
ಅಶ್ವಿನಿ ಗೌಡ (Ashwini Gowda) ಅವರು ಬಿಗ್ ಬಾಸ್ ಮನೆಯಲ್ಲಿ ಈಗ ವುಮನ್ ಕಾರ್ಡ್ ಪ್ಲೇ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಹೆಣ್ಣು ಮಕ್ಕಳಿಗೆ ಯಾರೂ ಗೌರವ ನೀಡುತ್ತಿಲ್ಲ ಎಂದು ರಂಪಾಟ ಮಾಡುತ್ತಿರೋ ಅವರು ಕಣ್ಣೀರು ಹಾಕಿದ್ದಾರೆ. ಅಲ್ಲದೆ, ಉಪವಾಸ ಸತ್ಯಾಗ್ರಹ ಕೂಡ ಆರಂಭಿಸಿದ್ದಾರೆ. ಎಲ್ಲರಿಂದಲೂ ಗೌರವ ನಿರೀಕ್ಷೆ ಮಾಡುವ ಅವರು, ಹಲವು ಬಾರಿ ತಾವೇ ಎಲ್ಲೆ ಮೀರುತ್ತಾರೆ. ಇದು ಚರ್ಚೆಗೆ ಕಾರಣ ಆಗಿದೆ.
ಅಶ್ವಿನಿ ಅವರು ತಾವು ಕುಡಿದ ಕಪ್ನ ತೊಳೆಯದೆ ಇಟ್ಟಿದ್ದರು. ಇದನ್ನು ಕ್ಲೀನ್ ಮಾಡುವಂತೆ ಅಶ್ವಿನಿಗೆ ರಘು ಅವರು ಸೂಚಿಸಿದರು. ಆದರೆ, ಇದನ್ನು ಅಶ್ವಿನಿ ಗೌಡ ಅವರು ಒಪ್ಪಲಿಲ್ಲ. ‘ಬೆನ್ನು ನೋವು ಇದೆ 10 ನಿಮಿಷ ಬಿಟ್ಟು ಬರ್ತೀನಿ’ ಎಂದರು. ಈ ವಿಚಾರಕ್ಕೆ ಇಬ್ಬರ ಮಧ್ಯೆ ಕಿರಿಕ್ ಆಗಿದೆ. ಈ ಸಂದರ್ಭದಲ್ಲಿ ರಘು ಅವರು ಏಕವಚನ ಬಳಕೆ ಮಾಡಿದರು. ಇದರಿಂದ ಅಶ್ವಿನಿ ಕುಪಿತಗೊಂಡರು.
ಅಶ್ವಿನಿ ಹಾಗೂ ರಘು ಮಧ್ಯೆ ವಾಗ್ವಾದ ಮಿತಮೀರಿತು. ಅಶ್ವಿನಿ ಅವರು ತಮಗೆ ಅವಮಾನ ಆಗಿದೆ ಎಂದು ಆರೋಪಿಸಿದರು. ‘ಹೆಣ್ಣುಮಕ್ಕಳಿಗೆ ಗೌರವ ನೀಡ್ತಾ ಇಲ್ಲ. ಬಿಗ್ ಬಾಸ್ ಮಧ್ಯ ಪ್ರವೇಶ ಮಾಡಬೇಕು. ಇಲ್ಲವೆ ನನ್ನನ್ನು ಹೊರಕ್ಕೆ ಕಳುಹಿಸಿ’ ಎಂದು ಅಶ್ವಿನಿ ಅವರು ಕೋರಿದರು.
Imagine if any male contestant had said the same thing what Ashwini said.
1. ನಿನಗೆ ಪಾಠ ಕಲಿಸ್ತೀನಿ
2. ನಾಲಿಗೆ ಗೆ ಖಾರ ಹಾಕ್ಕೊಂಡಿದ್ಯ
3. ಯಾವನೋ ನೀನು
4. You bloody man
5. ನಿಮ್ ಮನೇಲಿ ಇಟ್ಕೋ, ನಿಮ್ ಮನೆ ಹೆಂಗಸರಿಗೆ ಹೇಳ್ಕೋ#BBK12 pic.twitter.com/aFHeEjBWrm— ಅಲ್ಪಸಂಖ್ಯಾತ (@alpasankhyata) November 20, 2025
“ಹುಡುಗ ಆಗಿರಲಿ ಹುಡುಗಿ ಆಗಿರಲಿ — ಗೇಮ್ನಲ್ಲಿ ಎಲ್ಲರೂ ಸಮಾನ.
