ನಿಧಾನಕ್ಕೆ ಚಾರ್ಜ್​ ಆಗ್ತಿದ್ದಾರೆ ಸೌಂದರ್ಯಾ; ಫುಲ್ ಪ್ಯಾಕೇಜ್ ಸಿಗೋದು ಯಾವಾಗ?

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸೌಂದರ್ಯಾ ಶೆಟ್ಟಿ ಆರಂಭದಲ್ಲಿ ಸೈಲೆಂಟ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಈಗ ಅವರು ನಿಧಾನವಾಗಿ ತಮ್ಮ ಪವರ್ ತೋರಿಸಲು ಶುರು ಮಾಡಿದ್ದಾರೆ. ಟಾಸ್ಕ್ ವೇಳೆ ಸುಳ್ಳು ಕಣ್ಣೀರು ಹಾಕಿ ತಮಾಷೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದು, ವೀಕ್ಷಕರಿಗೆ ಮತ್ತಷ್ಟು ಮನರಂಜನೆ ಸಿಗುವ ನಿರೀಕ್ಷೆ ಮೂಡಿದೆ.

ನಿಧಾನಕ್ಕೆ ಚಾರ್ಜ್​ ಆಗ್ತಿದ್ದಾರೆ ಸೌಂದರ್ಯಾ; ಫುಲ್ ಪ್ಯಾಕೇಜ್ ಸಿಗೋದು ಯಾವಾಗ?
ಸೌಂದರ್ಯಾ ಶೆಟ್ಟಿ

Updated on: Sep 23, 2026 | 7:27 AM

ಮುಖ್ಯಾಂಶಗಳು

  • ಸುಳ್ಳು ಕಣ್ಣೀರು, ಏಕಾಏಕಿ ನಗು
  • ನಿಧಾನವಾಗಿ ಚಾರ್ಜ್ ಆಗ್ತಿದ್ದಾರೆ ಸೌಂದರ್ಯ
  • ಶೀಘ್ರದಲ್ಲೇ ಸಿಗುತ್ತಾ ಫುಲ್ ಪ್ಯಾಕೇಜ್?

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಗೆ ಸೌಂದರ್ಯಾ ಶೆಟ್ಟಿ ಅವರು ಎಂಟ್ರಿ ಕೊಟ್ಟಾಗ ಸಾಕಷ್ಟು ಕುತೂಹಲ ಸೃಷ್ಟಿ ಆಗಿತ್ತು. ಸ್ಪ್ಲಿಟ್ಸ್ ವಿಲ್ಲಾದಲ್ಲಿ ಸ್ಪರ್ಧಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಅವರು, ಬಿಗ್ ಬಾಸ್ ಮನೆಯಲ್ಲಿ ಹಂಗಾಮ ಸೃಷ್ಟಿ ಮಾಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಯೇ ಇಲ್ಲ. ಅವರು ಅನೇಕ ಸಂದರ್ಭದಲ್ಲಿ ಡಲ್ ಆಗಿಯೇ ಕಾಣಿಸಿಕೊಂಡರು. ಈಗ ಅವರು ನಿಧಾನವಾಗಿ ಚಾರ್ಜ್ ಆಗುತ್ತಿದ್ದಾರೆ. ಫುಲ್ ಪ್ಯಾಕೇಜ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಹಂಗಿಸೋದ್ರಲ್ಲಿ ಸೌಂದರ್ಯಾ ತುಂಬಾನೇ ಫೇಮಸ್. ಈ ಕಾರಣದಿಂದಲೇ ಅವರು ‘ಸ್ಪ್ಲಿಟ್ಸ್ ವಿಲ್ಲಾ’ದಲ್ಲಿ ಸುದ್ದಿ ಆಗಿದ್ದರು. ಆದರೆ, ಬಿಗ್ ಬಾಸ್ ಮನೆಗೆ ಬಂದಾಗ ಇವರಲ್ಲಿ ಆ ಗುಣ ಇದೆ ಎಂದು ಹೇಳುವುದೇ ಕಷ್ಟ ಆಯಿತು. ಅವರಲ್ಲಿ ಅಷ್ಟು ಚಾರ್ಮ್ ಕಾಣಿಸಲೇ ಇಲ್ಲ. ಹಲವು ಸಂದರ್ಭದಲ್ಲಿ ಅವರು ಕಣ್ಣೀರು ಹಾಕಿದ ಉದಾಹರಣೆ ಕೂಡ ಇದೆ. ಈಗ ಸೌಂದರ್ಯಾ ಅವರು ಅಸಲಿ ಮುಖ ತೋರಿಸೋಕೆ ಆರಂಭಿಸಿದ್ದಾರೆ.

