ಎಲ್ಲವನ್ನೂ ಕಳೆದುಕೊಂಡ ಭವ್ಯಾ ಗೌಡ; ಅಳುವಾಗ ಬಿಗಿದಪ್ಪಿ ಸಮಾಧಾನ ಮಾಡಿದ ಮೋಕ್ಷಿತಾ

ಬಿಗ್ ಬಾಸ್ ಕನ್ನಡದಲ್ಲಿ ಭವ್ಯಾ ಗೌಡ ಮತ್ತು ಮೋಕ್ಷಿತಾ ಪೈ ಅವರ ನಡುವಿನ ಸಂಬಂಧದಲ್ಲಿ ಏರುಪೇರುಗಳಿವೆ. ಮೊದಲು ಪರಸ್ಪರ ವೈಮನಸ್ಸು ಹೊಂದಿದ್ದ ಇವರಿಬ್ಬರು, ಭವ್ಯಾ ಅವರಿಗೆ ಕಷ್ಟಕಾಲದಲ್ಲಿ ಮೋಕ್ಷಿತಾ ಸಾಂತ್ವನ ನೀಡಿದ್ದಾರೆ.

ಎಲ್ಲವನ್ನೂ ಕಳೆದುಕೊಂಡ ಭವ್ಯಾ ಗೌಡ; ಅಳುವಾಗ ಬಿಗಿದಪ್ಪಿ ಸಮಾಧಾನ ಮಾಡಿದ ಮೋಕ್ಷಿತಾ
ಭವ್ಯಾ

Updated on: Nov 11, 2024 | 7:28 AM

ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ ಹಾಗೂ ಮೋಕ್ಷಿತಾ ಪೈ ಮಧ್ಯೆ ಯಾವುದೂ ಸರಿ ಇರಲಿಲ್ಲ. ಅವರು ನಾಮಕಾವಸ್ತೆಗೆ ಮಾತ್ರ ಎದುರಿನಿಂದ ನಗುತ್ತಾರೆ. ಆದರೆ, ಹಿಂದಿನಿಂದ ಒಬ್ಬರಿಗೊಬ್ಬರು ಬೈದು ಕೊಳ್ಳುತ್ತಾರೆ. ಆದರೆ, ಭವ್ಯಾ ನೋವಿನಲ್ಲಿ ಇರುವಾಗ ಮೋಕ್ಷಿತಾ ಹೆಗಲುಕೊಟ್ಟಿದ್ದಾರೆ. ಅವರು ಭವ್ಯಾನ ಬಿಗಿದಪ್ಪಿ ಸಮಾಧಾನ ಮಾಡಿದ್ದಾರೆ. ಭಾನುವಾರದ (ನವೆಂಬರ್ 11) ಎಪಿಸೋಡ್​ನಲ್ಲಿ ಇದು ಹೈಲೈಟ್ ಆಗಿದೆ.

ಭವ್ಯಾ ಗೌಡ ಅವರಿಗೆ ಕಳೆದ ವಾರ ಸಾಕಷ್ಟು ಹಿನ್ನಡೆಗಳು ಆದವು. ಕ್ಯಾಪ್ಟನ್ಸಿ ರೇಸ್​ನಿಂದ ಅವರು ಔಟ್ ಆದರು. ಇದಕ್ಕೆ ಮಂಜು ಅವರು ಮಾಡಿದ ಕುತಂತ್ರವೇ ಕಾರಣ. ಇದಕ್ಕೆ ಅವರು ಸಾಕಷ್ಟು ಬೇಸರಗೊಂಡರು. ಆ ಬಳಿಕ ಕಿಚ್ಚನ ಚಪ್ಪಾಳೆ ಕೂಡ ಮಿಸ್ ಆಯಿತು. ಇದಕ್ಕೆ ಭವ್ಯಾ ಗೌಡ ಅವರು ಸಾಕಷ್ಟು ನೊಂದುಕೊಂಡರು.

ಭವ್ಯಾ ಅವರು ಉತ್ತಮವಾಗಿ ಆಡಿದ್ದರು ನಿಜ. ಆದರೆ, ಪ್ರಶ್ನೆ ಕೇಳುವ ಜಾಗದಲ್ಲಿ ಮೌನವಾಗಿದ್ದರು. ಇದಕ್ಕೆ ಸುದೀಪ್ ಅಸಮಾಧಾನ ಹೊರಹಾಕಿದರು. ‘ಒಂದೇ ಒಂದು ತಪ್ಪಿನಿಂದ ನಿಮಗೆ ಕಿಚ್ಚನ ಚಪ್ಪಾಳೆ ಮಿಸ್ ಆಗಿದೆ’ ಎಂದು ಹೇಳುತ್ತಿದ್ದಂತೆ ಭವ್ಯಾ ಅವರು ಕಣ್ಣೀರು ಹಾಕಿದರು. ಎಪಿಸೋಡ್ ಮುಗಿದ ಬಳಿಕವೂ ಅವರು ಅಳುತ್ತಲೇ ಇದ್ದರು.

‘ಮನೆಯ ಹೊರಗೂ ಹೀಗೆ ಆಗುತ್ತಿತ್ತು. ಕಾರು ತೆಗೆದುಕೊಳ್ಳಬೇಕು ಎಂದಾಗ ಮನೆಯಲ್ಲಿ ಏನೋ ಸಮಸ್ಯೆ ಆಯಿತು. ಈ ಕಾರಣಕ್ಕೆ ಕಾರು ತೆಗೆದುಕೊಳ್ಳೋಕೆ ಆಗಿರಲಿಲ್ಲ. ಇಲ್ಲಿಯೂ ಹಾಗೆಯೇ ಆಗುತ್ತಿದೆ’ ಎಂದು ಅಳಲು ಆರಂಭಿಸಿದರು. ಆಗ ಅಲ್ಲಿಯೇ ಇದ್ದ ಮೋಕ್ಷಿತಾ ಅವರು ಭವ್ಯಾ ಅವರನ್ನು ಹಗ್​ ಮಾಡಿ ಸಮಾಧಾನ ಮಾಡಿದ್ದಾರೆ. ಈ ಬಗ್ಗೆ ಮೆಚ್ಚುಗೆ ಸಿಕ್ಕಿದೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಎಲಿಮಿನೇಷನ್: ಅಣ್ಣ-ತಂಗಿ ಜಿಂಕೆ ಇದನ್ನು ಊಹಿಸಿರಲಿಲ್ಲ

ಭವ್ಯಾ ಹಾಗೂ ಮೋಕ್ಷಿತಾ ಈ ಮೊದಲು ಮಾತಿನ ಫೈಟ್ ಮಾಡಿಕೊಂಡಿದ್ದು ಇದೆ. ಹಿಂದಿನಿಂದ ಮಾತನಾಡಿಕೊಂಡಿದ್ದೂ ಇದೆ. ಆದರೆ, ಇನ್ಮೇಲೆ ಇವರ ಮಧ್ಯೆ ಗೆಳೆತನ ಬೆಳೆಯುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.