ಆದ್ರೆ ಅಶ್ವಿನಿ Women Card ಬಳಸ್ತಾ ಇದಾಳೆ ಒಂದು ಹುಡುಗಿಗೆ ಇತರ ಹೇಳ್ತ್ಯಾ ಅಂತ
ಗೇಮ್ ಅಂದ್ರೆ ಸಮಾನವಾಗಿ ಆಡೋದು ಕಾರ್ಡ್ ಬಳಸೋದು ಅಲ್ಲ #bbk12 pic.twitter.com/n48aVu2aMA— Sampath (@Sampath19039707) November 20, 2025
Ee Ashwini bereyavarige S Category, Amavasye, Cartoon, Free product, Yogyate irbeku, Hogale baarale anno ning yaak mariyadi kodbeku?
Neenen melinda ild bandidya? Battade baayige…#BBK12 #BBKSeason12 pic.twitter.com/4xof3vSLE8
— Ⓤನೌನ್_ಮಂದಿ💛❤️ (@unknown_trio) November 20, 2025
Ee Ashwini bereyavarige S Category, Amavasye, Cartoon, Free product, Yogyate irbeku, Hogale baarale anno ning yaak mariyadi kodbeku?
Neenen melinda ild bandidya? Battade baayige…#BBK12 #BBKSeason12 pic.twitter.com/4xof3vSLE8
— Ⓤನೌನ್_ಮಂದಿ💛❤️ (@unknown_trio) November 20, 2025
ಅಶ್ವಿನಿ ಅವರು ವುಮನ್ ಕಾರ್ಡ್ ಪ್ಲೇ ಮಾಡಿದಂತೆ ಅನೇಕರಿಗೆ ಅನಿಸಿದೆ. ಎಲ್ಲರಿಂದಲೂ ಗೌರವ ನಿರೀಕ್ಷೆ ಮಾಡುವ ಅವರು ಬಹುತೇಕ ಸಂದರ್ಭಗಳಲ್ಲಿ ಏಕವಚನ ಬಳಕೆ ಮಾಡುತ್ತಾರೆ. ‘ನನ್ನನ್ನು ಏಕವಚನದಲ್ಲಿ ಕರೆಯೋಕೆ ನೀನ್ಯಾರೋ’ ಎಂದು ಅಶ್ವಿನಿ ಪ್ರಶ್ನೆ ಮಾಡುತ್ತಾರೆ. ಈ ಮೊದಲು ಈ ಬಗ್ಗೆ ಮಾತನಾಡಿದ್ದ ಸುದೀಪ್, ‘ನೀವು ಗೌರವ ನೀಡಿದರಷ್ಟೇ ಮರಳಿ ಗೌರವ ಸಿಗೋದು’ ಎಂದಿದ್ದರು.
ಇದನ್ನೂ ಓದಿ: ಅವಮಾನ ಮಾಡಿದ್ದಕ್ಕೆ ಪ್ರತಿಯಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಶ್ವಿನಿ ಗೌಡ
ಅಶ್ವಿನಿ ಗೌಡ ಅವರು ಈ ಮೊದಲು ರಕ್ಷಿತಾಗೆ ಸಾಕಷ್ಟು ಕಿರುಕುಳ ನೀಡಿದ್ದರು. ಅವರನ್ನು ಇತ್ತೀಚೆಗೆ ಪರೋಕ್ಷವಾಗಿ ‘ಅಮವಾಸ್ಯೆ’ ಎಂದು ಕರೆದಿದ್ದರು. ಇದಲ್ಲದೆ, ಕಾರ್ಟೂನ್, ಫ್ರೀ ಪ್ರಾಡಕ್ಟ್, ಯೋಗ್ಯತೆ ಇರಬೇಕು, ಎಸ್ ಕ್ಯಾಟಗರಿ ಎಂದೆಲ್ಲ ಪದ ಬಳಕೆ ಅವರಿಂದ ಆಗಿದೆ. ಅವರೇ ಅಷ್ಟು ಕೆಳಮಟ್ಟಕ್ಕೆ ಇಳಿಯುವವರು ಬೇರೆಯವರಿಂದ ಗೌರವ ನಿರೀಕ್ಷೆ ಮಾಡಲು ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.