಡು ಅವರನ್ನು ನಾಮಿನೇಟ್ ಮಾಡಲಾಗಿದೆ. ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇರಲಿದೆ. ಅದರಿಂದ ಪಾರಾಗಲು ಟಾಸ್ಕ್ ನೀಡಲಾಗುತ್ತದೆ. ಆದರೆ ಒಬ್ಬರನ್ನು ಈ ಟಾಸ್ಕ್​ನಿಂದ ಹೊರಗೆ ಇರಬಹುದು. ಬಿಗ್ ಬಾಸ್ ಮನೆಯ ಬಹುತೇಕ ಸದಸ್ಯರು ಮಂಜ ಅವರನ್ನು ಟಾಸ್ಕ್​ನಿಂದ ಹೊರಗೆ ಇಟ್ಟಿದ್ದಾರೆ. ಅದಕ್ಕೆ ಅವರು ಖಡಕ್ ಕಾರಣಗಳನ್ನು ನೀಡಿದ್ದಾರೆ.

‘ಮಂಜನ ಪದ ಬಳಕೆಯಿಂದ ಮನೆಗೆ ತೊಂದರೆ ಆಗುತ್ತಿದೆ. ಭಾಷೆ ಸರಿಯಾಗಿ ಉಪಯೋಗಿಸಬೇಕು. ಬೇರೆಯವರಿಗೆ ನೋವಾಗದಂತೆ ನಡೆದುಕೊಳ್ಳಬೇಕು. ಎಲ್ಲರಿಗೂ ಮರ್ಯಾದೆ ಕೊಟ್ಟು ಮರ್ಯಾದೆ ತೆಗೆದುಕೊಳ್ಳಬೇಕು’ ಎಂದು ಗಗನ್ ಚಿನ್ನಪ್ಪ ಅವರು ಹೇಳಿದ್ದಾರೆ. ‘ಇನ್ನೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಮಂಜ ಮಾತನಾಡುತ್ತಾರೆ. ಎಷ್ಟೇ ಅವಕಾಶ ಕೊಟ್ಟರೂ ಪದೇ ಪದೇ ತಪ್ಪು ಮಾಡುತ್ತಾರೆ. ಎಲ್ಲರಿಗೂ ನೋವುಂಟು ಮಾಡುತ್ತಾರೆ. ಇವರಿಗೆ ಬಿಗ್ ಬಾಸ್ ಮನೆಯಲ್ಲಿ ಇರುವ ಅರ್ಹತೆ ಇಲ್ಲ’ ಎಂದು ಧನುಷ್ ಹೇಳಿದ್ದಾರೆ.

‘ಬೇರೆಯವರ ಕ್ಯಾರೆಕ್ಟರ್ ಬಗ್ಗೆ ಮಂಜ ಮಾತಾಡುತ್ತಾರೆ. ಮಹಾಕವಿ ಅಂತ ಹೆಸರು ಇಟ್ಟುಕೊಂಡಿದ್ದಾರೆ. ಆ ಹೆಸರಿಗೆ ಅವರು ಅರ್ಹರಲ್ಲ. ನಮ್ಮ ಜೊತೆ ಇರಲು ಅವರಿಗೆ ಅರ್ಹತೆ ಇಲ್ಲ’ ಎಂದು ಆಸಿಯಾ ಅವರು ಕಾರಣ ಕೊಟ್ಟಿದ್ದಾರೆ. ‘ಸುದೀಪ್ ಅವರು ಹೊಸ ಅವಕಾಶ ಕೊಟ್ಟ ಬಳಿಕವೂ ಸಂಗೀತಾ ಜೊತೆ ಮಂಜ ಮಾತನಾಡಿ ರೀತಿ ಸರಿ ಎನಿಸಲಿಲ್ಲ’ ಎಂದು ಸೌಂದರ್ಯಾ ಅವರು ಹೇಳಿದ್ದಾರೆ.

‘ಮಂಜನಿಗೆ ಇನ್ನೊಬ್ಬರ ವ್ಯಕ್ತಿತ್ವದ ಹರಣ ಮಾಡುವುದು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಬದಲಾಗುತ್ತಾರೆ ಅಂತ ಅಂದುಕೊಂಡಿದ್ದೆ. ಆದರೆ ಅವರು ಬದಲಾಗಿಲ್ಲ. ಪರ್ಸನಲ್ ಅಟ್ಯಾಕ್ ಮಾಡುತ್ತಾರೆ’ ಎಂದು ಕಾವ್ಯಾ ಗೌಡ ಅವರು ಹೇಳಿದ್ದಾರೆ. ತಾಂಡವ್ ರಾಮ್ ಕೂಡ ಮಂಜನ ವರ್ತನೆಗಳನ್ನು ಖಂಡಿಸುವ ಮೂಲಕ ಅವರನ್ನು ಟಾಸ್ಕ್​ನಿಂದ ಹೊರಗೆ ಇಟ್ಟಿದ್ದಾರೆ.

ಇದನ್ನೂ ಓದಿ: ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ‘ಬಿಗ್ ಬಾಸ್ ಕನ್ನಡ 13’ ಶೋ ಸ್ಪರ್ಧಿಗಳು

‘ಒಬ್ಬರ ಸಾಧನೆಯನ್ನು ಮಂಜ ಕಾಲಿನಲ್ಲಿ ಹಾಕಿ ತುಳಿಯುತ್ತಾರೆ. ಇನ್ನೊಬ್ಬರ ಮೇಕಪ್ ಬಗ್ಗೆ ಮಾತಾಡ್ತಾರೆ. ಆದರೆ ಅವರ ಮನಸ್ಸಿಗೆ ಮೇಕಪ್ ಬೇಕಾಗಿದೆ. ಬರೀ ಸಿಗರೇಟ್​ ಸಲುವಾಗಿ ಇಲ್ಲಿಗೆ ಬಂದಿದ್ದಾರೆ. ಎಲ್ಲರಿಗೂ ಅವರು ಕೇಡು ಬಯಸುತ್ತಿದ್ದಾರೆ. ಇಲ್ಲಿ ಇರುವ ಅರ್ಹತೆ ಅವರಿಗೆ ಇಲ್ಲ’ ಎಂದು ಕಿರಣ್ ಶಾಸ್ತ್ರಿ ಅವರು ಹೇಳಿದ್ದಾರೆ. ‘ಮಂಜನಲ್ಲಿ ಬದಲಾವಣೆ ನಿರೀಕ್ಷಿಸಿದ್ದೆ. ಆದರೆ ಅವರು ಬದಲಾಗಿಲ್ಲ’ ಎಂದು ಸಂಗೀತಾ ಭಟ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us