ಟಾಸ್ಕ್​ನಲ್ಲಿ ಕಾವ್ಯಾ ಅವರು ವೈಷ್ಣವಿ ಗೌಡ ಅವರನ್ನು ಹೊರಕ್ಕೆ ಇಟ್ಟರು. ಈ ರೀತಿ ಹೊರಕ್ಕೆ ಇಟ್ಟಾಗ ಸೌಂದರ್ಯಾ ಕುಹಕವಾಗಿ ನಕ್ಕರು. ಅವರು ಎಷ್ಟೇ ಗಂಭೀರವಾಗಿ ಇರೋಕೆ ಪ್ರಯತ್ನಿಸಿದರೂ ಅದು ಸಾಧ್ಯವಾಗಲೇ ಇಲ್ಲ. ಆ ಬಳಿಕ ಸೌಂದರ್ಯಾ ತೊಡೆಗೆ ಮುಖವನ್ನು ಒತ್ತಿ ಅಳೋಕೆ ಆರಂಭಿಸಿದರು. ಅವರು ನಡೆದುಕೊಳ್ಳುತ್ತಿರುವುದು ಯಾವ ರೀತಿಯಲ್ಲಿ ಇತ್ತು ಎಂದರೆ, ನಿಜಕ್ಕೂ ಅವರು ಕಣ್ಣೀರು ಹಾಕುತ್ತಿದ್ದಾರೆ ಎಂದು ಅನಿಸಲು ಪ್ರಾರಂಭವಾಯಿತು.

ಇದನ್ನೂ ಓದಿ: ‘ಇದು ಸ್ಪ್ಲಿಟ್ಸ್‌ವಿಲ್ಲಾ ಅಲ್ಲ, ಬಿಗ್ ಬಾಸ್’: ಸೌಂದರ್ಯಾಗೆ ಎಚ್ಚರಿಕೆ ನೀಡಿದ ಆಸಿಯಾ

ಸೌಂದರ್ಯಾ ಪಕ್ಕದಲ್ಲಿ ಕುಳಿತವರು, ‘ನೀವು ನಿಜಕ್ಕೂ ಅಳುತ್ತಿದ್ದೀರಾ’ ಎಂದು ಕೇಳಿದರು. ಆಗ ಸೌಂದರ್ಯಾ ಏಕಾಏಕಿ ಎದ್ದು ನಿಂತು ನಗಲು ಪ್ರಾರಂಭಿಸಿದರು. ಅವರ ಈ ನಡೆ ಅನೇಕರಿಗೆ ನಗು ತರಿಸಿದೆ. ಸೌಂದರ್ಯಾ ಅವರು ನಿಧಾನಕ್ಕೆ ಚಾರ್ಜ್ ಆಗುತ್ತಿದ್ದಾರೆ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಒಂದೊಮ್ಮೆ ಅವರು ಪೂರ್ತಿಯಾಗಿ ಚಾರ್ಜ್ ಆದರೆ, ವೀಕ್ಷಕರಿಗೆ ಮತ್ತಷ್ಟು ಫನ್ ಸಿಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us